ದೇಶದಲ್ಲಿ 3 ವರ್ಷಗಳಲ್ಲಿ ಆನೆ ದಾಳಿಗೆ 1,581 ಮಂದಿ ಬಲಿ – ಕರ್ನಾಟಕದಲ್ಲಿ ಎಷ್ಟು ಸಾವು?

ದೇಶದಲ್ಲಿ 3 ವರ್ಷಗಳಲ್ಲಿ ಆನೆ ದಾಳಿಗೆ 1,581 ಮಂದಿ ಬಲಿ – ಕರ್ನಾಟಕದಲ್ಲಿ ಎಷ್ಟು ಸಾವು?

ನವದೆಹಲಿ: ಮಾನವನ ಮಿತಿಮೀರಿದ ಚಟುವಟಿಕೆಯಿಂದಾಗಿ ಬಹುಪಾಲು ಅರಣ್ಯ ನಾಶ ಆಗಿದೆ. ಇದರಿಂದಾಗಿ ಕಾಡು ಪ್ರಾಣಿಗಳು ಆಹಾರಕ್ಕಾಗಿ ನಾಡಿನತ್ತ ಬರುತ್ತಿವೆ. ಈ ವೇಳೆ ಕಾಡುಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಆಗಮಿಸಿ ಮನುಷ್ಯರ ಮೇಲೂ ದಾಳಿ ಮಾಡುತ್ತಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಆನೆ ದಾಳಿಯಿಂದ ದೇಶದಲ್ಲಿ 1,581 ಮಂದಿ ಸಾವನಪ್ಪಿದ್ದಾರೆ ಎಂದು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಸಚಿವಾಲಯ ಮಾಹಿತಿ ನೀಡಿದೆ.

ಇದನ್ನೂ ಓದಿ:ಕುಂದಾನಗರಿಯಲ್ಲಿ ಕಾಂಗ್ರೆಸ್ ಯುವಕ್ರಾಂತಿ ರಣಕಹಳೆ – ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3 ಸಾವಿರ ಭತ್ಯೆ..!

ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಸಚಿವಾಲಯ ನೀಡಿದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 2019-20ರಲ್ಲಿ 585, 2020- 21ರಲ್ಲಿ 461 ಹಾಗೂ 2021-22ರಲ್ಲಿ 535 ಮಂದಿ ಆನೆ ದಾಳಿಯಿಂದ ಸಾವಿಗೀಡಾಗಿದ್ದಾರೆ.

ಇನ್ನು ರಾಜ್ಯವಾರು ಅಂಕಿ ಅಂಶಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಒಡಿಶಾದಲ್ಲಿ 322 ಮಂದಿ ಸಾವನ್ನಪ್ಪಿದ್ದು, ದೇಶದಲ್ಲೇ ಅತಿ ಹೆಚ್ಚು ಮಂದಿ ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಝಾರ್ಖಂಡ್‌ನ‌ಲ್ಲಿ 291, ಪಶ್ಚಿಮ ಬಂಗಾಳದಲ್ಲಿ 240, ಅಸ್ಸಾಂನಲ್ಲಿ 229 ಹಾಗೂ ಛತ್ತೀಸ್‌ಗಢದಲ್ಲಿ 183 ಮಂದಿ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ.

ಇನ್ನು ತಮಿಳು ನಾಡಿನಲ್ಲಿ ಅತೀ ಹೆಚ್ಚು ಸಾವಾಗಿದ್ದು, 152 ಮಂದಿ ಆನೆಯ ದಾಳಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಅತೀ ಹೆಚ್ಚು ಆನೆಯನ್ನು ಹೊಂದಿರುವ ಕರ್ನಾಟಕದಲ್ಲಿ 69 ಜನ ಆನೆಯ ದಾಳಿಗೆ ತುತ್ತಾಗಿದ್ದಾರೆ. ಇನ್ನು ಕೇರಳದಲ್ಲಿ 57 ಹಾಗೂ ಆಂಧ್ರ ಪ್ರದೇಶದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ದೇಶದಲ್ಲಿ 2019-22ರ ವರೆಗೆ 266 ಆನೆಗಳು ಸಾವನ್ನಪ್ಪಿದ್ದು, ಇದರಲ್ಲಿ 198 ವಿದ್ಯುತ್‌ ಅವಘಡದಿಂದ, 41 ರೈಲು ಅಪಘಾತ ಹಾಗೂ 27 ಬೇಟೆ ಹಾಗೂ ವಿಷ ಸೇವನೆಯಿಂದ ಸಾವಿಗೀಡಾಗಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

suddiyaana