ಟರ್ಕಿ ಸಿರಿಯಾ ಗಡಿಯಲ್ಲಿ ಮತ್ತೆ ಭೂಕಂಪ- ಮೂವರು ಬಲಿ, 200ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಟರ್ಕಿ ಸಿರಿಯಾ ಗಡಿಯಲ್ಲಿ ಮತ್ತೆ ಭೂಕಂಪ- ಮೂವರು ಬಲಿ, 200ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಟರ್ಕಿ-ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ 45 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ರಕ್ಷಣಾ ಕಾರ್ಯ ನಡೆಯುತ್ತಲೇ ಇದೆ. ಹೀಗಿರುವಾಗಲೇ ಟರ್ಕಿ-ಸಿರಿಯಾ ಗಡಿಯಲ್ಲಿ ಮತ್ತೆ ಭೂಕಂಪ ಸಂಭವಿಸಿದ್ದು, ಮೂವರು ಬಲಿಯಾಗಿದ್ದಾರೆ. ಟರ್ಕಿಯ ದಕ್ಷಿಣ ಹಟೇ ಪ್ರಾಂತ್ಯದಲ್ಲಿ 6.4 ಹಾಗೂ 5.8 ತೀವ್ರತೆಯ 2 ಭೂಕಂಪಗಳು ಸಂಭವಿಸಿದ್ದು, 3 ಮಂದಿ ಮೃತಪಟ್ಟಿದ್ದು, 200ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ:  ಉತ್ತರ ಕೊರಿಯಾದಲ್ಲಿ 48 ಗಂಟೆಗಳಲ್ಲಿ 2 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪ್ರಯೋಗ – ಏನಿದರ ಉದ್ದೇಶ..?

ಫೆಬ್ರವರಿ 6 ರ ಮುಂಜಾನೆ ಟರ್ಕಿಯ ಆಗ್ನೇಯ ಕಹ್ರಮನ್ಮರಸ್ ಪ್ರಾಂತ್ಯದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ, ಟರ್ಕಿ ಮತ್ತು ನೆರೆಯ ಸಿರಿಯಾದಲ್ಲಿ ಚಪ್ಪಟೆಯಾದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಸಿಲುಕಿದ್ದರು. ಟರ್ಕಿ ಮತ್ತು ಸಿರಿಯಾಗಳಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಈವರೆಗೆ ಮೃತಪಟ್ಟವರ ಸಂಖ್ಯೆ 46,002ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 40,402 ಹಾಗೂ ಸಿರಿಯಾದಲ್ಲಿ 5,800 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿದೆ. 7.8 ತೀವ್ರತೆಯ ಭೂಕಂಪಕ್ಕೆ ಟರ್ಕಿಯಲ್ಲಿ 5 ಲಕ್ಷ ಕಟ್ಟಡಗಳು ನೆಲಸಮವಾಗಿದ್ದು, ಸಾಕಷ್ಟು ಮಂದಿ ಕಾಣೆಯಾಗಿದ್ದಾರೆ. ಟರ್ಕಿಗೆ ರಕ್ಷಣಾ ಕಾರ್ಯಾಚರಣೆಗೆ ತೆರಳಿದ್ದ ಎನ್‌ಡಿಆರ್‌ಎಫ್‌ನ ಮೂರೂ ತಂಡಗಳು ತಮ್ಮ ಕಾರ್ಯಾಚರಣೆ ಮುಗಿಸಿ ಭಾನುವಾರವಷ್ಟೇ ಭಾರತಕ್ಕೆ ಮರಳಿತ್ತು.

suddiyaana