ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್‌ ರೈಲು ಸೇವೆ ಆರಂಭ – ಡಿಸೆಂಬರ್‌ 11 ರಿಂದಲೇ ಸಂಚಾರ ಶುರು!

ಬೆಂಗಳೂರಿನಿಂದ ನಂದಿಬೆಟ್ಟಕ್ಕೆ ಎಲೆಕ್ಟ್ರಿಕ್‌ ರೈಲು ಸೇವೆ ಆರಂಭ – ಡಿಸೆಂಬರ್‌ 11 ರಿಂದಲೇ ಸಂಚಾರ ಶುರು!

ಸಿಲಿಕಾನ್‌ ಸಿಟಿ ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಪ್ರವಾಸ ಹೋಗುವವರಿಗೆ ಸಿಹಿ ಸುದ್ದಿಯೊಂದಿದೆ. ಇನ್ಮುಂದೆ ನಂದಿ ಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲಿನಲ್ಲಿ ಕೂಡ ಪ್ರಯಾಣ ಮಾಡಬಹುದಾಗಿದೆ. ರೈಲ್ವೆ ಇಲಾಖೆ ಇದೇ ಮೊದಲ ಬಾರಿಗೆ ಪ್ರವಾಸಿಗಾಗಿ ವಿದ್ಯುತ್ ರೈಲು ಆರಂಭಿಸಲು ನಿರ್ಧರಿಸಿದೆ. ಡಿಸೆಂಬರ್ 11ರಿಂದ ಈ ರೈಲು ಸೇವೆ ಆರಂಭವಾಗಲಿದೆ.

ದೇವನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ವಿಮಾನ ನಿಲ್ದಾಣ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ ರೈಲುಗಳನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. 06531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್, 06535/06583 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ, ಮತ್ತು 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲುಗಳು ಸಂಚರಿಸಲಿವೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: ಡಿಸೆಂಬರ್ 19ರಂದು ಐಪಿಎಲ್ ಹರಾಜು ಪ್ರಕ್ರಿಯೆ- ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸೇರುವ ಆಟಗಾರರು ಯಾರು?

ಯಲಹಂಕ ಮತ್ತು ಚಿಕ್ಕಬಳ್ಳಾಪುರ ನಡುವಿನ ವಿದ್ಯುದ್ದೀಕರಣವು ಮಾರ್ಚ್ 2022 ರಲ್ಲಿ ಪೂರ್ಣಗೊಂಡಿತು, ಆದರೆ ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ಹಲವು ಕಾರಣಗಳಿಂದ ವಿಳಂಬ ಮಾಡಿದೆ. ಪ್ರಸ್ತುತ, 06387/06388 ಕೆಎಸ್​ಆರ್​​ ​ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ ಮತ್ತು 16549/16550 ಕೆಎಸ್​ಆರ್​​ ಬೆಂಗಳೂರು – ಕೋಲಾರ- ಕೆಎಸ್​ಆರ್​​ ಬೆಂಗಳೂರು ರೈಲುಗಳು ನಂದಿ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತವೆ.

ನಂದಿ ನಿಲ್ದಾಣದಿಂದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಭೋಗನಂದೀಶ್ವರ ದೇವಸ್ಥಾನಕ್ಕೆ ಸುಮಾರು 1.4 ಕಿ.ಮೀ ದೂರವಿದೆ. ಹೆಚ್ಚುವರಿ 15-18 ಕಿಮೀ. ಕ್ರಮಿಸಬೇಕಾಗುತ್ತದೆ. ನಂದಿ ರೈಲು ನಿಲ್ದಾಣದಿಂದ ಈ ಸ್ಥಳಗಳಿಗೆ ಬಹು-ಮಾದರಿ ಸಾರ್ವಜನಿಕ ಅಥವಾ ಸಾಮಾನ್ಯ ಸಾರಿಗೆ (ಬಸ್ಸುಗಳು, ಆಟೋಗಳು, ಇತ್ಯಾದಿ) ಕಡಿಮೆ ಇದ್ದು ಪ್ರವಾಸಿಗೆರಿಗೆ ಹೆಚ್ಚು ಅನುಕೂಲವಾಗುವುದಿಲ್ಲ ಎನ್ನಲಾಗಿದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ನೈಋತ್ಯ ರೈಲ್ವೆ ಇಲಾಖೆ ಸಲಹೆ ನೀಡಿದ್ದಾರೆ.

ನೈಋತ್ಯ ರೈಲ್ವೆ , ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಎನ್‌ಟಿಎಚ್) ಜೊತೆಗೆ ಈಗಾಗಲೇ ಈ ಮಾರ್ಗದಲ್ಲಿ ಮೂರು ಪಾರಂಪರಿಕ ಕೇಂದ್ರಗಳನ್ನು ಪುನಃಸ್ಥಾಪಿಸಿದೆ. ದೊಡ್ಡಜಾಲ, ದೇವನಹಳ್ಳಿ ಮತ್ತು ಆವತಿಹಳ್ಳಿ, ಮತ್ತು ನಂದಿ ನಿಲುಗಡೆಯ ಮರುಸ್ಥಾಪನೆ ಕಾರ್ಯವು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅದು ಪೂರ್ಣಗೊಂಡ ನಂತರ ನಾವು ಬೇಗನೆ ರೈಲು ಸಂಚಾರ ಆರಂಭಿಸುತ್ತೇವೆ. ಆದ್ದರಿಂದ ಪ್ರವಾಸಿಗರು ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ವೀಕ್ಷಿಸಬಹುದಾಗಿದೆ ಎಂದು ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ (ಬೆಂಗಳೂರು ವಿಭಾಗ) ಕುಸುಮಾ ಹರಿಪ್ರಸಾದ್​​ ಹೇಳಿರುವುದಾಗಿ ವರದಿಯಾಗಿದೆ.

Shwetha M