ಅಯ್ಯೋ.. ಕೋಳಿ ಕೂಗೋದೂ ತಪ್ಪಾ? – ಕೊಕ್ಕೊಕ್ಕೋ.. ಎಂದು ಕೂಗಿದ ಹುಂಜದ ಮೇಲೆ ಬಿತ್ತು ಕೇಸ್!

ಹಳ್ಳಿಗಳಲ್ಲಿ ಮುಂಜಾನೆ ಕೋಳಿ ಕೂಗೋದು ಕಾಮನ್.. ಸ್ವಲ್ಪ ಬೆಳಕು ಬಂದ್ರೂ ಇಡೀ ಊರಿಗೆ ಕೇಳಿಸೋ ತರ ಕೂಗಿಬಿಡುತ್ತವೆ.. ಕೋಳಿ ಕೂಗ್ತು.. ಬೆಳಗಾಯ್ತು ಅಂತಾ ಅದೆಷ್ಟೋ ಜನ ದಿನಚರಿ ಪ್ರಾರಂಭಿಸೋದು ಇದೆ. ಆದ್ರೀಗ ಇಲ್ಲೊಂದು ಕೋಳಿ ಮುಂಜಾನೆ ಕೊಕ್ಕೊಕ್ಕೋ ಅಂತಾ ಕೂಗಿದೆ. ಇದೀಗ ಆ ಕೋಳಿ ಮೇಲೆ ಕೇಸ್ ಬಿದ್ದಿದೆ.
ಇದನ್ನೂ ಓದಿ: ಜಯಂತ್ ಅಸಲಿ ಬಣ್ಣ ಬಯಲು! – ಸತ್ಯ ತಿಳಿದ ಜಾನು ಕತೆನೂ ಕ್ಲೋಸ್?
ಅಷ್ಟಕ್ಕೂ ಆಗಿದ್ದೇನು?
ಈ ವಿಚಿತ್ರ ಘಟನೆ ಕೇಳದ ಪಥನಂತಿಟ್ಟ ಜಿಲ್ಲೆಯ ಪಲ್ಲಿಕಲ್ ಗ್ರಾಮದಲ್ಲಿ ನಡೆದಿದೆ. ಪಲ್ಲಿಕಲ್ ನ ಅನಿಲ್ ಕುಮಾರ್ ಎಂಬುವವರು ಕೋಳಿಯೊಂದನ್ನ ಸಾಕಿದ್ರು. ಆ ಕೋಳಿ ಬೆಳಿಗ್ಗೆ ಮೂರು ಗಂಟೆಗೆ ಕೂಗಲು ಶುರುಮಾಡ್ತಿತ್ತು. ಇದ್ರಿಂದಾಗಿ ನೆರೆ ಮನೆಯ ವೃದ್ಧ ನೆಮ್ಮದಿಯ ನಿದ್ರೆಯನ್ನ ಹಾಳಾಗಿದೆ. ಈ ಹಿನ್ನೆಲೆ ರಾಧಾ ಕೃಷ್ಣ ಎಂಬ ವೃದ್ಧ ಕೋಳಿಯಿಂದ ನಿದ್ರೆ ಹಾಳಾಗಿದೆ ಎಂದು ಆರೋಪ ಮಾಡಿದ್ದಾರೆ. ಅಡೂರಿನ ಕಂದಾಯ ವಿಭಾಗ ಕಚೇರಿ(ಆರ್‌ಡಿಒ)ಗೆ ಮಾಲೀಕ ಹಾಗೂ ಕೋಳಿ ವಿರುದ್ಧ ಔಪಚಾರಿಕ ದೂರು ನೀಡಿದ್ದಾರೆ.
ರಾಧಾ ಕೃಷ್ಣದೂರನ್ನು ಗಂಭೀರವಾಗಿ ಪರಿಗಣಿಸಿದ ಆರ್‌ಡಿಒ ತನಿಖೆ ಆರಂಭಿಸಿದರು. ಈ ವಿಷಯದಲ್ಲಿ ರಾಧಾಕೃಷ್ಣ ಮತ್ತು ಅನಿಲ್ ಕುಮಾರ್ ಇಬ್ಬರನ್ನೂ ಮಾತುಕತೆಗೆ ಕರೆಯಲಾಗಿತ್ತು. ನಂತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತನಿಖೆಯ ನಂತರ, ಅನಿಲ್ ಕುಮಾರ್ ತನ್ನ ಕೋಳಿಗಳನ್ನು ತನ್ನ ಮನೆಯ ಮೇಲಿನ ಮಹಡಿಯಲ್ಲಿ ಸಾಕಿದ್ದಾರೆ . ಇದರಿಂದಾಗಿ ಕೋಳಿಗಳ ಕೂಗಿನಿಂದ ರಾಧಾಕೃಷ್ಣ ಎಂಬುವವರ ನಿದ್ರೆಗೆ ಭಂಗವಾಗಿದೆ. ಹೀಗಾಗಿ ರಾಧಾಕೃಷ್ಣ ಸರಿಯಾಗಿ ವಿಶ್ರಾಂತಿ ಪಡೆಯಲು ಸಾಧ್ಯವಾಗುವಂತೆ, ಆರ್‌ಡಿಒ ಅನಿಲ್ ಕುಮಾರ್ ಅವರ ಕೋಳಿ ಸಾಕಾಣಿಕೆ ಕೇಂದ್ರವನ್ನು ರಾಧಾಕೃಷ್ಣ ಅವರ ಮನೆಯಿಂದ ಅವರ ಆಸ್ತಿಯ ದಕ್ಷಿಣ ಭಾಗಕ್ಕೆ ಸ್ಥಳಾಂತರಿಸಲು ಆದೇಶಿಸಿದ್ದಾರೆ. ಕೆಲಸವನ್ನು ಪೂರ್ಣಗೊಳಿಸಲು 15 ದಿನಗಳ ಕಾಲಾವಕಾಶ ನಿಗದಿಪಡಿಸಲಾಗಿದೆ.