ಜಾಲೆಂಜ್‌ನಲ್ಲಿ ಗೆಲ್ಲಬೇಕು ಅಂತಾ ಖಾರದ ಚಿಪ್ಸ್ ತಿಂದ ಬಾಲಕ – ಕೆಲವೇ ಹೊತ್ತಲ್ಲಿ ಉಸಿರು ಚೆಲ್ಲಿದ ಬಾಲಕ
ಹಿಂದೆಲ್ಲಾ ಮೊಬೈಲ್ ಇರಲಿಲ್ಲ.. ಹೀಗಾಗಿ ಮಕ್ಕಳು ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ, ಗೋಲಿ ಆಟ, ಅಳಗುಣಿ ಮನೆ ಇಂತಹ ಆಟಗಳನ್ನೇ ಆಡಿದ್ದು ಹೆಚ್ಚು.. ಆದ್ರೆ ಈಗ ಹಾಗಲ್ಲ.. ಮಕ್ಕಳಿಗೆ ಈ ಆಟಗಳ ಬಗ್ಗೆ ತಿಳಿದೇ ಇಲ್ಲ.. ಈಗ ಮೊಬೈಲ್‌ನಲ್ಲೇ ಕಾಲ ಕಳೀತಾ ಇರ್ತಾರೆ.. ಆನ್‌ಲೈನ್ ಗೇಮ್ ಮೊರೆ ಹೋಗುತ್ತಾರೆ. ಇದೀಗ ಇಲ್ಲೊಬ್ಬ ಬಾಲಕ ಆನ್‌ಲೈನ್‌ನಲ್ಲಿ ಚಾಲೆಂಜ್‌ನಲ್ಲಿ ಭಾಗವಹಿಸಲು ಹೋಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ರೆಡ್ ಕಾರ್ಪೆಟ್ ಮೇಲೆ ಮಿಂಚಿದ ಐಶ್ವರ್ಯಾ ರೈ – ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ Cannes 2024 ನಲ್ಲಿ ಭಾಗಿ
ಹೌದು, ಅಚ್ಚರಿಯಾದ್ರೂ ಸತ್ಯ. ಈಗಿನ ಮಕ್ಕಳು ಫೋನ್‌ನಲ್ಲೇ ಕಾಲ ಕಳೆಯುತ್ತಾರೆ. ಊಟ, ಪಾಠಕ್ಕಿಂತ ಮೊದಲು ಫೋನ್ ಬೇಕು ಅಂತಾ ಹಠ ಹಿಡಿಯುತ್ತಾರೆ. ಮಕ್ಕಳ ಹಠಕ್ಕೆ ಬೇಸತ್ತು ಹೆತ್ತವರು ಕೂಡ ಫೋನ್ ಕೊಟ್ಟು ಬಿಡುತ್ತಾರೆ. ಈಗಿನ ಮಕ್ಕಳಂತೂ ಆನ್‌ಲೈನ್‌ನಲ್ಲಿ ಏನೇನೋ ಮಾಡಲು ಹೋಗಿ ಪ್ರಾಣಕ್ಕೆ ಅಪಾಯ ತಂದಕೊಳ್ಳುತ್ತಾರೆ. ಇಂತಹದ್ದೇ ಒಂದು ಚಾಲೆಂಜ್‌ವೊಂದರಲ್ಲಿ ಭಾಗವಹಿಸಿದ್ದ 14 ವರ್ಷದ ಬಾಲಕ ಹೃದಯ ಸ್ತಂಭನದಿಂದ ಮೃತನಾಗಿದ್ದಾನೆ.
ಅಮೆರಿಕಾದ 14 ವರ್ಷದ ಹ್ಯಾರಿಸ್ ವೊಲೊಬಾಹ್ ಮೃತ ಬಾಲಕ. ಸೋಶಿಯಲ್ ಮೀಡಿಯಾದ ಚಾಲೆಂಜ್‌ವೊಂದರಲ್ಲಿ ಭಾಗವಹಿಸಿದದ್ದ ಹ್ಯಾರಿಸ್, ಒನ್ ಚಿಪ್ ಚಾಲೆಂಜ್‌ನಲ್ಲಿ ಭಾಗಿಯಾಗಿದ್ದನು. ಅತ್ಯಂತ ಖಾರವಾದ ಚಿಪ್ಸ್ ತಿನ್ನಬೇಕು ಅಂತಾ ಚಾಲೆಂಜ್ ಹಾಕಲಾಗಿತ್ತು. ಬಾಲಕ ಚಾಲೆಂಗ್‌ನಲ್ಲಿ ಗೆಲ್ಲಬೇಕು ಅಂತಾ ಹೆಚ್ಚು ಹೆಚ್ಚು ಚಿಪ್ಸ್ ತಿಂದಿದ್ದಾನೆ. ಇದರಿಂದಾಗಿ ಬಾಲಕಮಿಗೆ ಹೃದಯ ಸ್ತಂಭನ ಆಗಿದೆ. ಈ ಚಿಪ್ಸ್ ಕ್ಯಾರೊಲಿನಾ ರೀಪರ್ ಮತ್ತು ನಾಗಮ ಪೈಪರ್ ನಿಂದ ತಯಾರಿಸಲಾಗಿರುತ್ತದೆ. ಆದ್ದರಿಂದ ಈ ಚಿಪ್ಸ್ ಅತ್ಯಂತ ಖಾರವಾಗಿರುತ್ತದೆ.
ಕ್ಯಾಪ್ಸೈಸಿನ್ ಎಂಬ ಮೆಣಸಿನಕಾಯಿ ಅಂಶವನ್ನುಅತಿಯಾಗಿ ಸೇವಿಸಿರುವ ಕಾರಣ ಹ್ಯಾರಿಸ್‌ಗೆ ಹೃದಯ ಸ್ತಂಭನವಾಗಿದೆ ಎಂದು ಸ್ಥಳೀಯ ಮುಖ್ಯ ವೈದ್ಯಕೀಯ ಪರೀಕ್ಷ ಅಧಿಕಾರಿಗಳು ತಿಳಿಸಿದ್ದಾರೆ. ಮರಣೋತ್ತರ ಶವ ಪರೀಕ್ಷೆಯಲ್ಲಿಯೂ ಸಾವಿಗೆ ಅತಿಯಾದ ಖಾರ ಸೇವನೆ ಎಂದು ತಿಳಿದು ಬಂದಿದೆ.
ಈ ಖಾರವಾರ ಚಿಪ್ಸ್ ತಿನ್ನೋ ಚಾಲೆಂಜ್ ಹಲವು ಪ್ರದೇಶಗಳಲ್ಲಿ ನಡೆಯುತ್ತದೆ. ಈ ಚಾಲೆಂಜ್‌ನಲ್ಲಿ ಭಾಗವಹಿಸಿದ್ದ ಕ್ಯಾಲಿಫೋರ್ನಿಯಾದ ಮೂವರು ಮತ್ತು ಮಿನ್ನೇಸೋಟದಲ್ಲಿಯ ಏಳು ಜನರು ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.