ಕೇಂದ್ರ ತನಿಖಾ ಸಂಸ್ಥೆಯು ತೃಣಮೂಲ ಕಾಂಗ್ರೆಸ್ ಪಕ್ಷದ ದಾಖಲೆಗಳನ್ನು ಕದ್ದಿದೆ – ಮಮತಾ ಬ್ಯಾನರ್ಜಿ

ಕೇಂದ್ರ ತನಿಖಾ ಸಂಸ್ಥೆಯು ತೃಣಮೂಲ ಕಾಂಗ್ರೆಸ್ ಪಕ್ಷದ ದಾಖಲೆಗಳನ್ನು ಕದ್ದಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅಕ್ರಮ ಹಣಕಾಸು ವರ್ಗಾವಣೆಯ ತನಿಖೆಯ ಭಾಗವಾಗಿ ರಾಜಕೀಯ ಸಲಹಾ ಸಂಸ್ಥೆ I-PAC ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತು. ಇದಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆರೋಪ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯ ಎರಡು ಸ್ಥಳಗಳಲ್ಲಿ ಶೋಧ ನಡೆಸಿತು. ಒಂದರಲ್ಲಿ ಮಧ್ಯ ಕೋಲ್ಕತ್ತಾದಲ್ಲಿರುವ ಐ-ಪ್ಯಾಕ್‌ನ ಹಿರಿಯ ಕಾರ್ಯಕರ್ತ ಪ್ರತೀಕ್ ಜೈನ್ ಅವರ ನಿವಾಸ, ಮತ್ತೊಂದರಲ್ಲಿ ಸಾಲ್ಟ್ ಲೇಕ್‌ನ ಸೆಕ್ಟರ್ ‘ವಿ’ನಲ್ಲಿರುವ ಗೋದ್ರೆಜ್ ವಾಟರ್‌ಸೈಡ್ ಕಟ್ಟಡದಲ್ಲಿನ ಸಂಸ್ಥೆಯ ಕಚೇರಿ ಸೇರಿದೆ. ಜೈನ್ ಅವರನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ತಂತ್ರಗಾರಿಕಾ ತಂಡದ ಪ್ರಮುಖ ಸದಸ್ಯರಾಗಿ ಪರಿಗಣಿಸಲಾಗಿದೆ. ದಾಳಿಯ ಸುದ್ದಿ ಹರಡುತ್ತಿದ್ದಂತೆ, ಟಿಎಂಸಿ ನಾಯಕರು ಸಾಲ್ಟ್ ಲೇಕ್ ಕಚೇರಿಯ ಹೊರಗೆ ಜಮಾಯಿಸಲು ಪ್ರಾರಂಭಿಸಿದರು. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಬಿಧಾನ್‌ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ತಲುಪಿದರು. ಆರಂಭದಲ್ಲಿ ಶೋಧ ನಡೆದಿದ್ದ ಒಂದು ಸ್ಥಳದಲ್ಲಿದ್ದ ಬ್ಯಾನರ್ಜಿ, ನಂತರ ಸೆಕ್ಟರ್ V ಕಚೇರಿಯ ಕಡೆಗೆ ತೆರಳಿದರು.
ಇದನ್ನೂ ಓದಿ: ಅರ್ಜುನ್ ಕೈ ಹಿಡಿಯದ ಕ್ರಿಕೆಟ್ – ಮೆರೆಯೋ ಮುನ್ನವೇ ಸಚಿನ್ ಪುತ್ರ ಮರೆ?
ʼʼಇಡಿ ದಾಳಿಯು ತಮ್ಮ ಪಕ್ಷದ ಆಂತರಿಕ ರಾಜಕೀಯ ಮಾಹಿತಿಯನ್ನು ಪಡೆಯುವ ಉದ್ದೇಶದಿಂದಲೇ ನಡೆದಿದೆʼʼ ಎಂದು ಬ್ಯಾನರ್ಜಿ ಆರೋಪಿಸಿದರು. ʼʼಅಭ್ಯರ್ಥಿಗಳ ಪಟ್ಟಿ, ಪಕ್ಷದ ಕಾರ್ಯತಂತ್ರ, ಯೋಜನೆಗಳು ಹಾಗೂ ರಹಸ್ಯ ದಾಖಲೆಗಳನ್ನು ಸಂಗ್ರಹಿಸಲು ಇಡಿ ನಮ್ಮ ಕಚೇರಿಗೆ ಬಂದಿರುವುದು ಅತ್ಯಂತ ದುರದೃಷ್ಟಕರ ಸಂಗತಿʼʼ ಎಂದು ಅವರು ಆರೋಪಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ವಾಗ್ದಾಳಿ ನಡೆಸಿದ ಬ್ಯಾನರ್ಜಿ, ಇದರಲ್ಲಿ ಅವರ ಕೈವಾಡವಿದೆ ಎಂದು ಆರೋಪಿಸಿದರು. ದೇಶವನ್ನು ಸುರಕ್ಷಿತವಾಗಿಡಲು ಸಾಧ್ಯವಾಗದ ಈ ಕೆಟ್ಟ ಹಾಗೂ ಅಸಭ್ಯ ಗೃಹ ಸಚಿವರೇ ಇದರ ಹಿಂದೆ ಇದ್ದಾರೆ. ಅಮಿತ್ ಶಾ ನಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಸಂಗ್ರಹಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದರು. ಜತೆಗೆ ಒಂದು ಪ್ರಕರಣದಲ್ಲಿ ಮತದಾರರ ಹೆಸರನ್ನು ಅಳಿಸಲಾಗುತ್ತಿದ್ದು, ಇನ್ನೊಂದು ಪ್ರಕರಣದಲ್ಲಿ ದಾಖಲೆಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ನೋಡಿರಿ

