ಆನೆ ಬಂತೊಂದಾನೆ.. – ಪುಟ್ಟ ಬಾಲಕಿಗೆ ಸೊಂಡಿಲೆತ್ತಿ ಆಶೀರ್ವದಿಸಿದ ಗಜರಾಜ!

ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳು… ಇವುಗಳು ಮನುಷ್ಯರೊಂದಿಗೆ ಬಹಳ ಆಪ್ತವಾಗಿರುತ್ತವೆ. ಆನೆಗಳ ಆಪ್ತತೆ, ಪ್ರೀತಿ ತೋರುವ ಗುಣ, ಹೃದಯವೈಶಾಲ್ಯತೆಯ ಸಾಕಷ್ಟು ವಿಡಿಯೋಗಳನ್ನು ನೀವು ನೋಡಿರಬಹುದು. ಇದೀಗ ಇಲ್ಲೊಂದು ಆನೆ ಪುಟಾಣಿಗೆ ಆಶಿರ್ವಾದ ಮಾಡಿದೆ. ಈ ಮುದ್ದಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಮತ್ತೆ ಬಿಗ್ ಬಾಸ್‌ಗೆ ಕಾಲಿಟ್ಟ ರಕ್ಷಿತಾ ಶೆಟ್ಟಿ! – ಕಿಚ್ಚನ ಮುಂದೆಯೇ ಸಹಸ್ಪರ್ಧಿಗಳಿಗೆ ಕೌಂಟರ್ ಕೊಟ್ಟ ಕೃಷ್ಣ ಸುಂದರಿ!
ಆನೆಗಳು ಬಲು ಭಾವನಾತ್ಮಕ ಜೀವಿಗಳು… ಮನುಷ್ಯನೊಂದಿಗೆ ಆನೆಗಳು ಬಹುಬೇಗ ಆಪ್ತವಾಗುತ್ತವೆ. ಇದೀಗ ಇಲ್ಲೊಂದು ಕಡೆ ಆನೆಯೊಂದು ಮಗುವಿಗೆ ಸೊಂಡಿಲಿನಿಂದ ಆಶಿರ್ವಾದ ಮಾಡಿದೆ. ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ. ವೈರಲ್ ಆದ ವಿಡಿಯೋದಲ್ಲಿ ಆನೆಯೊಂದು ಮಾವುತನ ಜೊತೆ ಬರ್ತಿದೆ. ಈ ವೇಳೆ ಪುಟ್ಟ ಹುಡುಗಿ ಮಾವುತನಿಗೆ ಹಣಕೊಟ್ಟಿದ್ದಾಳೆ. ಬಳಿಕ ಚೂರು ಭಯವಿಲ್ಲದೆ ಆನೆ ಬಳಿ ಬಂದು ತಲೆಬಾಗಿ ನಮಸ್ಕರಿಸಿದ್ದಾಳೆ. ಈ ವೇಳೆ ಆನೆ ಸೊಂಡಿಲನ್ನೆತ್ತಿ ಪುಟ್ಟ ಕಂದನಿಗೆ ಆಶಿರ್ವಾದ ಮಾಡಿದೆ.
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಳಕೆದಾರರು ನಾನಾ ಕಾಮೆಂಟ್ ಮಾಡ್ತಿದ್ದಾರೆ. ಈ ಪುಟ್ಟ ಪೋರಿಯ ಧೈರ್ಯಕ್ಕೆ ಮೆಚ್ಚಲೇಬೇಕು. ಆನೆ ಸ್ನೇಹ ಜೀವಿ.. ಅದಕ್ಕೆ ಕೆಟ್ಟದು ಮಾಡಿಲ್ಲ ಅಂದ್ರೆ ಅವುಗಳು ನಮ್ಮೊಂದಿಗೆ ಚೆನ್ನಾಗಿರುತ್ತವೆ.. ಈ ಆನೆಯನ್ನ ನೋಡಿದಾಗ ಸಾಕ್ಷಾತ್ ಗಣೇಶನೇ ಬಂದಂತೆ ಭಾಸವಾಗ್ತಿದೆ ಎಂದು ಕಮೆಂಟ್ ಮಾಡಿದ್ದಾರೆ.

ನೋಡಿರಿ

