ಪಂದ್ಯದಲ್ಲೂ ಫೇಲ್, ಓದಿನಲ್ಲೂ ಡುಮ್ಕಿ – ಗರ್ವಭಂಗವಾದ್ರೂ ಪುಂಗಿ ನಿಂತಿಲ್ಲ
ಸೂಪರ್- 8 ಹಂತಕ್ಕೇರಲ್ವಾ ಪಾಕಿಸ್ತಾನ?

ಪಂದ್ಯದಲ್ಲೂ ಫೇಲ್, ಓದಿನಲ್ಲೂ ಡುಮ್ಕಿ – ಗರ್ವಭಂಗವಾದ್ರೂ ಪುಂಗಿ ನಿಂತಿಲ್ಲಸೂಪರ್- 8 ಹಂತಕ್ಕೇರಲ್ವಾ ಪಾಕಿಸ್ತಾನ?

ಟಿ20 ವಿಶ್ವಕಪ್ ಟೂರ್ನಿ ಆರಂಭವಾಗೋ ಮೊದಲೇ ಸಖತ್ ಸೌಂಡ್ ಮಾಡಿದ್ದು ಅಂದ್ರೆ ಪಾಕಿಸ್ತಾನ ಟೀಮ್. ನಮ್ಗೆ ಕಪ್ ಬೇಡ, ಟೀಮ್ ಇಂಡಿಯಾ ಸೋಲಿಸೋದೇ ನಮ್ ಟಾರ್ಗೆಟ್ ಅಂತಾ ಅಖಾಡಕ್ಕಿಳಿದ ಪಾಕ್ ಭಾರತದ ವಿರುದ್ಧ ಮಣ್ಣುಮುಕ್ಕಿದೆ. ಅಷ್ಟೇ ಅಲ್ಲ, ಪಾಕಿಸ್ತಾನ ತಂಡ ಸತತ ಎರಡು ಸೋಲು ಕಂಡು ಗ್ರೂಪ್ ಹಂತದಲ್ಲೇ ಹೊರಬೀಳುವ ಭೀತಿಗೆ ಸಿಲುಕಿದೆ. ಇದ್ರ ಮಧ್ಯೆ ಪಾಕ್ ಆಟಗಾರರ ವಿದ್ಯಾಭ್ಯಾಸದ ಬಗ್ಗೆಯೂ ಸರ್ಚಿಂಗ್ ಶುರುವಾಗಿದೆ.

ನಮ್ಗೆ ಟಿ20 ವಿಶ್ವಕಪ್ ನಲ್ಲಿ ಚಾಂಪಿಯನ್ ಆಗೋದಕ್ಕಿಂತ ಹೆಚ್ಚಾಗಿ ಟೀಮ್ ಇಂಡಿಯಾ ಸೋಲಿಸಬೇಕು ಅಂತಾ ಪಾಕ್ ಪ್ರಜೆಗಳು ಪುಂಗಿ ಊದಿದ್ದೇ ಬಂತು. ಇದಕ್ಕಾಗಿ ಪಾಕಿಸ್ತಾನದ ಕ್ರಿಕೆಟರ್ಸ್ ಕೂಡಾ ಹೈಯರ್ ಫ್ರೆಷರ್ ಲ್ಲಿ ವರ್ಕೌಟ್ ಮಾಡಿದ್ದೇ ಬಂತು. ಟೀಮ್ ಇಂಡಿಯಾ ಸರಿಯಾಗಿಯೇ ಪಾಕಿಸ್ತಾನ ತಂಡದ ಸೊಂಟ ಮುರಿದಿದೆ. ಪಾಕಿಸ್ತಾನದ ಪೂವರ್ ಪರ್ಫಾಮೆನ್ಸ್ ಗೆ ಪಾಕ್ ಪ್ರಜೆಗಳೇ ಬೈಯ್ತಾ ಇದ್ದಾರೆ. ಇದ್ರ ಮಧ್ಯೆ ಈಗ ಪಾಕ್ ಕ್ರಿಕೆಟಿಗರ ಡಿಟೇಲ್ಸ್ ಬಗ್ಗೆ ಸರ್ಚಿಂಗ್ ಶುರುವಾಗಿದೆ. ಆಟಗಾರರು ಎಷ್ಟು ಓದಿದ್ದಾರೆ, ಹೇಗೆ ಅನ್ನೋದ್ರ ಬಗ್ಗೆ ತಿಳಿದುಕೊಳ್ತಿದ್ದಾರೆ. ಶೈಕ್ಷಣಿಕ ಅರ್ಹತೆ ಬಗ್ಗೆ ನೋಡೋದಾದ್ರೆ ಪಾಕ್ ಕ್ರಿಕೆಟರ್ಸ್ ಓದಿನ ಬಗ್ಗೆ ಗಮನ ಹರಿಸಿದವರಂತೆ ಕಾಣ್ತಿಲ್ಲ.

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಪಾಕ್ ಪ್ರಜೆಗಳ ಕಣ್ಮಣಿ. ಬಾಬರ್ ಅಜಂ ಶಿಕ್ಷಣ ಪಡೆದಿದ್ದು ಕೇವಲ 8ನೇ ತರಗತಿವರೆಗೂ ಮಾತ್ರ. ಇನ್ನು ಪಾಕಿಸ್ತಾನ ತಂಡದ ಮಾರಕ ವೇಗಿ ಹ್ಯಾರಿಸ್ ರೌಫ್‌, ಬಾಲ್ಯದಲ್ಲಿ ತಾವೊಬ್ಬ ಫುಟ್ಬಾಲ್ ಆಟಗಾರನಾಗಬೇಕು ಎಂದು ಕನಸು ಕಂಡಿದ್ದರು. ಇನ್ನು ರೌಫ್, ಇಸ್ಲಾಮಾಬಾದ್‌ ಮಾಡೆಲ್ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದ್ದರು. ಪಾಕಿಸ್ತಾನ ಕ್ರಿಕೆಟ್ ತಂಡದ ಸ್ಟೈಲೀಷ್ ಆಲ್ರೌಂಡರ್ ಶಾದಾಬ್ ಖಾನ್, ಪದವಿ ಶಿಕ್ಷಣ ಪೂರೈಸಿದ್ದಾರೆ. ಪಾಕ್ ಅನುಭವಿ ಎಡಗೈ ಬ್ಯಾಟರ್ ಫಖರ್ ಜಮಾನ್, ಪಾಕಿಸ್ತಾನ ನೇವಿ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದು, ನಾವಿಕನಾಗಿ ವೃತ್ತಿ ಬದುಕು ಆರಂಭಿಸಿದ್ದರು. ಇನ್ನು 2020ರಲ್ಲಿ ಅವರಿಗೆ ಪಾಕಿಸ್ತಾನ ತಂಡಕ್ಕೆ ನೀಡಿದ ಅವರ ಕೊಡುಗೆಯನ್ನು ಪರಿಗಣಿಸಿ ಪಾಕಿಸ್ತಾನ ನೌಕಾ ಸೇನೆಯಲ್ಲಿ ಗೌರವಾರ್ಥವಾಗಿ ಲೆಫ್ಟಿನೆಂಟ್ ಹುದ್ದೆ ನೀಡಿ ಗೌರವಿಸಿದೆ. ಇಂಜಮಾಮ್ ಉಲ್ ಹಕ್ ಅವರ ಸೋದರ ಸಂಬಂಧಿ ಇಮಾಮ್ ಉಲ್ ಹಕ್ ಅವರು ಕಾಮರ್ಸ್‌ನಲ್ಲಿ ಪದವಿ ಪಡೆದಿದ್ದಾರೆ. ಇಮಾಮ್ ಉಲ್ ಹಕ್ ಲಾಹೋರ್‌ ವಿವಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್, ಹಾವರ್ಡ್‌ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಪೂರೈಸಿದ್ದಾರೆ. ಪಾಕಿಸ್ತಾನದ ನೀಳಕಾಯದ ಎಡಗೈ ವೇಗಿ ಶಾಹೀನ್ ಶಾ ಅಫ್ರಿದಿ, ತಮ್ಮ ಬದುಕಿನ ಆರಂಭದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಟ್ಟಿದ್ದರು. ಹೀಗಾಗಿ ಇವರು ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನಕೊಟ್ಟಂತೆ ಕಾಣ್ತಿಲ್ಲ. ಪಾಕಿಸ್ತಾನದ ಅನುಭವಿ ಆಟಗಾರ ಇಫ್ತಿಕಾರ್ ಅಹಮದ್ ಪದವಿ ಶಿಕ್ಷಣವನ್ನು ಪೂರೈಸಿದ ಬಳಿಕ ಪಾಕಿಸ್ತಾನ ತಂಡಕ್ಕೆ ಸೇರ್ಪಡೆಯಾಗಿದ್ದಾರೆ ಎನ್ನಲಾಗುತ್ತಿದೆ. ಪಾಕ್ ಟೀಮ್ ನ ಕ್ರಿಕೆಟರ್ಸ್ ಎಷ್ಟು ಓದಿದ್ರೇನು?, ಅಲ್ಲಿನ ಅಭಿಮಾನಿಗಳು ಟೀಮ್ ಇಂಡಿಯಾ ನೋಡಿದ್ರೆ ಉರಿದು ಬೀಳ್ತಾರೆ. ಹೀಗಾಗಿಯೇ ಈ ಬಾರಿ ಪಾಕಿಸ್ತಾನ ತಂಡಕ್ಕೆ ಭಾರತದ ಎದುರು ಗರ್ವಭಂಗವಾಗಿದೆ. ಇದ್ದ ಒಂದಷ್ಟು ಮಾನ ಮರ್ಯಾದೆ ಉಳಿಯಬೇಕೆಂದರೆ ಪಾಕಿಸ್ತಾನ ಸೂಪರ್ 8 ಹಂತಕ್ಕೆ ಏರಬೇಕಷ್ಟೇ.

Shwetha M

Leave a Reply

Your email address will not be published. Required fields are marked *