T20 ವಿಶ್ವಕಪ್ ಬಳಿಕ ವಿರಾಟ್ ನಿವೃತ್ತಿ ತೆಗೆದುಕೊಳ್ಳುತ್ತಾರಾ? – ಕಾರಣವೇನು?

ಇನ್ನು ಐಪಿಎಲ್ ಸೀಸನ್ ಅಂತ್ಯದ ಬೆನ್ನಲ್ಲೇ ಕಿಂಗ್ ಕೊಹ್ಲಿಯ ರಿಟೈರ್ಮೆಂಟ್ ಸುದ್ದಿ ಬಿರುಗಾಳಿಯಂತೆ ಹಬ್ಬಿದೆ. ಟಿ20 ವಿಶ್ವಕಪ್ ಅಂತ್ಯದ ಬೆನ್ನಲ್ಲೇ, ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳ್ತಾರೆ ಅನ್ನೋ ಸುದ್ದಿ ಹಲ್ಚಲ್ ಎಬ್ಬಿಸಿದೆ. 2 ಕಾರಣಗಳು ನಿವೃತ್ತಿಯ ಗಾಳಿಸುದ್ದಿಗೆ ಪುಷ್ಟಿ ನೀಡಿವೆ. ಟೀಮ್ ಇಂಡಿಯಾದ ಬ್ಯುಸಿ ಶೆಡ್ಯೂಲ್ ನಿಂದ ವರ್ಷಪೂರ್ತಿ ಕ್ರಿಕೆಟ್ ಆಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಇದನ್ನೂ ಓದಿ: ಎಪಿಎಲ್ ಸೀಸನ್ 17 ರ ಆರೆಂಜ್ ಕ್ಯಾಪ್ ವಿರಾಟ್ ಕೊಹ್ಲಿ ಪಾಲಾಗುತ್ತಾ?
ಕಳೆದ ಕೆಲ ವರ್ಷಗಳಿಂದ ಸತತವಾಗಿ ಆಡ್ತಿರೋ ಕೊಹ್ಲಿ, ಟಿ20 ವಿಶ್ವಕಪ್ ಮುಗಿದ ಬಳಿಕ ನಿವೃತ್ತಿ ಹೇಳಬಹುದು. ಹಾಗೇ ಕೊಹ್ಲಿಗೆ EYE SIGHTನ ಸಮಸ್ಯೆಯಿದೆ. ಆಫ್ ದ ಫೀಲ್ಡ್ನಲ್ಲಿ ಕೊಹ್ಲಿ ಹೆಚ್ಚಾಗಿ pointed glasses ಬಳಸ್ತಿರೋದನ್ನು ನೀವು ನೋಡಿರಬಹುದು. EYE SIGHTನ ಸಮಸ್ಯೆ ಹೆಚ್ಚಾದ್ರೆ ಕ್ರಿಕೆಟ್ಗೆ ಗುಡ್ ಬೈ ಹೇಳಲಿದ್ದಾರೆ ಎನ್ನಲಾಗ್ತಿದೆ.
ಕೆಲವೇ ದಿನಗಳಲ್ಲಿ ವೆಸ್ಟ್ ಇಂಡೀಸ್ ಹಾಗೂ ಯುಎಸ್ಎನಲ್ಲಿ ಟಿ20 ವಿಶ್ವಕಪ್ ಸಮರ ಆರಂಭವಾಗಲಿದೆ. ರೋಹಿತ್ ನೇತೃತ್ವದ ಟೀಮ್ ಇಂಡಿಯಾ ಶೀಘ್ರದಲ್ಲೇ, ವಿಂಡೀಸ್ಗೆ ಹಾರಲಿದೆ. ಟಿ20 ವಿಶ್ವಕಪ್ ಟೂರ್ನಿಗಾಗಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಫ್ಲೈಟ್ ಹತ್ತಿಲ್ಲ. ಅದಾಗಲೇ ವಿರಾಟ್ ಕೊಹ್ಲಿಯ ನಿವೃತ್ತಿಯ ಚರ್ಚೆಗಳು ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.