ಕೆಸರಿನಲ್ಲಿ ಮರಿಯಾನೆಯ ಆಟ.. – ವೈರಲ್ ಆಯ್ತು ಮುದ್ದಾದ ವಿಡಿಯೋ!

ಆನೆ ಮರಿಗಳ ಆಟ, ತುಂಟಾಟ ನೋಡುವುದೇ ಕಣ್ಣಿಗೆ ಹಬ್ಬ. ಅತ್ತಿಂದಿತ್ತ ಓಡಾಡೋದು.. ನೀರಲ್ಲಿ ಆಟ ಆಡೋದು ನೋಡಿದಾಗ ಮನಸ್ಸಿಗೆ ಖುಷಿ ಕೊಡುತ್ತೆ. ಪುಟಾಣಿ ಆನೆಗಳ ಫನ್ನಿ ವಿಡಿಐೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೇ ಇರುತ್ತೆ. ಇದೀಗ ಕೆಸರಲ್ಲಿ ಆಟವಾಡಿರೋ ಪುಟಾಣಿ ಆನೆಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಭಾರತವನ್ನ ಮತ್ತೆ ಕೆಣಕಿದ ಪಾಕ್ ಕಾಶ್ಮೀರ ಪಾಕಿಸ್ತಾನದ ರಕ್ತನಾಳವಂತೆ!
Elephantnaturepark ಎಂಬ ಖಾತೆಯಲ್ಲಿ ಆನೆ ಮರಿಯ ದೃಶ್ಯವೊಂದನ್ನ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಗಜರಾಜನು ಕೆಸರು ನೀರಿನಲ್ಲಿ ಆಟ ಆಡುತ್ತಿದೆ. ಪುಟಾಣಿ ಗಜರಾಜ ಕೆಸರು ನೀರಿನಲ್ಲಿ ಆಟ ಆಡುತ್ತಿದ್ದು, ಅಲ್ಲೇ ಪಕ್ಕದಲ್ಲಿ ಆನೆಗಳು ಇರುವುದನ್ನು ಗಮನಿಸುತ್ತಿವೆ. ಮೈಯೆಲ್ಲಾ ಕೆಸರು ಮೆತ್ತಿಕೊಂಡು ಆಟ ಆಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಕೆಸರಿನೊಂದಿಗೆ ಮರಿಯಾನೆ ಖುಷಿ ಖುಷಿಯಿಂದಲೇ ಆಟ ಆಡುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.
ಈ ವಿಡಿಯೋಗೆ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು, ‘ಕೆಸರು ನೀರಿನಲ್ಲಿ ಒಳ್ಳೆಯ ಸಮಯ’ ಎಂದಿದ್ದಾರೆ. ಇನ್ನೊಬ್ಬರು, ಕೆಸರು ನೀರಿನಲ್ಲಿ ಆನೆಯ ಸ್ನಾನ ಎಷ್ಟು ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಾಡಿನಲ್ಲಿ ಹೋಳಿ ಹಬ್ಬದ ಸೆಲೆಬ್ರೇಶನ್ ಎಂದು ತಮಾಷೆಯಾಗಿಯೇ ಬರೆದುಕೊಂಡಿದ್ದಾರೆ. ಮರಿಯಾನೆಯ ಫನ್ ಜೋರಾಗಿದೆ ಬಳಕೆದಾರರು ಎಂದಿದ್ದಾರೆ. ಇನ್ನು ಕೆಲವರು ಈ ವಿಡಿಯೋಗೆ ಹಾರ್ಟ್ ಸಿಂಬಲ್ ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.