ಸರ್ಕಾರಿ ಶಾಲೆ ಶಿಕ್ಷಕರಿಗೆ ಗುಡ್ನ್ಯೂಸ್! – ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಿದ್ರೆ ಫಾರಿನ್ ಟ್ರಿಪ್ ಭಾಗ್ಯ!

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗ್ತಿದೆ. ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸ್ಬೇಕು, ಸರ್ಕಾರಿ ಶಾಲೆಗಳನ್ನ ಉಳಿಸ್ಬೇಕು ಅನ್ನೋ ಉದ್ದೇಶದಿಂದ ಶಿಕ್ಷಣ ಇಲಾಖೆ ಹೊಸ ಹೊಸ ಯೋಜನೆಗಳನ್ನ ತರುತ್ತಿದೆ. ಇದೀಗ ಶಾಲೆಗಳಲ್ಲಿ ದಾಖಲಾತಿ ಹೆಚ್ಚಾದ್ರೆ ಫಾರಿನ್ ಟೂರ್ ಭಾಗ್ಯ ಸಿಗಲಿದೆ.
ಇದನ್ನೂ ಓದಿ: ವಿ ಕಾಂಟ್ ಈವನ್ ಸ್ಲೀಪ್ ಎಂದ ದರ್ಶನ್ಗೆ ಕಂಬಳಿ ಭಾಗ್ಯ! – ಕೋರ್ಟ್ನಲ್ಲಿ ಇಂದು ಏನೇನಾಯ್ತು?
2026-27 ನೇ ಸಾಲಿಗೆ ಈಗಾಗಲೇ ದಾಖಲಾತಿ ಅಭಿಯಾನ ಶುರು ಮಾಡಲಾಗಿದ್ದು, ಮಕ್ಕಳ ದಾಖಲಾತಿ ಹೆಚ್ಚಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಹೀಗಾಗಿ 2026-27 ನೇ ಸಾಲಿಗೆ ದಾಖಲಾತಿಯನ್ನ ಹೆಚ್ಚು ಮಾಡುವವರಿಗೆ ವಿದೇಶ ಪ್ರವಾಸ ಸೌಲಭ್ಯ ಇರಲಿದೆ. ಅಧ್ಯಯನ ಹೆಸರಿನಲ್ಲಿ ವಿದೇಶಕ್ಕೆ ಹೋಗುವ ಅವಕಾಶ ಸಿಗಲಿದೆ.
DDPI, BEO, ಮುಖ್ಯ ಶಿಕ್ಷಕರು, ಪ್ರಾಂಶುಪಾಲರಿಗೆ ಫಾರಿನ್ ಟ್ರಿಪ್ ಆಫರ್ ಕೊಡಲಾಗಿದೆ. ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳ ಮಾಡಿದರೆ ಈ ಸೌಲಭ್ಯ ಸಿಗಲಿದೆ ಎಂದು ತಿಳಿಸಲಾಗಿದೆ.
2026-27ನೇ ಸಾಲಿಗೆ ಕೆಪಿಎಸ್ಗಳಲ್ಲಿ ಶೇ.25, ಉಳಿದ ಶಾಲೆ, ಕಾಲೇಜುಗಳಲ್ಲಿ ಶೇ.15 ದಾಖಲಾತಿ ಹೆಚ್ಚಿಸಲು ಗುರಿ ನೀಡಲಾಗಿದೆ. ಗುರಿ ಮೀರಿ ದಾಖಲಾತಿ ಮಾಡುವ ತಲಾ ಐವರು ಡಿಡಿಪಿಐ, ಬಿಇಒ, ಮುಖ್ಯಶಿಕ್ಷಕರು, ಪ್ರಾಂಶುಪಾಲರಿಗೆ ವಿದೇಶಿ ಅಧ್ಯಯನ ಪ್ರವಾಸ ಇರಲಿದೆ. ಸರ್ಕಾರಿ ಶಾಲೆಗಳ ಬಗ್ಗೆ ಜಾಗೃತಿಗೆ ಪ್ರತಿ ಜಿಲ್ಲೆಯಲ್ಲೂ ರಾಯಭಾರಿಗಳ ಆಯ್ಕೆಗೆ ಇಲಾಖೆ ಸೂಚಿಸಿದೆ.

ನೋಡಿರಿ

