ಆನೆಗಳಿಗೂ ಯೋಗ ಕ್ಲಾಸ್‌! – ಮನುಷ್ಯರನ್ನೇ ನಾಚಿಸುವಂತಿದೆ ಗಜಪಡೆಯ ಯೋಗಾಭ್ಯಾಸ..

ಆನೆಗಳಿಗೂ ಯೋಗ ಕ್ಲಾಸ್‌! – ಮನುಷ್ಯರನ್ನೇ ನಾಚಿಸುವಂತಿದೆ ಗಜಪಡೆಯ ಯೋಗಾಭ್ಯಾಸ..

ಮನಸ್ಸು ಮತ್ತು ದೇಹವನ್ನು ಸದೃಢವಾಗಿರಿಸಲು ಯೋಗ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ಅನೇಕರು ಪ್ರತಿನಿತ್ಯ ಯೋಗ ಮಾಡುತ್ತಾರೆ. ಈ ವೇಳೆ ಮನೆಯ ಸಾಕು ಪ್ರಾಣಿಗಳು ಮನೆ ಮಾಲೀಕನನ್ನು ಅನುಸರಿಸುತ್ತವೆ. ಇಂತಹ ದೃಶ್ಯಗಳನ್ನು ನಾವು ಸೋಶಿಯಲ್‌ ಮೀಡಿಯಾದಲ್ಲಿ ನೋಡಿರುತ್ತೇವೆ. ಎಂದಾದರೂ ಆನೆಗಳು ಯೋಗ ಮಾಡುವುದನ್ನು ಕೇಳಿದ್ದೀರಾ? ಅರೇ.. ದೈತ್ಯ ಆಕಾರದ ಆನೆಗಳು ಯೋಗ ಹೇಗೆ ಮಾಡುತ್ತವೆ ಎಂಬ ಪ್ರಶ್ನೆ ಮೂಡಬಹುದು. ಇಲ್ಲೊಂದು ಮೃಗಾಲಯದಲ್ಲಿ ಆನೆಗಳಿಗೆ ಯೋಗ ತರಬೇತಿ ನೀಡಲಾಗುತ್ತಿದೆ!

ಅಮೇರಿಕದ ಹೂಸ್ಟನ್ ಮೃಗಾಲಯದಲ್ಲಿ ಆನೆಗಳ ಆರೋಗ್ಯ ಕಾಪಾಡಲು ಯೋಗ ತರಬೇತಿ ನೀಡಲಾಗುತ್ತಿದೆ. ಆನೆಗಳ ಹಿಂಡುಗಳು ತಮ್ಮ ಗೈಡ್‌ ಹೇಳಿಕೊಟ್ಟಂತೆ ಪ್ರತಿನಿತ್ಯ ಯೋಗ ಮಾಡುತ್ತಿವೆ. ಆನೆಗಳು ಪ್ರತಿನಿತ್ಯ ಯೋಗಾಭ್ಯಾಸ ಮಾಡಲು ವೇಳಾಪಟ್ಟಿ ಮಾಡಲಾಗಿದೆ. ಪ್ರತಿಯೊಂದು ಆನೆಯು ತನ್ನದೇ ಆದ ವೈಯಕ್ತಿಕಗೊಳಿಸಿದ ದಿನಚರಿಯನ್ನು ಹೊಂದಿದೆ.

ಇದನ್ನೂ ಓದಿ: ವನ್ಯಜೀವಿಗಳ ಹೊಂದಾಣಿಕೆ ಪಾಠ – ಆನೆಗಳಿಗೆ ದಾರಿ ಬಿಟ್ಟುಕೊಟ್ಟ ಹುಲಿ

ಈ ಮೃಗಾಲಯದ ಟೆಸ್ ಎಂಬ 40 ವರ್ಷ ವಯಸ್ಸಿನ ಆನೆಯು ಹ್ಯಾಂಡ್‌ಸ್ಟ್ಯಾಂಡ್ ಮಾಡುತ್ತದೆ. ತನ್ನ 6,500-ಪೌಂಡ್ ದೇಹವನ್ನು ತನ್ನ ಮುಂಭಾಗದ ಎರಡು ಕಾಲುಗಳ ಮೇಲೆ ಎತ್ತುತ್ತದೆ ಎಂದು ಹೂಸ್ಟನ್ ಮೃಗಾಲಯದ ಆನೆ ವ್ಯವಸ್ಥಾಪಕ ಕ್ರಿಸ್ಟನ್ ವಿಂಡಲ್ ತಿಳಿಸಿದ್ದಾರೆ.

ಆನೆಗಳನ್ನು ಇಲ್ಲಿ ತುಂಬಾ ಕಾಳಜಿಯಿಂದ ನೋಡಿಕೊಳ್ಳಲಾಗುತ್ತದೆ. ಅವುಗಳ ಬೆಳವಣಿಗೆ ಜತೆಗೆ ಅವುಗಳ ಆರೋಗ್ಯವು ಕೂಡ ಅಗತ್ಯವಾಗಿರುತ್ತದೆ. ಯೋಗ ಮಾಡಿದ ಆನೆಗಳು ತುಂಬಾ ಮೃದು ಸ್ವಭಾವವನ್ನು ಹೊಂದಿದ್ದು, ಅವುಗಳು ದೇಹ ಆಕಾರಗಳು ಕೂಡ ಸುಂದರವಾಗಿರುತ್ತದೆ. ಅವುಗಳ ಚರ್ಮ ಕೂಡ ಸುಂದರವಾಗಿ ರೂಪುಗೊಂಡಿರುತ್ತದೆ. ಅವುಗಳ ಚಲವಲನಗಳ ಬಗ್ಗೆ ಗಮನಿಸಲಾಗುತ್ತದೆ ಎಂದು ಹೇಳಿದ್ದಾರೆ.

ಆನೆಗಳು ಹುಟ್ಟಿದ ಕೂಡಲೇ ತರಬೇತಿ ಪ್ರಾರಂಭವಾಗುತ್ತದೆ. ಅವುಗಳ ಸ್ಪರ್ಶ ಕೂಡ ಅಷ್ಟೇ ಸೂಕ್ತವಾಗಿರುತ್ತದೆ. ಇದನ್ನೂ ಆನೆಗಳು ಕೂಡ ಸ್ಪಷ್ಟವಾಗಿ ತಿಳಿದುಕೊಂಡಿರುತ್ತದೆ. ಆನೆಗಳು ಹುಟ್ಟಿದ ತಕ್ಷಣ ಅವುಗಳಿಗೆ ಸುಲಭದ ಯೋಗಗಳನ್ನು ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರತಿ ಸೆಷನ್ 30 ಸೆಕೆಂಡುಗಳಿಂದ ಐದು ನಿಮಿಷಗಳವರೆಗೆ ಇರುತ್ತದೆ. ಕೆಲವು ಹಿರಿಯ ಆನೆಗಳು ತಮ್ಮ ಕೀಲುಗಳನ್ನು ಸಡಿಲಗೊಳಿಸಲು ದಿನಕ್ಕೆ ಎರಡು ಅವಧಿಗಳನ್ನು ಮಾಡುತ್ತವೆ. ಯೋಗದ ನಂತರ ಆನೆಗಳಿಗೆ ಬಾಳೆಹಣ್ಣುಗಳು ಮತ್ತು ಬ್ರೆಡ್ ಚೂರುಗಳಂತಹ ವಿಶೇಷ ಸತ್ಕಾರಗಳನ್ನು ನೀಡಲಾಗುತ್ತದೆ. ಆನೆಗಳು ಯೋಗಗಳು ಅವುಗಳ ಕಾಲಿಗೆ ಮತ್ತು ದೇಹಕ್ಕೆ ಚಲನೆಗಳನ್ನು ನೀಡಲಾಗುತ್ತದೆ. ಆದರೆ ಅದನ್ನು ಕಾಡಿನಲ್ಲಿ ಪ್ರತಿದಿನ ಚಲನೆಗಳ ಮೂಲಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

suddiyaana