ಅಪ್ಪ ಅಮ್ಮ ಇಲ್ಲ.. ಸಂಗೀತವೇ ಪ್ರಪಂಚ.. ಹೂ ಮಾರುವ ಹುಡುಗನಿಗೆ ಕಿಚ್ಚನ ಆಫರ್
ದ್ಯಾಮೇಶ್ ಕತೆ.. ಕರುನಾಡು ಕಣ್ಣೀರು
ಸರಿಗಮಪ.. ಜೀ ಕನ್ನಡದ ಜನಪ್ರೀಯ ಶೋ.. ಸೀಸನ್ 20 ಯಶಸ್ವಿಯಾಗಿ ಮುಗಿದು, ಸೀಸನ್ 21 ಶುರುವಾಗಿದೆ. ಸರಿಗಮಪ ಇಲ್ಲಿವರೆಗೂ ಅದೆಷ್ಟೋ ಗಾಯಕರನ್ನ ಗುರುತಿಸಿ, ಅವರಿಗೊಂದು ವೇದಿಕೆ ಕಲ್ಪಿಸಿಕೊಟ್ಟಿದೆ. ಈಗಾಗಲೇ ಈ ವೇದಿಕೆಯಲ್ಲಿ ಗುರುಸಿಕೊಂಡ ಅನೇಕ ಸ್ಪರ್ಧಿಗಳು ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಇದೀಗ ಸೀಸನ್ 21 ಕೂಡ ಆರಂಭವಾಗಿದೆ. ಈ ಸೀಸನ್‌ನಲ್ಲಿ ತೆರೆಮರೆಯಲ್ಲಿದ್ದ ಅದ್ಬುತ ಗಾಯಕರನ್ನ ವೇದಿಕೆಗೆ ಕರೆತಂದಿದೆ ಸರಿಗಮಪ ಶೋ ಟೀಮ್.. ಅದ್ರಲ್ಲಿ ದ್ಯಾಮೇಶ್ ಕಾರಟಗಿ ಕೂಡ ಒಬ್ರು. ಸಂಗೀತದ ಮೇಲಿನ ಪ್ರೀತಿ.. ಇವ್ರ ಜೀವನ ಕಥೆ.. ಇಡೀ ಕರುನಾಡಿನ ಜನತೆಯ ಕಣ್ಣಲ್ಲಿ ನೀರು ತರಿಸಿದೆ.
ಇದನ್ನೂ ಓದಿ: ಕಳಪೆಯಿಂದ ಗ್ರೇಟ್ ಕಮ್ ಬ್ಯಾಕ್ ಮಾಡ್ತಾರಾ ಕೊಹ್ಲಿ – ಪ್ರೇಮಾನಂದ ಗುರೂಜಿ ಅಭಯವೇನು?
ಜೀ ಕನ್ನಡದ ಟಾಪ್ ರಿಯಾಲಿಟಿ ಶೋಗಳಲ್ಲಿ ಸರಿಗಮಪ ಶೋಗೆ ವಿಶೇಷ ಸ್ಥಾನವಿದೆ. ಇಲ್ಲಿವರೆಗೂ ನೂರಾರು ಗಾಯಕರನ್ನ ನಾಡಿಗೆ ಪರಿಚಯಿಸಿದ ಕೀರ್ತಿ ಈ ಶೋಗೆ ಸಲ್ಲಬೇಕು. ಎಲೆಮರೆಕಾಯಿಯಂತಿದ್ದ ಪ್ರತಿಭೆಗಳನ್ನು ಕರೆತಂದು ಅವರಿಗೊಂದು ದೊಡ್ಡ ವೇದಿಕೆ ಕಲ್ಪಿಸಿಕೊಡುತ್ತಾ ಬಂದಿದೆ. ಈ ಸಲವೂ ಪ್ರತಿಭಾವಂತ ಗಾಯಕರನ್ನ ಶೋಗೆ ಕರೆತಲಾಗಿದೆ.. ಸ್ಪರ್ಧಿಗಳ ಸ್ಪೂರ್ತಿದಾಯಕ ಕಥೆಯನ್ನ ಜನರಿಗೆ ತಿಳಿಸೋ ಮೂಲಕ ಇತರರಿಗೂ ಇಲ್ಲಿ ಮೋಟಿವೇಟ್ ಮಾಡಲಾಗುತ್ತಿದೆ. ಇದೀಗ ಸೀಸನ್ 21 ನಲ್ಲೂ ಹಳ್ಳಿ ಪ್ರತಿಭೆಗಳನ್ನು ಶೋಗೆ ತರೆತಂದಿದೆ. ಅದ್ರಲ್ಲಿ ದ್ಯಾಮೇಶ್ ಕೂಡ ಒಬ್ರು.. ಸರಿಗಮಪ ವೇದಿಕೆಯಲ್ಲಿ ದ್ಯಾಮೇಶ್ ಬದುಕಿನ ಪುಟದ ಕತೆ ತೆರೆದುಕೊಂಡಿದೆ. ಇವರ ಕಥೆ ಕೇಳ್ತಿದ್ರೆ ಎಂಥವರಿಗೂ ಕಣ್ಣಲ್ಲಿ ನೀರು ಬರದೇ ಇರದು.
ಅಂದ್ಹಾಗೆ ದ್ಯಾಮೇಶ್ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನವರು. ಇವರು ಸರಿಗಮಪ ವೇದಿಕೆಯಲ್ಲಿ ಒಂದು ಸೊಗಸಾದ ಜಾನಪದ ಗೀತೆ ಹಾಡಿ ಜಡ್ಜಸ್ ಮೆಚ್ಚುಗೆಗೆ ಪಾತ್ರವಾಗಿದ್ರು.. ಅದಾದ್ಮೇಲೆ ಜನುಮದ ಗೆಳತಿ ಹಾಡನ್ನ ಹಾಡಿ ಮೆಚ್ಚುಗೆ ಗಳಿಸಿದ್ದಲ್ಲದೇ, ಲಕ್ಷ್ಮೀ ನಾಗರಾಜ್ ಅವರ ಟೀಮ್ ಗೆ ಸೇರಿಸಲಾಗಿದೆ. ಆದ್ರೆ ದ್ಯಾಮೇಶ್ ವೇದಿಕೆಯಲ್ಲಿ ಹಾಡ್ತಿದ್ರೆ.. ಸಂಭ್ರಮಿಸಲು ಅವ್ರು ಮನೆಯವರು ಯಾರೂ ಇರ್ಲಿಲ್ಲ..
ಹೌದು.. ಸಾಮಾನ್ಯವಾಗಿ ಗಾಯಕರು ವೇದಿಕೆ ಮೇಲೆ ಹಾಡುತ್ತಿದ್ದರೆ ವೀಕ್ಷಕರ ಬಳಗದಲ್ಲಿ ಅವರ ಮನೆಯವರು ಈ ಸಂಭ್ರಮವನ್ನು ಕಣ್ತುಂಬಿಸಿಕೊಳ್ತಾ ಇರುತ್ತಾರೆ. ಆದರೆ ಈ ಗ್ರಾಮೀಣ ಪ್ರತಿಭೆ ದ್ಯಾಮೇಶ ಕಾರಟಗಿ ಹಾಡುತ್ತಿದ್ರೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಅವರ ಮನೆಮಂದಿ ಅಂತ ಯಾರೂ ಇರಲಿಲ್ಲ. ಈ ಬಗ್ಗೆ ಆಂಕರ್ ಅನುಶ್ರೀ ಪ್ರಶ್ನಿಸಿದಾಗ, ‘ನನಗೆ ಯಾರೂ ಇಲ್ಲ. ಅಮ್ಮ, ಅಪ್ಪ, ಅಣ್ಣ, ತಂಗಿ ಯಾರೂ ಇಲ್ಲ. ನಾನು ಒಬ್ಬನೇ’ ಅಂತ ಕಣ್ಣೀರು ಹಾಕಿದ್ರು ದ್ಯಾಮೇಶ್. ಅಜ್ಜಿಯ ಆಶ್ರಯದಲ್ಲಿ ಬೆಳದ ದ್ಯಾಮೇಶ್ ಬದುಕಿನ ನಿರ್ವಹಣೆಗಾಗಿ ಹೂವಿನ ವ್ಯಾಪಾರ ಮಾಡ್ತಿರೋದಾಗಿ ತಿಳಿಸಿದರು. ಅವರ ಕಥೆ, ಕಣ್ಣೀರು, ಸಂಗೀತದ ಮೇಲಿನ ಪ್ರೀತಿ ಕಂಡು ಅಲ್ಲಿದ್ದವರಿಗೂ ಕಣ್ತುಂಬಿ ಬಂದಿದೆ. ಜಡ್ಜಸ್ ಜೊತೆಗೆ ಈ ಶೋದಲ್ಲಿ ಭಾಗಿಯಾದ ಎಲ್ಲರೂ ವೇದಿಕೆಗೆ ಬಂದು ದ್ಯಾಮೇಶ್ ಅವರ ಜೊತೆಗೆ ನಿಂತಿದ್ದಾರೆ. ನಿಮಗಾಗಿ ನಾವೆಲ್ಲ ಇದ್ದೇವೆ.. ಇದು ನಮ್ಮ ದೊಡ್ಡ ಫ್ಯಾಮಿಲಿ ಅಂದಿದ್ದಾರೆ. ಇದು ವೀಕ್ಷಕರ ಕಣ್ಣಲ್ಲೂ ನೀರು ತರಿಸಿದೆ..
ಇನ್ನು ಸರಿಗಮಪ ವೇದಿಕೆಯಲ್ಲಿ ಬಾದ್ ಷಾ ಕಿಚ್ಚ ಸುದೀಪ್ ಕೂಡ ದ್ಯಾಮೇಶ್ ಹಾಡಿಗೆ ಫಿದಾ ಆದ್ರು.. ಪರಪಂಚ ನೀನೇ.. ನನ್ನ ಪರಪಂಚ ನೀನೇ ಅಂತ ಸುಂದವಾಗಿ ಹಾಡಿದ್ರು.. ಈ ವೇಳೆ ಸುದೀಪ್ ಭಾವುಕರಾಗಿ ನೋಡ್ತಾ ಇದ್ರು. ಬಳಿಕ ಅನುಶ್ರೀ ಎಷ್ಟೋ ಬದುಕುಗಳಿಗೆ ದಾರಿ ದೀಪ ಆಗಿದ್ದೀರಾ.. ಈತನಿ ಒಂದು ಅಪ್ಪುಗೆ ಸಿಕ್ಕಿದ್ರೆ.. ಶಕ್ತಿ, ಆನೆ ಬಲ ಬರುತ್ತೆ ಅಂತಾ ಕೇಳಿದ್ರು.. ಈ ವೇಳೆ.. ಹಗ್ ಯಾಕೆ.. ಸಿನಿಮಾನೇ ಕೊಟ್ಟು ಬಿಡ್ತೀನಿ.. ಅರ್ಜುನ್ ಜನ್ಯ ಸಂಗೀತದಲ್ಲಿ ಪಾದಾರ್ಪಣೆ ಮಾಡ್ತೀರಿ.. ಯಾವ ಸಿನಿಮಾ ಆದ್ರೂ ಸರಿ, ಅದ್ರಲ್ಲಿ ನೀವು ಹಾಡ್ತೀರಿ.. ನಾನು ನಿಮಗೆ ಮಾತು ಕೊಡ್ತೀನಿ ಅಂತಾ ಸುದೀಪ್ ದ್ಯಾಮೇಶ್ ಗೆ ಭರವೆಸೆ ನೀಡಿದ್ದಾರೆ. ಕಿಚ್ಚನ ಮಾತು ಕೇಳಿದ ದ್ಯಾಮೇಶ್ ಕಣ್ಣಲ್ಲಿ ಆನಂದ ಭಾಷ್ಪ ಬಂತು.. ನನಗಿದ್ದ ಭಯ ಹೋಯ್ತು.. ನಾನು ಸದಾ ಚಿರರುಣಿ ಆಗಿರ್ತೀನಿ ಅಂತಾ ಹೇಳಿದ್ದಾರೆ.
ಕಷ್ಟದ ಹಾದಿಯಲ್ಲಿ ಬೆಳೆದು ಬಂದ ದ್ಯಾಮೇಶ್ ಗೆ ಒಂದೊಳ್ಳೆಯ ವೇದಿಕೆ ಸಿಕ್ಕಿದೆ. ಶೋ ಆರಂಭದಲ್ಲೇ ಒಳ್ಳೆಯ ಅವಕಾಶ ದ್ಯಾಮೇಶ್ ನ ಹುಡುಕಿಕೊಂಡು ಬಂದಿದೆ. ಹಳ್ಳಿ ಪ್ರತಿಭೆಗೆ ಇನ್ನೂ ಉತ್ತಮ ಅವಕಾಶಗಳು ಸಿಗ್ಲಿ. ತನ್ನ ಕಂಠದ ಮೂಲಕ ಇನ್ನಷ್ಟು ಯಶಸ್ಸು ಕಾಣ್ಲಿ ಅನ್ನೋದೇ ನಮ್ಮ ಆಶಯ.