ರಾಜ್ಯದಲ್ಲಿ ಹೆಚ್ಚಾಯ್ತು ಕುರುಡು ಕಾಂಚಾಣ ಸದ್ದು – 10 ದಿನಗಳಲ್ಲಿ 100 ಕೋಟಿ ರೂ. ಮೌಲ್ಯದ ನಗದು, ವಸ್ತು ಜಪ್ತಿ

ರಾಜ್ಯದಲ್ಲಿ ಹೆಚ್ಚಾಯ್ತು ಕುರುಡು ಕಾಂಚಾಣ ಸದ್ದು – 10 ದಿನಗಳಲ್ಲಿ 100 ಕೋಟಿ ರೂ. ಮೌಲ್ಯದ ನಗದು, ವಸ್ತು ಜಪ್ತಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ರಾಜ್ಯದಲ್ಲಿ ಕುರುಡು ಕಾಂಚಾಣ ಜೋರಾಗಿಯೇ ಸದ್ದು ಮಾಡುತ್ತಿದೆ. ಮತದಾರರ ಮನಗೆಲ್ಲೋಕೆ ಕುಕ್ಕರ್, ಸೀರೆ ಅಂತಾ ಹತ್ತಾರು ಗಿಫ್ಟ್ ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಅಕ್ರಮ ನಡೆಯದಂತೆ ಹದ್ದಿನ ಕಣ್ಣಿರಿಸಿದೆ. ಇದರಂತೆ ಕಳೆದ 10 ದಿನಗಳಲ್ಲಿ ಚುನಾವಣಾ ಆಯೋಗ ಸುಮಾರು 100 ಕೋಟಿ ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಪಡಿಸಿಕೊಂಡಿದೆ.

ಇದನ್ನೂ ಓದಿ: 175 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಗೆ ಕೌಂಟ್ ಡೌನ್ – ಬಿಜೆಪಿಯಲ್ಲಿ ಯಾರಿಗೆಲ್ಲಾ ಟಿಕೆಟ್ ಮಿಸ್?

ಮಾರ್ಚ್​​ 29 ರಂದು ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಅಂದಿನಿಂದ ಇಲ್ಲಿಯವರೆಗೆ ಬರೋಬ್ಬರಿ 99.18 ಕೋಟಿಯಷ್ಟು ಹಣ ಮತ್ತು ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಇದು ಕೇಲವ ಹತ್ತು ದಿನಗಳಲ್ಲಿ ಸಂಗ್ರಹವಾದ ನಗದು ಹಾಗೂ ವಸ್ತುಗಳು ಅಂತಾ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಕೇವಲ 10 ದಿನಗಳಲ್ಲಿ 36.8 ಕೋಟಿ ರೂಪಾಯಿ ಹಣ, 15.46 ಕೋಟಿ ರೂಪಾಯಿ ಬೆಲೆಯ ಉಚಿತ ವಸ್ತುಗಳು, 30 ಕೋಟಿ ರೂ. ಬೆಲೆಯ 5.2 ಲಕ್ಷ ಲೀಟರ್​ ಮದ್ಯ, 15 ಕೋಟಿ ರೂ. ಬೆಲೆಯ ಬಂಗಾರ ಮತ್ತು 2.5 ಕೋಟಿ ರೂ. ಬೆಲೆಯ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇನ್ನು ದಾಖಲೆ ರಹಿತ ಹಣ, ವಸ್ತುಗಳ ವರ್ಗಾವಣೆ ಕರಿತು ಚುನಾವಣಾ ಆಯೋಗ ಪ್ರಕರಣ ದಾಖಲಿಸಿದೆ. ಈಗಾಗಲೇ ಸುಮಾರು 20 ಎಫ್ಐಆರ್ ದಾಖಲಾಗಿವೆ. ವಶಕ್ಕೆ ಪಡೆದಿರುವ ಸುಮಾರು ನೂರು ಕೋಟಿ ಮೌಲ್ಯದ ನಗದು ಹಾಗೂ ವಸ್ತುಗಳಲ್ಲಿ ಅತೀ ಹೆಚ್ಚು ಕುಕ್ಕರ್ ಗಳೇ ಇವೆ. ನೂರು ಕೋಟಿ ವಸ್ತುಗಳಲ್ಲಿ ಅತೀ ಹೆಚ್ಚು ನಗರದ ಗಡಿ ಭಾಗಗಳಲ್ಲಿ ಪತ್ತೆಯಾಗಿದೆ ಅಂತಾ ಅಧಿಕಾರಿಗಳು ಹೇಳಿದ್ದಾರೆ.

suddiyaana