ಮೊಬೈಲ್ ಕಳೆದು ಹೋದರೂ ಮತ್ತೆ ಸಿಗುತ್ತೆ! – ಸರ್ಕಾರದ ಹೊಸ ಪ್ಲಾನ್‌ ಏನು?

ಮೊಬೈಲ್ ಕಳೆದು ಹೋದರೂ ಮತ್ತೆ ಸಿಗುತ್ತೆ! – ಸರ್ಕಾರದ ಹೊಸ ಪ್ಲಾನ್‌ ಏನು?

ಮೊಬೈಲ್‌ ಒಂದು ಕ್ಷಣ ನಮ್ಮ ಕಣ್ಣ ಮುಂದೆ ಇಲ್ಲದಿದ್ದರೂ ಆಗುವ ತಲೆಬಿಸಿ ಅಷ್ಟಿಷ್ಟಲ್ಲ. ಇದು ದುಬಾರಿ ವಸ್ತು ಅನ್ನುವುದಕ್ಕಿಂತಲೂ ಅದರಲ್ಲಿರುವ ಫೋಟೋ, ರೀಲ್ಸ್‌, ದಾಖಲೆಗಳು ಎಲ್ಲಿ ಕಳೆದು ಹೋಗುತ್ತದೆ ಅನ್ನುವ ಭಯವಂತೂ ಇದ್ದೇ ಇರುತ್ತದೆ. ಹೀಗಾಗಿ ಎಲ್ಲರೂ ಮೊಬೈಲ್‌ ಕಳೆದು ಹೋಗಬಾರದು ಎಂದು ಮುನ್ನೆಚ್ಚರಿಕೆ ವಹಿಸುತ್ತಾರೆ. ಒಂದು ವೇಳೆ ಯಾರಾದರೂ ನಮ್ಮ ಮೊಬೈಲ್‌ ಬಳಸಿದರೆ, ಎಲ್ಲಿ ಎಲ್ಲಾ ದಾಖಲೆಗಳು ಡಿಲೀಟ್‌ ಆಗುತ್ತದೆ, ಮಾಹಿತಿಗಳು ಸೋರಿಕೆಯಾಗುತ್ತದೆ  ಎಂಬ ಭಯ ಅನೇಕರಿಗೆ ಇದೆ. ಆದರೆ, ಇನ್ಮುಂದೆ ನಿಮ್ಮ ಸ್ಮಾರ್ಟ್​ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಭಯಪಡುವ ಅಗತ್ಯವಿಲ್ಲ. ಯಾಕೆಂದರೆ ಕೇಂದ್ರ ಸರ್ಕಾರವು ಕಳೆದುಹೋದ ಅಥವಾ ಕದ್ದ ಫೋನ್ ಅನ್ನು ಪತ್ತೆ ಮಾಡಿ ಮರಳಿ ಕೊಡಿಸುತ್ತದೆ.

ಇದನ್ನೂ ಓದಿ: 5ಜಿ ಮೊಬೈಲ್ ಖರೀದಿಸುವ ಮೊದಲು ಈ ಅಂಶಗಳನ್ನು ನೆನಪಲ್ಲಿಟ್ಟುಕೊಳ್ಳಿ……

ಸಾಮಾನ್ಯವಾಗಿ ನಾವು ಪ್ರಯಾಣ ಮಾಡುವ ವೇಳೆ ಕೆಲವೊಂದು ಬಾರಿ ಮೊಬೈಲ್‌ ಕಳೆದುಹೋಗುತ್ತದೆ. ಈ ವೇಳೆ ಮೊಬೈಲ್‌ ಎಲ್ಲಿ ಕಳೆದು ಹೋಗಿದೆ ಎಂದು ಪತ್ತೆ ಹಚ್ಚುವುದು ಕಷ್ಟ. ಇನ್ನು ವಿಶೇಷ ಜನಜಂಗುಳಿ ಪ್ರದೇಶಗಳಲ್ಲಿ ಕೂಡ ಮೊಬೈಲ್‌ ಕಳ್ಳತನವಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಮೊಬೈಲ್ ಮತ್ತೆ ಮರಳಿ ಸಿಗುವುದು ಕಷ್ಟ. ಹೀಗಾಗಿ ಇದನ್ನು ಪರಿಹರಿಸಲು, ಸರ್ಕಾರವು ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದರ ಸಹಾಯದಿಂದ ನಿಮ್ಮ ಕಳೆದುಹೋದ ಫೋನ್ ಅನ್ನು ಸುಲಭವಾಗಿ ಮರಳಿ ಪಡೆಯಬಹುದು.

ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್  ಅವರು ಕಳ್ಳತನವಾದ ಹಾಗೂ ಕಳೆದು ಹೋದ ಮೊಬೈಲ್‌ ಅನ್ನು ಪತ್ತೆಹಚ್ಚಲು ಹೊಸದಾಗಿ ”ಸಂಚಾರ್ ಸಾಥಿ ಪೋರ್ಟಲ್” ಅನ್ನು ಪ್ರಾರಂಭಿಸಿದ್ದಾರೆ. ಮೇ 17 ರಿಂದ ಜನರಿಗೆ ಇದರ ಸೇವೆ ಸಿಗಲಿದೆ. ಮೇ 17 ವಿಶ್ವ ಟೆಲಿಕಾಂ ದಿನವಾಗಿದ್ದು, ಈ ಸಂದರ್ಭದಲ್ಲಿ ಸಂಚಾರ್ ಸಾಥಿ ಪೋರ್ಟಲ್ ಅನಾವರಣಗೊಳ್ಳಲಿದೆ.

ಸಂಚಾರ್ ಸಾಥಿ ಪೋರ್ಟಲ್ ಅಡಿಯಲ್ಲಿ, ಬಳಕೆದಾರರು ತಮ್ಮ ಫೋನ್ ಅನ್ನು ಎಲ್ಲಿದೆ ಎಂದು ಹುಡುಕಬಹುದು ಅಥವಾ ಸ್ವಿಚ್ ಆಫ್ ಮಾಡಬಹುದು. ಆ್ಯಪಲ್‌ ಐಫೋನ್​ನಲ್ಲಿರುವ ಫೈಂಡ್ ಮೈ ಫೋನ್ ವೈಶಿಷ್ಟ್ಯದಂತೆ ಇದು ಆಂಡ್ರಾಯ್ಡ್ ಫೋನ್​ನಲ್ಲಿ ಕಾರ್ಯನಿರ್ವಹಿಸಲಿದೆ. ಇದನ್ನು ಸ್ಪಷ್ಟವಾಗಿ ಯಾವ‌ ರೀತಿ ಉಪಯೋಗಿಸಬಹುದು ಎಂಬುದನ್ನು ಸರ್ಕಾರ ಇನ್ನಷ್ಟೆ ಬಹಿರಂಗ ಪಡಿಸಬೇಕಿದೆ.

suddiyaana