ಆನೆಗಳ ಕಾಟದಿಂದ ಮುಕ್ತಿ ಕೊಡಿಸಿ – ಸುಳ್ಳ, ಪುತ್ತೂರು ಭಾಗದ ರೈತರಿಂದ ಸರ್ಕಾರಕ್ಕೆ ಮನವಿ

ಆನೆಗಳ ಕಾಟದಿಂದ ಮುಕ್ತಿ ಕೊಡಿಸಿ – ಸುಳ್ಳ, ಪುತ್ತೂರು ಭಾಗದ ರೈತರಿಂದ ಸರ್ಕಾರಕ್ಕೆ ಮನವಿ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ಭಾಗದ ರೈತರು ತಾವು ಬೆಳೆದ ಬೆಳೆ ರಕ್ಷಿಸಿಕೊಳ್ಳಲು ಪರದಾಡುತ್ತಿದ್ದಾರೆ. ಆನೆಗಳು ಹಿಂಡು ಹಿಂಡಾಗಿ ಬಂದು ಕೃಷಿಕರಿಗೆ ಕಾಟ ಕೊಡುತ್ತಿವೆ. ಒಂದು ಕಡೆ ಬೆಳೆಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆ, ಮತ್ತೊಂದೆಡೆ ಕಾಡಾನೆಗಳು ಪ್ರಾಣಕ್ಕೆ ಕಂಟಕವಾಗುವ ಭಯ ಹೀಗಾಗಿ ಈ ಭಾಗದ ರೈತರು ಕಂಗಾಲಾಗಿ ಹೋಗಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ಒಂದೇ ಒಂದು ಮಗು ಇದ್ರೂ ಶಾಲೆ ಮುಚ್ಚಲ್ಲ! – ಶಿಕ್ಷಣ ಸಚಿವ ಮಧು ಬಂಗಾರಪ್ಪ

ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರಿಗೆ ಈಗ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಗಿದೆ. ಕಾಡಾನೆಗಳಿಂದ ತಮ್ಮ ಕೃಷಿ  ಉಳಿಸುವ ಜೊತೆಗೆ ತಮ್ಮ ಪ್ರಾಣವನ್ನೂ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಅದರಲ್ಲೂ ಕೇರಳ ಆನೆಗಳ ಉಪಟಳ ಇನ್ನಷ್ಟು ಜಾಸ್ತಿಯಾಗಿದೆ. ಅರಣ್ಯದಂಚಿನ ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ ತಾಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಕೇರಳದಿಂದ ಆಗಮಿಸುತ್ತಿರುವ ಆನೆಗಳ ಹಿಂಡು ಕೃಷಿಕರ ತೋಟಕ್ಕೆ ಲಗ್ಗೆಯಿಡುತ್ತಿವೆ. ಅದರಲ್ಲೂ ಮಂಡೆಕೋಲು ಅರಣ್ಯದಿಂದ ಪಯಸ್ವಿನಿ‌ ನದಿಯನ್ನು ದಾಟಿ ಮರ್ಕಂಜ, ಅರಂತೋಡು, ಸಂಪಾಜೆ, ಪಾಣಾಜೆ, ಪೆರ್ಲಂಪ್ಪಾಡಿ ಮೂಲಕ ಸಾಗಿ ಕಾಡಂಚಿನ ಕೃಷಿ ಭೂಮಿಗಳಿಗೆ‌ ನುಗ್ಗಿ ಹಾನಿ ಮಾಡುತ್ತಿವೆ.

ಅಡಿಕೆ, ತೆಂಗು, ರಬ್ಬರ್, ಬಾಳೆ ಸೇರಿದಂತೆ ಯಾವುದೇ ಕೃಷಿ ಮಾಡಲು ಆಗುತ್ತಿಲ್ಲ. ಕೊಡಗಿನಿಂದ ಸುಳ್ಯಕ್ಕೆ, ಸಕಲೇಶಪುರದಿಂದ ಕಡಬ ಭಾಗಕ್ಕೆ, ಚಿಕ್ಕಮಗಳೂರಿನಿಂದ ಬೆಳ್ತಂಗಡಿಗೆ ಆನೆಗಳು ಬರ್ತಿದೆ ಎಂದು ರೈತ ಮುಖಂಡ ಸುನಿಲ್ ಬೋರ್ಕರ್ ತಿಳಿಸಿದ್ದಾರೆ. ಅಲ್ಲದೇ, ಆನೆ ಸಮಸ್ಯೆಗೆ ಪರಿಹಾರ ನೀಡಲು ಇಟಿಎಫ್ ಬೇಕು, ಘೋಷಣೆ ಆಗಿದ್ದರೂ ಪ್ರಯೋಜನ ಆಗಿಲ್ಲ. ಆನೆಗಳು ಜನವಸತಿ ಪ್ರದೇಶಗಳಿಗೆ ಬರೋದನ್ನು ತಡೆಯಲು ರಾಜ್ಯ ಸರಕಾರ ಕಳೆದ ಬಜೆಟ್‌ನಲ್ಲಿ ಎಲಿಫೆಂಡ್ ಟಾಸ್ಕ್ ಫೋರ್ಸ್ ಮಾಡುವ ಘೋಷಣೆ ಮಾಡಿತ್ತು. ಆದರೆ ಆ ಘೋಷಣೆ ಘೋಷಣೆಯಾಗಿಯೇ ಉಳಿದಿದೆ.

Sulekha