ಮೊಟ್ಟೆ ಮೊದಲಾ.. ಕೋಳಿ ಮೊದಲಾ? – ಮಿಲಿಯನ್ ಡಾಲರ್ ಪ್ರಶ್ನೆಗೆ ವಿಜ್ಞಾನಿಗಳಿಂದ ಕೊನೆಗೂ ಉತ್ತರ!
ಮನುಷ್ಯ ಎಂಥೆದ್ದನ್ನಲ್ಲಾ ಕಂಡು ಹಿಡಿದಿದ್ದಾನೆ. ಸೃಷ್ಟಿ ಮಾಡಿದ್ದಾನೆ. ಎಲ್ಲಾ ಸವಾಲುಗಳಿಗೂ ಪರಿಹಾರ ಕಂಡುಕೊಂಡಿದ್ದಾನೆ. ಆದ್ರೆ ಒಂದು ಪ್ರಶ್ನೆಗೆ ಮಾತ್ರ ಉತ್ತರವೇ ಸಿಕ್ಕಿರಲಿಲ್ಲ. ಅದು ಮೊಟ್ಟೆ ಮೊದಲೋ. ಕೋಳಿ ಮೊದಲೋ ಅನ್ನೋದು. ಇದು ಇಡೀ ಜಗತ್ತನ್ನೇ ಕಾಡುತ್ತಿರುವ ಮಿಲಿಯನ್ ಡಾಲರ್ ಪ್ರಶ್ನೆ. ಅದೆಷ್ಟೋ ಪೋಷಕರು ಟೈಮ್ ಪಾಸ್ ಮಾಡೋಕೆ ಮಕ್ಕಳ ಬಳಿ ಈ ಪ್ರಶ್ನೆಯನ್ನೇ ಮುಂದಿಡ್ತಾರೆ. ಮಕ್ಕಳು ತಲೆ ಕೆರ್ಕೊಂಡು ಚಿತ್ರ ವಿಚಿತ್ರ ಆನ್ಸರ್ ಮಾಡೋದನ್ನ ಕೇಳೋದೆ ತಮಾಷೆಯಾಗಿರುತ್ತೆ. ಆದ್ರೀಗ ಈ ತಮಾಷೆಯ ಮತ್ತು ಅಷ್ಟೇ ಗಂಭೀರವಾದ ಪ್ರಶ್ನೆಗೆ ಕೊನೆಗೂ ವಿಜ್ಞಾನಿಗಳು ಉತ್ತರ ಕಂಡುಕೊಂಡಿದ್ದಾರಂತೆ.
ಇದನ್ನೂ ಓದಿ : ಯಕ್ಷಗಾನದ ಬಗ್ಗೆ ಯುವಪೀಳಿಗೆಯಲ್ಲಿ ಕಾಣದ ಆಸಕ್ತಿ – ದೈವಕಲೆ ಉಳಿವಿಗೆ ಬೇಕಿದೆ ಪ್ರೋತ್ಸಾಹ
ಸಸ್ತನಿಗಳು, ಸರೀಸೃಪಗಳು, ಉಭಯಚರಗಳು ಮತ್ತು ಪಕ್ಷಿಗಳ ಬಗ್ಗೆ ಅಧ್ಯಯನ ನಡೆಸಿರುವ ವಿಜ್ಞಾನಿಗಳು ಈಗ ಅಂತಿಮ ತೀರ್ಮಾನವೊಂದಕ್ಕೆ ಬಂದಿದ್ದಾರೆ. ಮೊಟ್ಟೆ ಅಲ್ಲ ಕೋಳಿಯೇ ಮೊದಲು ಅಂತಾ ವಿಜ್ಞಾನಿಗಳು ಹೇಳಿದ್ದಾರೆ. ಅಂದ್ರೆ ಇದನ್ನ ಕೇವಲ ಕೋಳಿಗೆ ಸೀಮಿತವಾಗಿ ಹೇಳಿಲ್ಲ. ಪಳೆಯುಳಿಕೆ ಜಾತಿಯ ಜೀವಿಗಳನ್ನ ಅಧ್ಯಯನ ಮಾಡಿ, ಈ ಹಿಂದೆ ಜೀವಿಗಳ ಹುಟ್ಟು ಆದ ಸಂದರ್ಭದಲ್ಲಿ ಮರಿಗಳ ಮೂಲಕವೇ ಜನ್ಮ ತಾಳಿದ್ದವು ಅಂತಾ ವಿಜ್ಞಾನಿಗಳು ವರದಿ ಮಾಡಿದ್ದಾರೆ. ಹೀಗಾಗಿ ಮೊಟ್ಟೆ ಅಲ್ಲ, ಕೋಳಿಯೇ ಮೊದಲು ಅನ್ನೋ ತೀರ್ಮಾನಕ್ಕೆ ಬರಲಾಗಿದೆ.
ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಪ್ರಕಾರ, ಕೋಳಿಗಳು ಮೊದಲು ಹೀಗಿರಲಿಲ್ಲ. ಅವುಗಳು ಮೊದಲು ಮನುಷ್ಯರಂತೆ ಸಸ್ತನಿಗಳಾಗಿದ್ದವು. ಅದೇನೆಂದರೆ, ಕೋಳಿ ಮೊಟ್ಟೆ ಇಡದೆ ತನ್ನ ಮರಿಗಳಿಗೆ ಜನ್ಮ ನೀಡುತ್ತಿದ್ದವು. ಈ ತೀರ್ಮಾನವು 51 ಪಳೆಯುಳಿಕೆ ಜಾತಿಗಳು ಮತ್ತು 29 ಜೀವಂತ ಜಾತಿಗಳ ವಿಶ್ಲೇಷಣೆಯನ್ನು ಆಧರಿಸಿದೆ. ಇದನ್ನು ಅಂಡಾಣು (ಮೊಟ್ಟೆ ಇಡುವುದು) ಅಥವಾ ವಿವಿಪಾರಸ್ (ಮರಿಗಳಿಗೆ ಜನ್ಮ ನೀಡುವುದು) ಎಂದು ವರ್ಗೀಕರಿಸಬಹುದು. ಅಂಡಾಣು ಜಾತಿಗಳು ಗಟ್ಟಿಯಾದ ಅಥವಾ ಮೃದುವಾದ ಚಿಪ್ಪಿನ ಮೊಟ್ಟೆಗಳನ್ನು ಇಡುವುದಕ್ಕೆ ಹೆಸರುವಾಸಿಯಾಗಿದ್ದರೆ, ವಿವಿಪಾರಸ್ ಪ್ರಭೇದಗಳು ಮರಿಗಳಿಗೆ ಜನ್ಮ ನೀಡುತ್ತವೆ. ಈ ಹೊಸ ಸಂಶೋಧನೆಗಳನ್ನು ನೇಚರ್ ಎಕಾಲಜಿ & ಎವಲ್ಯೂಷನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.