ಉತ್ತರಾಖಂಡದಲ್ಲಿ ಕಂಪಿಸಿದ ಭೂಮಿ – ರಿಕ್ಟರ್‌ ಮಾಪಕದಲ್ಲಿ 4.0 ತೀವ್ರತೆ ದಾಖಲು

ಉತ್ತರಾಖಂಡದಲ್ಲಿ ಕಂಪಿಸಿದ ಭೂಮಿ – ರಿಕ್ಟರ್‌ ಮಾಪಕದಲ್ಲಿ 4.0 ತೀವ್ರತೆ ದಾಖಲು

ಪಿಥೋರಗಢ್: ಉತ್ತರಾಖಂಡದ ಪಿಥೋರಗಢ್‌ ಬಳಿ ಸೋಮವಾರ ಬೆಳ್ಳಂಬೆಳಗೆ ಭೂಪಂಕ ಸಂಭವಿಸಿದೆ. ಇಂದು ಸಂಭವಿಸಿದ ಭೂಕಂಪ ರಿಕ್ಟರ್‌ ಮಾಪಕದಲ್ಲಿ 4.0 ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ.

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಈ ಬಗ್ಗೆ ಮಾಹಿತಿ ನೀಡಿದ್ದು,  ಭೂಕಂಪದ ಕೇಂದ್ರಬಿಂದು ಪಿಥೋರಘರ್‌ನಿಂದ ಈಶಾನ್ಯಕ್ಕೆ 40 ಕಿಲೋಮೀಟರ್ ದೂರದಲ್ಲಿದೆ. 5 ಕಿ.ಮೀ ಆಳದಲ್ಲಿ ಪಿಥೋರಗಢದಲ್ಲಿ ಭೂಕಂಪ ಸಂಭವಿಸಿದೆ. 16-10-2023 ರಂದು 4.0 ತೀವ್ರತೆ ಇತ್ತು. 09:11:40 IST, ಲ್ಯಾಟ್: 29.86 & ಉದ್ದ: 80.61, ಆಳ: 5 ಕಿಮೀ, ಸ್ಥಳ: 48 ಕಿಮೀ NE ಆಫ್ ಪಿಥೋರಗಢ್, ಉತ್ತರಾಖಂಡ್ ಎಂದು ಟ್ವೀಟ್‌ ಮಾಡಿದೆ.

ಇದನ್ನೂ ಓದಿ: 9ನೇ ದಿನಕ್ಕೆ ಕಾಲಿಟ್ಟ ಇಸ್ರೇಲ್‌ – ಹಮಾಸ್‌ ವಾರ್-  ಸರ್ಕಾರದ ಆದೇಶಕ್ಕೆ ಕಾದು ಕುಳಿತ ಸೇನಾ ಮುಖ್ಯಸ್ಥರು

ಭಾನುವಾರ ಕೂಡ ಹರಿಯಾಣದಲ್ಲಿ ಮತ್ತು ದೆಹಲಿಯಲ್ಲೂ ಪ್ರಬಲವಾದ ಕಂಪನ ಸಂಭವಿಸಿತ್ತು. ಸಂಜೆ 4.08ಕ್ಕೆ 3.1ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್​​ಸಿಎಸ್ ಹೇಳಿದೆ. ಈ ಸಮಯದಲ್ಲಿ ಎತ್ತರ ಕಟ್ಟಡಗಳಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳು ಒಂದು ಬಾರಿ ಗಾಬರಿಗೊಂಡು ಕೆಳಕ್ಕೆ ಬಂದಿದ್ದಾರೆ.

ಅ.4ರಂದು ನೇಪಾಳದಲ್ಲೂ 6.2 ತೀವ್ರತೆ ಭೂಕಂಪ ಉಂಟಾಗಿದೆ. ಇದರ ಪರಿಣಾಮವಾಗಿ ದೆಹಲಿ, ಬಿಹಾರ, ಉತ್ತರಪ್ರದೇಶಗಳಲ್ಲಿಯೂ ಮಧ್ಯಾಹ್ನ 3.00ಕ್ಕೆ ಭೂಕಂಪ ಸಂಭವಿಸಿದೆ.

Shwetha M