ನೇಪಾಳದಲ್ಲಿ ಪ್ರಭಲ ಭೂಕಂಪಕ್ಕೆ 128ಕ್ಕೂ ಅಧಿಕ ಮಂದಿ ಬಲಿ – ದೆಹಲಿಯಲ್ಲೂ ಕಂಪಿಸಿದ ಭೂಮಿ

ನೇಪಾಳದಲ್ಲಿ ಪ್ರಭಲ ಭೂಕಂಪಕ್ಕೆ 128ಕ್ಕೂ ಅಧಿಕ ಮಂದಿ ಬಲಿ – ದೆಹಲಿಯಲ್ಲೂ ಕಂಪಿಸಿದ ಭೂಮಿ

ನೇಪಾಳದಲ್ಲಿ ಭೀಕರ ಭೂಕಂಪನ ಸಂಭವಿಸಿದೆ. ಈ ದುರಂತದಲ್ಲಿ 128 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ರಾತ್ರಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.4ರಷ್ಟು ದಾಖಲಾಗಿದೆ. ಈ ಅವಘಡದಲ್ಲಿ ಹತ್ತಾರು ಕಟ್ಟಡಗಳು ಉರುಳಿದ್ದು, ಮನೆಗಳ ಗೋಡೆಗಳು ಬಿರುಕುಬಿಟ್ಟಿದೆ. ಧರೆಗುರುಳಿದ ಕಟ್ಟಡದ ಅವಶೇಷಗಳಡಿ ನೂರಾರು ಮಂದಿ ಸಿಲುಕಿರುವ ಸಾಧ್ಯತೆ ಇದೆ. ನೇಪಾಳದ ರುಕುಂ ವೆಸ್ಟ್ ಪ್ರದೇಶದಲ್ಲಿ, ಜಾಜರ್‍ಕೋಟ್ ಪ್ರದೇಶದಲ್ಲಿ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವು- ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ನೇರಳೆ ಮಾರ್ಗದ ಸಂಚಾರದಲ್ಲಿ ನವೆಂಬರ್‌ 5ಕ್ಕೆ ವ್ಯತ್ಯಯ!

ಭಾರತದ ಹಲವು ರಾಜ್ಯಗಳಲ್ಲೂ ಭೂಮಿ ಕಂಪಿಸಿದೆ. ಬಿಹಾರ, ಜಾರ್ಖಂಡ್, ಉತ್ತರಾಖಂಡ್ ಸೇರಿ ಹಲವೆಡೆ ಭೂಮಿ ನಡುಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ 1ತಿಂಗಳಲ್ಲಿ 3ನೇ ಬಾರಿ ಭೂಮಿ ಕಂಪಿಸಿದೆ. ಆತಂಕಗೊಂಡ ಜನ ಮನೆಯಿಂದ ಆಚೆ ಬಂದು ರಾತ್ರಿಯೆಲ್ಲಾ ರೋಡಲ್ಲೇ ಜಾಗರಣ ಮಾಡಿದ್ದಾರೆ.

Shwetha M