ಶ್ರಾವಣದಲ್ಲಿ ಮಾಡಿ ವಿಶೇಷ ಅಡುಗೆ – ಸಿಂಪಲ್ ಆಗಿರೋ ಈ ಸಿಹಿ ಕಡುಬು ಒಮ್ಮೆ ಟ್ರೈ ಮಾಡಿ

ಶ್ರಾವಣದಲ್ಲಿ ಮಾಡಿ ವಿಶೇಷ ಅಡುಗೆ – ಸಿಂಪಲ್ ಆಗಿರೋ ಈ ಸಿಹಿ ಕಡುಬು ಒಮ್ಮೆ ಟ್ರೈ ಮಾಡಿ

ಶ್ರಾವಣದಲ್ಲಿ ಸಾಕಷ್ಟು ಜನ ವಿಶೇಷ ತಿಂಡಿ ತನಿಸುಗಳನ್ನ ಮಾಡುತ್ತಾರೆ. ನೀವು ಕೂಡ ಈ ಸಿಂಪಲ್ ಆಗಿರುವ  ಸಿಹಿ ಕಡುಬು ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು

ತೊಳೆದ ಅಕ್ಕಿಯ ಹಿಟ್ಟು ಎರಡು ಪಾವು

ಒಂದು ತೆಂಗಿನ ಕಾಯಿ ತುರಿ

ಸಣ್ಣಗೆ ಹೆರೆದಿಟ್ಟಬೆಲ್ಲ  ಅರ್ಧ ಕೆಜಿ

ಏಲಕ್ಕಿ ಪುಡಿ- ಅರ್ಧ ಚಮಚ

ಎಣ್ಣೆ- ಎರಡು ಚಮಚ

ನೀರು- ಒಂದು ಲೋಟ

ವಿಧಾನ: (ಅಕ್ಕಿಯನ್ನು ಎರಡರಿಂದ ಮುರು ಗಂಟೆಗಳ ಕಾಲ ನೆನೆಸಿ, ಒಣಗಿಸಿ, ಹಿಟ್ಟು ಮಾಡಿಟ್ಟುಕೊಳ್ಳಬೇಕು)

ಒಂದು ದಪ್ಪ ತಳದ ಪಾತ್ರೆಯಲ್ಲಿ, ನೀರನ್ನು ಹಾಕಿ ಚನ್ನಾಗಿ ಕಿಡಿಯಲು ಇಡಬೇಕು. ಅದಕ್ಕೆ ಅರ್ಧ ಚಮಚ ಎಣ್ಣೆ, ಒಂದು ಚಿಟಿಕೆ ಉಪ್ಪನ್ನು ಹಾಕಿ, ಆಮೇಲೆ ಹಿಟ್ಟನ್ನು ಸ್ವಲ್ಪ ಸ್ವಲ್ಪವಾಗಿ ಹಾಕಿ, ತೊಳೆಸುತ್ತಾ ಬರಬೇಕು, ಹಿಟ್ಟು ಪಾತ್ರೆಗೆ ಅಂಟದಂತೆ ಬಂದಾಗ ಪೂರ್ತಿ ಬೆಂದಿದೆ ಎಂದರ್ಥ. ಈ ಹಂತದಲ್ಲಿ ಅದನ್ನ ಕೆಳಗಿಳಿಸಿಕೊಳ್ಳಬೇಕು.

ಒಂದು ಪಾತ್ರೆಯಲ್ಲಿ ಬೆಲ್ಲ ಮತ್ತು ಕಾಯಿ ಹಾಕಿ ಒಲೆಯ ಮೇಲಿಟ್ಟು, ಬೆಲ್ಲ ಪೂರ್ತಿ ಕರಗಿ, ಹೊಂದಿಕೊಳ್ಳುವ ತನಕ ತಿರುಗಿಸಬೇಕು. ಎರಡೂ ಚನ್ನಾಗಿ ಹೊಂದಿಕೊಂಡಮೇಲೆ ಏಲಕ್ಕಿ ಪುಡಿ ಹಾಕಿ ಕೆಳಗಿಳಿಸಿಕೊಳ್ಳಬೇಕು.

ಬೆಂದ ಹಿಟ್ಟನ್ನು ಚೆನ್ನಾಗಿ ನಾದಿಕೊಂಡು, ಹಾಳೆಗಳನ್ನು ಲಟ್ಟಿಸಿಕೊಳ್ಳಬೇಕು, ಹೂರಣವನ್ನಿಟ್ಟು, ನೀರಿನಿಂದ ಅಂಟಿಸಿ ಕಡುಬು ಮುಚ್ಚಬೇಕು. ಎಣ್ಣೆ ಸವರಿದ ಇಡ್ಲಿ ತಟ್ಟೆಯಲ್ಲಿಟ್ಟು, ಹಬೆಯಲ್ಲಿ ಬೇಯಿಸಿಕೊಂಡರೆ ರುಚಿಯಾದ ಆರೋಗ್ಯಕರ ಕಡುಬು ಸಿದ್ಧ.

Kishor KV

Leave a Reply

Your email address will not be published. Required fields are marked *