ಭೀಕರ ಭೂಕಂಪನಕ್ಕೆ ನಲುಗಿದ ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಾ – 1,000 ಕ್ಕೂ ಅಧಿಕ ಮನೆಗಳು ನೆಲಸಮ, 9 ಲಕ್ಷ ಜನ ನಿರಾಶ್ರಿತ!

ಭೀಕರ ಭೂಕಂಪನಕ್ಕೆ ನಲುಗಿದ ದ್ವೀಪರಾಷ್ಟ್ರ ಪಪುವಾ ನ್ಯೂಗಿನಿಯಾ – 1,000 ಕ್ಕೂ ಅಧಿಕ ಮನೆಗಳು ನೆಲಸಮ, 9 ಲಕ್ಷ ಜನ ನಿರಾಶ್ರಿತ!

ನೈಋತ್ಯ ಪೆಸಿಫಿಕ್‌ನಲ್ಲಿರುವ ಪಪುವಾ ನ್ಯೂಗಿನಿಯ ದ್ವೀಪ ರಾಷ್ಟ್ರದಲ್ಲಿ ಭೀಕರ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 6.9ರಷ್ಟು ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.

ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ.  ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಗುಟ್ಟಾಗಿ ಮದುವೆಯಾದ ಬಾಲಿವುಡ್​ ನಟಿ ತಾಪ್ಸಿ ಪನ್ನು!

ತೀವ್ರ ಭೂಕಂಪಕ್ಕೆ ನಲುಗಿರೋ ಪಪುವಾ ನ್ಯೂಗಿನಿಯಾದಲ್ಲಿ ಪ್ರವಾಹದ ಪರಿಸ್ಥಿತಿ ಕೂಡ ಎದುರಾಗಿದೆ. ಸೆಪಿಕ್ ನದಿ ತುಂಬಿ ಹರಿಯುತ್ತಿದ್ದು, ಹಲವಾರು ಹಳ್ಳಿಗಳು ಸಂಪೂರ್ಣ ಮುಳುಗಡೆಯಾಗಿದೆ. ಬರೋಬ್ಬರಿ 1000 ಮನೆಗಳು ನೆಲಸಮವಾಗಿದೆ.  9 ಲಕ್ಷ ಜನರು ನಿರಾಶ್ರಿತರಾಗಿದ್ದು, ಹಲವು ನಗರ ಪ್ರದೇಶದ ಜನರು ಹೊರಗಡೆ ಬಂದು ವಾಸಿಸುತ್ತಿದ್ದಾರೆ. ನೆಲಸಮವಾದ ಮನೆಗಳು ಹಾಗೂ ಪ್ರಕೃತಿ ವಿಕೋಪದ ಮಧ್ಯೆ ಜನರು ಜೀವ ಉಳಿಸಲು ಪರದಾಟ ನಡೆಸುತ್ತಿದ್ದಾರೆ. ಪ್ರಬಲ ಭೂಕಂಪನದಿಂದ ದ್ವೀಪರಾಷ್ಟ್ರವಾದ ಪಪುವಾ ನ್ಯೂ ಗಿನಿಯಾದಲ್ಲಿ ರಕ್ಷಣಾ ಕಾರ್ಯ ಬಹಳ ದೊಡ್ಡ ಸವಾಲಾಗಿದೆ ಎಂದು ಹೇಳಲಾಗುತ್ತಿದೆ.

Shwetha M