ಎಲೆಕ್ಷನ್ ಬಳಿಕ ರಾಜ್ಯ ಸರ್ಕಾರ ಪತನ? – ಕರ್ನಾಟಕದಲ್ಲಿ ನಡೆಯುತ್ತಾ ಮಹಾರಾಷ್ಟ್ರ ಮಾದರಿಯ ಆಪರೇಷನ್‌ ನಾಥ?

ಎಲೆಕ್ಷನ್ ಬಳಿಕ ರಾಜ್ಯ ಸರ್ಕಾರ ಪತನ? – ಕರ್ನಾಟಕದಲ್ಲಿ ನಡೆಯುತ್ತಾ ಮಹಾರಾಷ್ಟ್ರ ಮಾದರಿಯ ಆಪರೇಷನ್‌ ನಾಥ?

ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರ್ಕಾರ ಪತನವಾಗುತ್ತಾ ಅನ್ನೋ ಪ್ರಶ್ನೆ ಈಗ ಭಾರಿ ಸದ್ದು ಮಾಡುತ್ತಿದೆ. ಎಲೆಕ್ಷನ್‌ ಬಳಿಕ ರಾಜ್ಯ ಸರ್ಕಾರ ಪತನವಾಗುತ್ತೆ ಅಂತಾ ಬಿಜೆಪಿ, ಜೆಡಿಎಸ್‌ ನಾಯಕರು ಪದೇ ಪದೇ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇದೀಗ ಇದರ ನಡುವೆ ಮಹಾರಾಷ್ಟ್ರ ಸಿಎಂ ಏಕನಾಥ್‌ ಶಿಂಧೆ ಆಪರೇಷನ್‌ ನಾಥ ಸುಳಿವನ್ನು ನೀಡಿದ್ದಾರೆ. ಇದೀಗ  ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಬಿಗ್‌ ಆಪತ್ತು ಎದುರಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಲೋಕಸಭೆಗೆ 4ನೇ ಹಂತದ ಮತದಾನ – ಸಾಮಾನ್ಯರಂತೆ ಬಂದು ಮತ ಚಲಾಯಿಸಿದ ಸಿನಿಮಾ ತಾರೆಯರು

ಹೌದು, ಲೋಕಸಭೆ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ  ಪತನವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸುಳಿವು ನೀಡಿದ್ದಾರೆ. ತೆರೆಯ ಮರೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಂದಲೇ ತಮಗೆ ಆಪರೇಷನ್​​ ಮಾಡಲು ಆಹ್ವಾನವಿದೆ ಎಂದಿರುವ ಅವರು, ‘ನಾಥ್’ ಮಾದರಿ ಆಪರೇಷನ್ ಮಹಾರಾಷ್ಟ್ರದಲ್ಲಿ ಖ್ಯಾತಿ ಗಳಿಸಿದೆ. ಅದೇ ಮಾದರಿಯ ಆಪರೇಷನ್​​ಗೆ ಕರ್ನಾಟಕದಿಂದಲೂ ಆಹ್ವಾನವಿದೆ ಎಂದಿದ್ದಾರೆ.

ಚುನಾವಣಾ ಪ್ರಚಾರದ ನಿಮಿತ್ತ ಬೆಳಗಾವಿಗೆ ಹೋಗಿದ್ದಾಗ ಅಲ್ಲಿನ ಬಿಜೆಪಿ ಪದಾಧಿಕಾರಿಗಳು ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ನನ್ನನ್ನು ಭೇಟಿಯಾಗಲು ಉತ್ಸುಕತೆಯಿಂದ ಬಂದಿದ್ದರು. ಈ ‘ನಾಥ’ ಯಾರೆಂದು ನೋಡಲು ಬಯಸಿದ್ದರು. ಆಗ, ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ‘ನಾಥ್’ ಮಾದರಿ ಆಪರೇಷನ್​ಗೆ ಮನವಿ ಮಾಡಿದ್ದರು ಎಂದು ಶಿಂಧೆ ಹೇಳಿದ್ದಾರೆ.

Shwetha M