ಆಹಾ.. ನೀರಲ್ಲಿ ಆಡುವುದು ಮಜಾವೋ ಮಜಾ – ಬಿಸಿಲ ಬೇಗೆ ನಡುವೆ ತೊರೆಯಲ್ಲಿ ಗಜಪಡೆಯ ಮೋಜಿನಾಟ

ಸರಿಯಾಗಿ ಆಹಾರ ಸಿಗುತ್ತಿರಲಿಲ್ಲ. ದಾಹ ತಣಿಸೋಕೆ ನೀರು ಕೂಡ ಇರಲಿಲ್ಲ. ಬಿಸಿಲಿನ ಝಳಕ್ಕೆ ಗಜಪಡೆ ಹಿಡಿಶಾಪ ಹಾಕುತ್ತಿತ್ತು. ಕಾಡುಮೇಡು ತಿರುಗುತ್ತಾ ಓಡಾಡುತ್ತಿದ್ವು. ಆದರೆ ಮಳೆ ಬಂದಿದ್ದೇ ಬಂದಿದ್ದು. ನೀರಿನಲ್ಲಿ ಮಿಂದೇಳುತ್ತಾ ಮಸ್ತಿ ಮಾಡುತ್ತಿವೆ. ಅವುಗಳ ಆಟ, ತುಂಟಾಟ ನೋಡುಗರಿಗೆ ಖುಷಿ ಕೊಡುವಂತಿದೆ.
ಇದನ್ನೂ ಓದಿ :ಆರೋಪಿಯನ್ನ ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ದ ಪೊಲೀಸರು – ವೈದ್ಯೆಯನ್ನೇ ಇರಿದು ಕೊಂದ ಪಾಪಿ ಶಿಕ್ಷಕ!
ಬೇಸಿಗೆ ದಗೆ ನಡುವೆ ಆಗ್ಗಾಗ್ಗೆ ಮಳೆ ಬೀಳುತ್ತಿದ್ದು ಸ್ವಲ್ಪ ಕೂಲ್ ಕೂಲ್ ವಾತಾವರಣ ಇದೆ. ಬಿಸಿಲ ಬೇಗೆಗೆ ಮನುಷ್ಯರು ಮಾತ್ರವಲ್ಲದೇ ಪ್ರಾಣಿ ಸಾಮ್ರಾಜ್ಯವು ಕೂಡಾ ತತ್ತರಿಸಿ ಹೋಗಿದೆ. ಸ್ವಲ್ಪ ನೀರು ಸಿಕ್ಕರೆ ಸಾಕು ಆ ಪ್ರಾಣಿಗಳು ದೇಹವನ್ನು ತಂಪಾಗಿಸಲು ನೀರಿಗೆ ಮೈ ಒಡ್ಡುತ್ತವೆ. ಅದರಲ್ಲೂ ಆನೆಗಳಿಗೆ ನೀರಿನಲ್ಲಿ ಆಟವಾಡುವುದೆಂದರೆ ಇಷ್ಟ. ಎಲ್ಲೇ ನೀರು ಕಂಡರೂ ನೀರಿಗೆ ಇಳಿದು ಆಟವಾಡುತ್ತವೆ. ಇದೇ ರೀತಿ ತಮಿಳುನಾಡಿನ ಜಲಧಾರೆಯಲ್ಲಿ ಈ ಸುಡು ಬಿಸಿಲಿಗೆ ಆನೆಗಳ ಹಿಂಡೊಂದು ಸ್ನಾನ ಮಾಡುತ್ತಾ ನೀರಿನಲ್ಲಿ ಸುಂದರ ಕ್ಷಣಗಳನ್ನು ಆನಂದಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಈ ವೀಡಿಯೋಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ‘ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಆನೆಗಳು ಸ್ನಾನ ಮಾಡುತ್ತ ಆ ಕ್ಷಣವನ್ನು ಆನಂದಿಸುತ್ತಿವೆ. ಇತ್ತೀಚಿಗೆ ಸುರಿದ ಮಳೆಗೆ ಧನ್ಯವಾದ’ ಎಂಬ ಶೀರ್ಷಿಕೆಯಡಿಯಲ್ಲಿ ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
A beautiful family of elephants with sub adults and young calves enjoying their bath somewhere in Dharmapuri district in Tamil Nadu. Thanks to some recent rains, summer heat has come down as a blessing. Video shared #elephants #TNForest pic.twitter.com/DWYVmAHYYa
— Supriya Sahu IAS (@supriyasahuias) May 9, 2023
ಆನೆಗಳ ಗುಂಪೊಂದು ತೊರೆಯೊಂದರಲ್ಲಿ ಮುಳುಗಿ ಸ್ನಾನ ಮಾಡಿ, ಅತ್ತಿಂದಿತ್ತ ಓಡಾಡುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಅದರಲ್ಲೂ ಮರಿ ಆನೆಗಳು ನೀರಿನಲ್ಲಿ ಆಟವಾಡುವುದನ್ನು ಹೆಚ್ಚು ಸಂಭ್ರಮಿಸುತ್ತಿದ್ದವು. ಟ್ವಿಟರ್ನಲ್ಲಿ ವೈರಲ್ ಆಗಿರುವ ಈ ವೀಡಿಯೋ ಸಾವಿರಾರು ವೀಕ್ಷಣೆಗಳನ್ನು ಹಾಗೂ ಲೈಕ್ಸ್ ಪಡೆದುಕೊಂಡಿದೆ. ಮತ್ತು ಜಲರಾಶಿಯಲ್ಲಿ ಆನೆಗಳ ಹಿಂಡು ಆಟವಾಡುವುದನ್ನು ನೋಡಿ ಹಲವರು ವೀಡಿಯೋವನ್ನು ಮೆಚ್ಚಿಕೊಂಡಿದ್ದಾರೆ.