ಕೆಟ್ಟು ನಿಂತಿದ್ದ ಬಸ್​ಗೆ ಟ್ರಕ್​ ಡಿಕ್ಕಿ –  ಸ್ಥಳದಲ್ಲೇ 11 ಮಂದಿ ಸಾವು

ಕೆಟ್ಟು ನಿಂತಿದ್ದ ಬಸ್​ಗೆ ಟ್ರಕ್​ ಡಿಕ್ಕಿ –  ಸ್ಥಳದಲ್ಲೇ 11 ಮಂದಿ ಸಾವು

ಭರತ್ಪುರ್: ಬೆಳ್ಳಂಬೆಳಗ್ಗೆ ಬಸ್‌ ಹಾಗೂ ಟ್ರಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಸುಮಾರು 11 ಮಂದಿ ಸಾವನ್ನಪ್ಪಿದ ಘಟನೆ ಜೈಪುರ-ಆಗ್ರಾ​ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬಸ್​, ರಾಜಸ್ಥಾನದ ಪುಸ್ಕರ್​ನಿಂದ ಉತ್ತರ ಪ್ರದೇಶದ ಬೃಂದಾವನಗೆ ತೆರಳುತ್ತಿತ್ತು. ಸೇತುವೆ ಮೇಲೆ ಬಸ್​ ಕೆಟ್ಟು ನಿಂತಿದ್ದ ಸಂದರ್ಭದಲ್ಲಿ ಚಾಲಕ ಮತ್ತು ಕೆಲ ಪ್ರಯಾಣಿಕರು ಬಸ್​ ಹಿಂಭಾಗದಲ್ಲಿ ನಿಂತಿದ್ದರು. ಈ ವೇಳೆ ವೇಗವಾಗಿ ಬಂದ ಟ್ರಕ್​, ಬಸ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ 11 ಮಂದಿ ಸಾವನ್ನಪ್ಪಿದ್ದು, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕೇರಳದಲ್ಲಿ ನಾಲ್ವರಿಗೆ ನಿಫಾ ಸೋಂಕು ದೃಢ – ಕೇರಳದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸುವಂತೆ ಸೂಚನೆ

ಇಂಧನ ಖಾಲಿಯಾದ್ದರಿಂದ ಬಸ್​, ಲಖನ್​ಪುರ್​ ಏರಿಯಾದ ಅಂತ್ರ ಫ್ಲೈಓವರ್​ ಮೇಲೆ ನಿಂತಿತ್ತು. ಈ ವೇಳೆ ಟ್ರಕ್​ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 5 ಪುರುಷರು ಮತ್ತು 6 ಮಹಿಳೆಯರು ಸ್ಥಳದಲ್ಲೇ ದುರಂತ ಸಾವಿಗೀಡಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಸ್​ನ ದುರಸ್ತಿ ಕಾರ್ಯ ನಡೆಯುತ್ತಿರುವಾಗ ಹೆದ್ದಾರಿಯಲ್ಲಿ ನಿಂತಿತ್ತು. ಈ ವೇಳೆ ಕೆಲವು ಪ್ರಯಾಣಿಕರು ಬಸ್‌ನಲ್ಲಿದ್ದರೆ, ಇನ್ನು ಕೆಲವರು ಹೊರಗೆ ನಿಂತಿದ್ದರು. ಈ ವೇಳೆ ಟ್ರಕ್​ ಡಿಕ್ಕಿ ಹೊಡೆದಿದೆ ಎಂದು ಭರತ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಮೃದುಲ್ ಕಚವಾ ಹೇಳಿದ್ದಾರೆ.

Shwetha M