ಮಲಯಾಳಂ ಸೂಪರ್ ಸ್ಟಾರ್‌ಗಳನ್ನು ಬೆಂಡೆತ್ತಿದ ಇಡಿ – ಮಮ್ಮುಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ದಾಳಿ

ಮಲಯಾಳಂ ಸೂಪರ್ ಸ್ಟಾರ್‌ಗಳನ್ನು ಬೆಂಡೆತ್ತಿದ ಇಡಿ – ಮಮ್ಮುಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ದಾಳಿ

ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್‌ಗಳಿಗೆ ಬುಧವಾರ ಮತ್ತೊಂದು ಶಾಕ್ ಎದುರಾಗಿದೆ. ಕಾರು ಸ್ಮಗ್ಲಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕೇರಳ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮುಟಿ, ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರ್ ಹಾಗೂ ಇನ್ನೂ ಕೆಲವರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಿದೆ.

ಇದನ್ನೂ ಓದಿ: ಬಿಗ್‌ಬಾಸ್ ಶೋ ಎಪಿಸೋಡ್ ಎಷ್ಟು ರೆಡಿ ಇದೆ ಗೊತ್ತಾ? – ಆಮೇಲೆ ಬಿಗ್‌ಬಾಸ್ ಶೋ ಕಥೆಯೇನು?

ಮಲಯಾಳಂ ಚಿತ್ರರಂಗದಲ್ಲಿ ಮೆರೆಯುತ್ತಿರುವ ಸ್ಟಾರ್ ನಟರಿಗೆ ಇಡಿ ಸರಿಯಾಗಿಯೇ ಬೆಂಡೆತ್ತುತ್ತಿದೆ. ಯಾಕೆಂದರೆ, ಕೇರಳ ರಾಜ್ಯದಾದ್ಯಂತ ಸ್ಮಗ್ಲಿಂಗ್ ಪ್ರಕರಣದ ತನಿಖೆ ಜೋರಾಗಿದೆ. ವಿದೇಶಗಳ ಐಶಾರಾಮಿ ಕಾರುಗಳನ್ನು ಅಕ್ರಮವಾಗಿ ಖರೀದಿ ಮಾಡಲಾಗಿದೆ ಎಂಬ ಶಂಕೆ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಕೆಲ ವಾರಗಳ ಹಿಂದಷ್ಟೆ ಮಲಯಾಳಂ ಸ್ಟಾರ್ ನಟರಾದ ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಮನೆಗಳ ಮೇಲೆ ದಾಳಿ ಮಾಡಿದ್ದರು. ದಾಳಿ ಸಮಯದಲ್ಲಿ ಪೃಥ್ವಿರಾಜ್ ಸುಕುಮಾರ್ ಅವರಿಗೆ ಸೇರಿದ ವಾಹನವನ್ನು ಜಪ್ತಿ ಸಹ ಮಾಡಲಾಗಿತ್ತು. ಇದೀಗ ಇಡಿ ದುಲ್ಕರ್ ಸಲ್ಮಾನ್ ಮತ್ತು ಅವರ ತಂದೆ ಮಮ್ಮುಟಿ, ಪೃಥ್ವಿರಾಜ್ ಸುಕುಮಾರ್ ಮನೆಗಳ ಮೇಲೆ ದಾಳಿ ಮಾಡಿದೆ. ಮಮ್ಮುಟಿ ಅವರಿಗೆ ಸೇರಿದ ಚೆನ್ನೈನ ಕಚೇರಿ, ಮಮ್ಮುಟಿ ಅವರ ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

ದುಲ್ಕರ್ ಸಲ್ಮಾನ್ ಅವರ ಕಚೇರಿ, ನಿವಾಸ. ಪೃಥ್ವಿರಾಜ್ ಸುಕುಮಾರ್ ಅವರ ಮನೆ, ನಟ ಅಮಿತ್ ಚಕ್ಕಲಕಲ್ ಅವರ ನಿವಾಸದ ಮೇಲೆಯೂ ಸಹ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು 17 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಭೂತಾನ್ ಸೇನೆಯಿಂದ ವಿದೇಶಿ ಐಶಾರಾಮಿ ಕಾರುಗಳನ್ನು ಕಡಿಮೆ ದರಕ್ಕೆ ಖರೀದಿ ಮಾಡಿ ಅವನ್ನು ಕಳ್ಳದಾರಿಯಿಂದ ಭಾರತಕ್ಕೆ ತಂದು, ನಕಲಿ ಹೆಸರುಗಳಲ್ಲಿ ನೊಂದಣಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಇಂಥಹಾ ನಕಲಿ ದಾಖಲೆಯ, ತೆರಿಗೆ ವಂಚಿಸಿ ತಂದಿರುವ ಕಾರುಗಳು ಕೇರಳದಲ್ಲಿ ಹೆಚ್ಚಾಗಿರುವ ಶಂಕೆ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

Sulekha