ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – ಎರಡು ದಿನಗಳ ಅಂತರದಲ್ಲೇ ಮತ್ತೆ ನಡುಗಿದ ಭೂಮಿ!

ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – ಎರಡು ದಿನಗಳ ಅಂತರದಲ್ಲೇ ಮತ್ತೆ ನಡುಗಿದ ಭೂಮಿ!

ಕೆಲವು ತಿಂಗಳ ಹಿಂದಷ್ಟೇ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. ಹತ್ತಾರು ಹಳ್ಳಿಗಳೇ ನೆಲಸಮ ಆಗಿದ್ದವು. ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇದೀಗ ಮತ್ತೆ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.

ಮಂಗಳವಾರ ಮುಂಜಾನೆ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಫೈಜಾಬಾದ್‌ನ ಆಗ್ನೇಯಕ್ಕೆ ಸುಮಾರು 180 ಕಿಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದಿಂದ ಉಂಟಾದ ಹಾನಿಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಈಗ ಸಂಭವಿಸಿರುವ ಭೂಕಂಪದ ಬಗ್ಗೆಯೂ ಸಾಕಷ್ಟು ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್’ನಲ್ಲಿ ಇನ್ಮುಂದೆ ಸಿಗಲಿದೆ ಮುದ್ದೆ, ಚಪಾತಿ ಭಾಗ್ಯ!

ಅಫ್ಘಾನಿಸ್ತಾನದ ಜನರು ಒಂದರ ನಂತರ ಒಂದರಂತೆ ಭೂಕಂಪನದ ಪ್ರಬಲ ಕಂಪನ ಸಂಭವಿಸುತ್ತಿದೆ. ಕಳೆದ ಭಾನುವಾರ ಕೂಡ ಅಫ್ಘಾನಿಸ್ತಾನದ ಫೈಜಾಬಾದ್​ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದೀಗ ಮತ್ತೆ ಭೂಕಂಪ ಸಂಭವಿಸಿದೆ. ಇನ್ನುಕಳೆದ ಅಕ್ಟೋಬರ್​ನಲ್ಲಿ ಸಂಭವಿಸಿದ ಸರಣಿ ಭೂಕಂಪದಲ್ಲಿ 4 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. 2 ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿತ್ತು. ಸಿರಿಯಾ ಮತ್ತು ಟರ್ಕಿಯಲ್ಲಿ ಸಂಭವಿಸಿದ ಭೂಕಂಪಕ್ಕಿಂತ ಅಫ್ಘಾನಿಸ್ತಾನದ ಭೂಕಂಪವು ಹೆಚ್ಚು ಭಯಾನಕವಾಗಿದೆ ಎಂದು ಹೇಳಲಾಗುತ್ತಿದೆ.

ವಿಶ್ವಸಂಸ್ಥೆಯ ಮಾನವೀಯ ಕಚೇರಿಯು ಭೂಕಂಪಕ್ಕೆ ಸ್ಪಂದಿಸಲು 5 ಮಿಲಿಯನ್ ಡಾಲರ್​ ನೆರವು ಘೋಷಿಸಿತ್ತು. ಈ ದುರಂತದಲ್ಲಿ ಬದುಕುಳಿದವರಿಗೆ ಆಶ್ರಯ, ಆಹಾರ ಮತ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿತ್ತು

Shwetha M