ಮತ ಎಣಿಕೆಗೆ ಎರಡು ದಿನ ಬೇಕೇ? ಬಲ್ಲವರು ತಿಳಿಸುತ್ತೀರಾ? – ಉಪ್ಪಿ ಟ್ವೀಟ್ ಗೆ ಜನ ಹೇಳಿದ್ದೇನು..?

ಮತ ಎಣಿಕೆಗೆ ಎರಡು ದಿನ ಬೇಕೇ? ಬಲ್ಲವರು ತಿಳಿಸುತ್ತೀರಾ? – ಉಪ್ಪಿ ಟ್ವೀಟ್ ಗೆ ಜನ ಹೇಳಿದ್ದೇನು..?

ಕರ್ನಾಟಕ ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ. ಆದರೆ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ನಟ ಉಪೇಂದ್ರ ಟ್ವೀಟ್ ಮಾಡಿದ್ದು, ಭಾರೀ ಚರ್ಚೆ ಹುಟ್ಟುಹಾಕಿದೆ.

ಕೇಂದ್ರ ಚುನಾವಣಾ ಆಯೋಗದ (election commission of india) ಮುಖ್ಯ ಆಯುಕ್ತ ರಾಜೀವ್ ಕುಮಾರ್ ಅವರು ಇಂದು(ಮಾರ್ಚ್ 29) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಚುನಾವಣೆ ದಿನಾಂಕ ಪ್ರಕಟಿಸಿದ್ದಾರೆ. ಇದೇ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ನಟ ಪ್ರಜಾಕೀಯ ಪಕ್ಷ ಸಂಸ್ಥಾಪಕ ಉಪೇಂದ್ರ(Upendra) ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಯೊಂದನ್ನು ಎತ್ತಿದ್ದು, ಸಂಚಲನ ಮೂಡಿಸಿದೆ.

ಇದನ್ನೂ ಓದಿ:‘ಇದೇ ನನ್ನ ಕೊನೇ ಚುನಾವಣೆ.. ಹುಟ್ಟೂರಿನಲ್ಲೇ ಸ್ಪರ್ಧಿಸಿ ನಿವೃತ್ತಿ’ – ಸಿದ್ದರಾಮಯ್ಯ ‘ಎರಡು ಕನಸು’!

ದಿನಾಂಕ ಘೋಷಣೆ ಬಳಿಕ ಟ್ವೀಟ್ ಮಾಡಿರುವ ಉಪೇಂದ್ರ, ಕರ್ನಾಟಕದಲ್ಲಿ ಮೇ 10, ಬುಧವಾರದಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತದೆ. ಮೇ 13 ಶನಿವಾರದಂದು ಫಲಿತಾಂಶ ಪ್ರಕಟವಾಗುತ್ತಿದೆ. ಮತ ಎಣಿಕೆಗೆ ಎರಡು ದಿನ ಬೇಕೆ? ಬಲ್ಲವರು ತಿಳಿಸುತ್ತೀರಾ? ಎಂದು ಟ್ವೀಟ್ ಮಾಡಿದ್ದಾರೆ. ಉಪೇಂದ್ರ ಅವರ ಟ್ವೀಟ್ ಗೆ ಪರವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಉಪೇಂದ್ರ ಅವರೇ, ಚುನಾವಣೆ ಆದ ದಿನವೇ ಮತ ಎಣಿಕೆ ಮಾಡಲು ಹೇಗೆ ಸಾಧ್ಯ? ಹಳ್ಳಿ ಹಳ್ಳಿಗಳಿಂದ ಮತ ಪೆಟ್ಟಿಗೆ ಸುರಕ್ಷಿತವಾಗಿ ಕೊಂಡೊಯ್ದು, ನೋಂದಾಯಿತ ಮತ ಎಣಿಕೆ ಕೇಂದ್ರಕ್ಕೆ ತಲುಪಬೇಕು. ಇದಕ್ಕೆ ಸಮಯ ಬೇಕಲ್ಲವೇ? ಮತ ಎಣಿಕೆ ಶುರುವಾಗುವುದು 13ನೇ ತಾರೀಖಿನಂದು. 11, 12ನೇ ತಾರೀಖಿನಂದು ಅಲ್ಲ ಎಂದು ಕಮೆಂಟ್ ಮಾಡಿದ್ದಾರೆ.

ಮತ್ತೊಮ್ಮ, ನಿಮ್ಮ ಸಿನಿಮಾ ಶೂಟಿಂಗ್ ಮುಗಿದ ದಿನವೇ release ಮಾಡ್ತೀರಾ? ಏಕೆಂದು ತಿಳಿಸುವಿರಾ ಸ್ವಾಮಿ? ಎಂದು ಪ್ರಶ್ನಿಸಿದ್ದರೆ, ಇನ್ನೋರ್ವ ಗೋಲ್ ಮಾಲ್ ಮಾಡುವುದಕ್ಕೆ ಟೈಮ್ ಬೇಕಲ್ವಾ ಅದಕ್ಕೆ ಎಂದಿದ್ದಾರೆ. ಇನ್ನು ವ್ಯವಸ್ಥೆ ಮೇಲೆನೇ ನಿಮಗೆ ಅನುಮಾನವೇ ಸರ್ ಎಂದು ಪ್ರಶ್ನಿಸಿದ್ದಾರೆ. ಉಪೇಂದ್ರ ಅವರೇ, ಎಲೆಕ್ಷನ್ ಕಣ್ರೀ ಇದು, ಯಾವ್ದೋ ಆನ್ಲೈನ್ exam ಅಲ್ಲ, ಆಗಿದ ತಕ್ಷಣ ರಿಸಲ್ಟ್ ಕೊಡೋಕೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.

suddiyaana