ಅಫ್ಘಾನಿಸ್ತಾನ & ತಜಕಿಸ್ತಾನದಲ್ಲಿ ಭೂಕಂಪ.. ಮಣಿಪುರ, ಮೇಘಾಲಯದಲ್ಲೂ ಭೂಕಂಪನ..!

ಅಫ್ಘಾನಿಸ್ತಾನ & ತಜಕಿಸ್ತಾನದಲ್ಲಿ ಭೂಕಂಪ.. ಮಣಿಪುರ, ಮೇಘಾಲಯದಲ್ಲೂ ಭೂಕಂಪನ..!

ಭಯಾನಕ ಭೂಕಂಪಕ್ಕೆ ಸಿಲುಕಿ ಟರ್ಕಿ ಹಾಗೂ ಇರಾನ್ ದೇಶದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿಯಾಗಿದೆ. 50 ಸಾವಿರಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಈ ಸಾವು ನೋವಿನ ದೃಶ್ಯಗಳು ಹಸಿಯಾಗಿರುವಾಗಲೇ ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ ಭೂಕಂಪ ಸಂಭವಿಸಿದೆ. ಹಾಗೇ ಮಣಿಪುರ, ಮೇಘಾಲಯದಲ್ಲೂ ಭೂಮಿ ನಡುಗಿದ ಅನುಭವವಾಗಿದೆ.

ಇದನ್ನೂ ಓದಿ : ಸಿರಿವಂತರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಟ್ವಿಟ್ವರ್ ದೊರೆ – ಎಲಾನ್ ಮಸ್ಕ್ ಮತ್ತೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿ

ಮಣಿಪುರದ ನೋನಿ ಜಿಲ್ಲೆ ಮತ್ತು ಮೇಘಾಲಯದ ತುರಾದಲ್ಲಿ ಮಂಗಳವಾರ ಭೂಕಂಪನದ ಅನುಭವವಾಗಿದೆ. ಮಣಿಪುರದ ನೋನಿ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.

ಮೇಘಾಲಯದ ತುರಾ ಜಿಲ್ಲೆಯಲ್ಲೂ ಭೂಕಂಪನದ ಅನುಭವವಾಗಿದೆ. 3.7 ತೀವ್ರತೆಯ ಭೂಕಂಪನ ಸಂಭವಿಸಿದೆ. 29 ಕಿ.ಮೀ ಆಳದಲ್ಲಿ 3.7 ತೀವ್ರತೆಯ ಭೂಕಂಪನದ ಅನುಭವವಾಗಿದೆ. ಅಫ್ಘಾನಿಸ್ತಾನ ಮತ್ತು ತಜಕಿಸ್ತಾನದಲ್ಲಿ ಕ್ರಮವಾಗಿ 4.1 ಮತ್ತು 4.3 ತೀವ್ರತೆಯ ಭೂಕಂಪ ಸಂಭವಿಸಿದೆ.

suddiyaana