ಮಲಯಾಳಂ ಸ್ಟಾರ್ ನಟರಿಗೆ ಮುಳುವಾದ ಕಾರ್ ಕ್ರೇಜ್ – ದುಲ್ಕರ್ ಸಲ್ಮಾನ್ ಫವೆರೇಟ್ ಕಾರುಗಳು ಸೀಜ್

ಮಲಯಾಳಂ ಸ್ಟಾರ್ ನಟರಿಗೆ ಮುಳುವಾದ ಕಾರ್ ಕ್ರೇಜ್ – ದುಲ್ಕರ್ ಸಲ್ಮಾನ್ ಫವೆರೇಟ್ ಕಾರುಗಳು ಸೀಜ್

ಕೇರಳದಲ್ಲಿ ನೂರಾರು ಕೋಟಿ ರೂಪಾಯಿ ತೆರಿಗೆ ವಂಚಿಸಿ, ಐಷಾರಾಮಿ ಕಾರುಗಳನ್ನು ಮಾರಾಟ ಮಾಡ್ತಿದ್ದ ಒಂದು ದೊಡ್ಡ ಜಾಲವನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ವಿಪರ್ಯಾಸವೆಂದರೆ, ಮಲಯಾಳಂ ಮಲಯಾಳಂ ಸೂಪರ್‌ಸ್ಟಾರ್‌ಗಳಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರಿಗೂ ಈ ದಾಳಿಯ ಬಿಸಿ ತಟ್ಟಿದೆ. ಜೊತೆಗೆ 36 ದುಬಾರಿ ಕಾರುಗಳನ್ನ ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ಮಲಯಾಳಂ ಸ್ಟಾರ್ ನಟರ ವಿರುದ್ಧ ಸ್ಮಗ್ಲಿಂಗ್ ಶಂಕೆ- ದುಲ್ಕರ್ ಸಲ್ಮಾನ್, ಪೃಥ್ವಿರಾಜ್ ಮನೆ ಮೇಲೆ ದಾಳಿ

ಮಲಯಾಳಂ ಸೂಪರ್‌ಸ್ಟಾರ್‌ಗಳಾದ ದುಲ್ಕರ್ ಸಲ್ಮಾನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರಿಗೆ ದುಬಾರ್ ಕಾರು ಕ್ರೇಜ್ ಮುಳುವಾಗಿದೆ. ಆಪರೇಷನ್ ನಮ್‌ಖೋರ್ ಅನ್ನೋ ಹೆಸರಿನಲ್ಲಿ ಮಂಗಳವಾರ ಕೇರಳದ ಹಲವು ಕಡೆಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. ದೊಡ್ಡ ದೊಡ್ಡ ಶೋರೂಮ್‌ಗಳಿಂದ ಹಿಡಿದು, ನಟರ ಮನೆಗಳವರೆಗೂ ಎಲ್ಲವನ್ನೂ ಜಾಲಾಡಿದ್ದಾರೆ. ದಾಳಿಯಲ್ಲಿ 36ಕ್ಕೂ ಹೆಚ್ಚು ದುಬಾರಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಎರಡು ಕಾರುಗಳು ನಟ ದುಲ್ಕರ್ ಸಲ್ಮಾನ್‌ಗೆ ಸೇರಿದ್ದು, ಅದರಲ್ಲಿ ಹೊಚ್ಚ ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಕೂಡ ಇದೆ.

ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್‌ಗೆ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ. ವಶಪಡಿಸಿಕೊಂಡ ಕಾರುಗಳು ಅಲ್ಲದೆ, ಹೆಚ್ಚಿನ ಕಾರುಗಳಿದ್ದರೆ ಹಾಜರು ಪಡಿಸುವಂತೆ ದುಲ್ಕರ್‌ಗೆ ಸಮನ್ಸ್ ಜಾರಿ ಮಾಡಲಾಗಿದೆ. ಕಂದಾಯ ಗುಪ್ತಚರ ಮತ್ತು ಕಸ್ಟಮ್ಸ್ ನಿರ್ದೇಶನಾಲಯದ ಅಧಿಕಾರಿಗಳು ಈ ಸಮನ್ಸ್ ಜಾರಿಗೊಳಿಸಿದ್ದಾರೆ.  ಒಟ್ನಲ್ಲಿ ವಾಹನಗಳ ಸ್ಮಗ್ಲಿಂಗ್ ಆರೋಪ ಮಲಯಾಳಂ ಸೂಪರ್ ಸ್ಟಾರ್‌ಗಳ ವಿರುದ್ಧ ಕೇಳಿಬಂದಿದ್ದು, ಇಬ್ಬರೂ ನಟರಿಗೆ ಇದು ಶಾಕಿಂಗ್ ವಿಚಾರವೇ.

Sulekha