ಬಹುಭಾಷಾ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ – 5 ಸಾವಿರ ರೂಪಾಯಿ ದಂಡ

ಬಹುಭಾಷಾ ನಟಿ ಜಯಪ್ರದಾಗೆ 6 ತಿಂಗಳು ಜೈಲು ಶಿಕ್ಷೆ – 5 ಸಾವಿರ ರೂಪಾಯಿ ದಂಡ

ಮುಂಬೈ: ಬಹುಭಾಷಾ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ಚೆನ್ನೈನ ಎಗ್ಮೋರ್ ಕೋರ್ಟ್ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಚೆನ್ನೈನ ರಾಯಪೇಟಾದಲ್ಲಿ ಆಕೆಯ ಒಡೆತನದ ಚಿತ್ರಮಂದಿರದ ನೌಕರರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಆಕೆಗೆ 5,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ.

ಮಾಜಿ ಸಂಸದೆ ಜಯಪ್ರದಾ ಅವರು ಚೆನ್ನೈನ ಅಣ್ಣಾ ರಸ್ತೆಯಲ್ಲಿರುವ ಜಯಪ್ರದಾ ಸಿನಿಮಾ ಥಿಯೇಟರ್ ಅನ್ನು ರಾಮ್ ಕುಮಾರ್ ಮತ್ತು ರಾಜಬಾಬು ಅವರೊಂದಿಗೆ ನಡೆಸುತ್ತಿದ್ದಾರೆ. ಈ ಸಿನಿಮಾ ಥಿಯೇಟರ್ ನಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ  ಇಎಸ್​ಐ ಹಣ ಪಾವತಿಸದ ಕಾರಣ ಜಯಪ್ರದಾ ವಿರುದ್ಧ ಕಾರ್ಮಿಕರು ಅಸಮಾಧಾನಗೊಂಡಿದ್ದರು. ಈ ಕುರಿತಾಗಿ ಉದ್ಯೋಗಿಯೊಬ್ಬರು ದೂರು ನೀಡಿದ್ದಾರೆ. ಇದರೊಂದಿಗೆ ಕಾರ್ಮಿಕ ಸರ್ಕಾರಿ ವಿಮಾ ನಿಗಮವು ನಟಿಯ ವಿರುದ್ಧ ಚೆನ್ನೈನ ಎಗ್ಮೋರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು ಎಗ್ಮೋರ್ ನ್ಯಾಯಾಲಯವು ಥಿಯೇಟರ್ ಮ್ಯಾನೇಜರ್ ಜಯಪ್ರದಾ ಮತ್ತು ಇಬ್ಬರು ಪಾಲುದಾರರಿಗೆ 6 ತಿಂಗಳ ಜೈಲು ಶಿಕ್ಷೆ ಮತ್ತು ತಲಾ 5,000 ರೂ. ದಂಡ ಕಟ್ಟುವಂತೆಯೂ ತಿಳಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 11 ವರ್ಷಗಳ ಹಿಂದೆ ಕಳ್ಳತನ – ಸಾಕ್ಷ್ಯಕ್ಕಾಗಿ ನ್ಯಾಯಾಲಯಕ್ಕೆ ಬಂದ ಎಮ್ಮೆ

ಈ ಹಿಂದೆ ಕೂಡ ಜಯಪ್ರದಾ ಥಿಯೇಟರ್ ಕಾಂಪ್ಲೆಕ್ಸ್​ಗೆ ಸಂಬಂಧಿಸಿದಂತೆ ಸುಮಾರು 20 ಲಕ್ಷ ರೂಪಾಯಿ ತೆರಿಗೆ ಪಾವತಿಸಿರಲಿಲ್ಲ. ಆಗ ಸಿಟಿ ಸಿವಿಲ್ ನ್ಯಾಯಾಲಯದ ಆದೇಶದಂತೆ ಪಾಲಿಕೆ ಅಧಿಕಾರಿಗಳು ಥಿಯೇಟರ್​ನ ಕುರ್ಚಿ, ಪ್ರೊಜೆಕ್ಟರ್​ಗಳನ್ನು ಜಪ್ತಿ ಮಾಡಿದ್ದರು. ಈಗ ಮತ್ತೊಮ್ಮೆ ಜಯಪ್ರದಾ ಅವರಿಗೆ ಹಿನ್ನಡೆ ಆಗಿದೆ. 80ರ ದಶಕದಲ್ಲಿ, ನಟಿ ಜಯಪ್ರದಾ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಹುತೇಕ ಎಲ್ಲಾ ಟಾಪ್ ನಟರೊಂದಿಗೆ ನಟಿಸಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಸ್ಟಾರ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈಗ ರಾಜಕೀಯ ಹಾಗೂ ಕೆಲವು ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.

suddiyaana