ಇಶಾನ್ & ವೈಭವ್‌ಗೆ ದುಲೀಪ್ ಟ್ರೋಫಿ – ಪಾಕ್ ಆಟಗಾರರ ಕಾಲಲ್ಲಿ ಕೊಹ್ಲಿ ಶೂ

ಇಶಾನ್ & ವೈಭವ್‌ಗೆ ದುಲೀಪ್ ಟ್ರೋಫಿ – ಪಾಕ್ ಆಟಗಾರರ ಕಾಲಲ್ಲಿ ಕೊಹ್ಲಿ ಶೂ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಏಷ್ಯನ್ ಗೇಮ್ಸ್ ವೇಳೆ ಭಾರತೀಯ ಕ್ರಿಕೆಟಿಗರಿಗೆ ಪ್ರತ್ಯೇಕ ಹೋಟೆಲ್ ವ್ಯವಸ್ಥೆ ಮಾಡುವ ನಿರ್ಧಾರದಿಂದ BCCI ಹಿಂದೆ ಸರಿದಿದೆ. ಆಯೋಜಕರು ನಿಗದಿಪಡಿಸಿರುವ ಅಧಿಕೃತ ಹೋಟೆಲ್‌ನಲ್ಲೇ ಆಟಗಾರರು ಉಳಿಯಲಿದ್ದಾರೆ ಎಂದು BCCI ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ. ಆಟಗಾರರ ಸೌಲಭ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವ್ಯವಸ್ಥೆ ಪರಿಶೀಲಿಸಲಾಗುತ್ತಿದೆ.

BCCI ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳು ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆಯ ವ್ಯಾಪ್ತಿಗೆ ಏಕೆ ಬರಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಕ್ರಿಕೆಟ್ ಆಡಳಿತಕ್ಕೆ ಸಂಬಂಧಿಸಿದ ಪ್ರಕರಣಗಳು ಹಲವು ವರ್ಷಗಳಿಂದ ನ್ಯಾಯಾಲಯದ ಮುಂದೆ ಬರುತ್ತಿರುವುದನ್ನೂ ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ. ಈ ಬೆಳವಣಿಗೆ ಭಾರತೀಯ ಕ್ರಿಕೆಟ್ ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣದ ಕುರಿತ ಚರ್ಚೆಗೆ ಹೊಸ ತಿರುವು ನೀಡಿದೆ.

ಇದನ್ನೂ ಓದಿ: ನಿಯಮ ಉಲ್ಲಂಘನೆ, ಪಾಕ್‌ಗೆ ದಂಡದ ಮೇಲೆ ದಂಡ – ಅಂಪೈರ್‌ಗೆ ಬ್ಯಾಟ್ ತೋರಿಸಿದ ಫಿರೋಜಾಗೆ ಫೈನ್

ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ಸರಣಿಗಳಿಗಾಗಿ ಬಿಸಿಸಿಐ, ಚಾಟ್‌ಜಿಪಿಟಿ ಸೇರಿದಂತೆ ಮೂರು ಕಂಪನಿಗಳ ಜೊತೆ 130 ಕೋಟಿ ರೂ.ಗೂ ಅಧಿಕ ಮೊತ್ತದ ಒಪ್ಪಂದ ಮಾಡಿಕೊಂಡಿದೆ. ಹಿಂದಿನ ಅವಧಿಗಿಂತ ಶೇ. 44 ರಷ್ಟು ಹೆಚ್ಚಿನ ಹಣ ಬಿಸಿಸಿಐ ಖಜಾನೆಗೆ ಸೇರಲಿದ್ದು, ಭಾರತೀಯ ಕ್ರಿಕೆಟ್‌ನ ವಾಣಿಜ್ಯ ಮೌಲ್ಯ ಮತ್ತಷ್ಟು ಹೆಚ್ಚಾಗಿದೆ.

ಚೆನ್ನೈನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೂರನೇ ದಿನದಾಟದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಎಲ್ಲರ ಗಮನ ಸೆಳೆದಿದ್ದಾರೆ. ಮುಖೇಶ್ ಕುಮಾರ್ ಎಸೆದ ಚೆಂಡು, ಸೌತ್ ಜೋನ್ ಆಟಗಾರ ರಿಕ್ಕಿ ಭುಯಿ ಅವರ ಬ್ಯಾಟ್‌ಗೆ ಸವರಿ ವಿಕೆಟ್ ಕೀಪರ್ ಕೈ ಸೇರಿತು. ಈ ವೇಳೆ ಈಸ್ಟ್ ಝೋನ್ ಆಟಗಾರರು ಔಟ್‌ಗಾಗಿ ಬಲವಾಗಿ ಅಪೀಲ್ ಮಾಡಿದರೂ, ಆನ್-ಫೀಲ್ಡ್ ಅಂಪೈರ್ ಔಟ್ ನೀಡಲು ನಿರಾಕರಿಸಿದರು. ಚಾಣಾಕ್ಷತನದಿಂದ ಡಿಆರ್‌ಎಸ್ ತೆಗೆದುಕೊಳ್ಳುವಂತೆ ನಾಯಕನನ್ನು ಒತ್ತಾಯಿಸಿದ್ದಾರೆ. ಡಿಆರ್‌ಎಸ್‌ನಲ್ಲಿ ಬ್ಯಾಟ್‌ಗೆ ಬಾಲ್ ತಾಗಿರುವುದು ಸ್ಪಷ್ಟವಾಗಿದೆ.

ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2026ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ ಸೌತ್ ಝೋನ್ 336 ರನ್​ಗಳಿಸಿ ಆಲೌಟ್ ಆಗಿದೆ. ಈ ಆಲೌಟ್​ನೊಂದಿಗೆ ಈಸ್ಟ್ ಝೋನ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 372 ರನ್​ಗಳ ಭಾರೀ ಮುನ್ನಡೆ ಪಡೆದುಕೊಂಡಿದೆ. ಪಂದ್ಯದಲ್ಲಿ ಕೇವಲ ಒಂದು ದಿನದ ಆಟ ಬಾಕಿ ಉಳಿದಿದ್ದು, ಹೀಗಾಗಿ ಈ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಳ್ಳುವುದು ಬಹುತೇಕ ಖಚಿತ ಎಂದೇ ಹೇಳಬಹುದು.

ಈಸ್ಟ್ ಝೋನ್ ಹಾಗೂ ಸೌತ್ ಝೋನ್ ನಡುವೆ ನಡೆಯುತ್ತಿರೋ ದುಲೀಪ್ ಟ್ರೋಫಿ ಪೈನಲ್ ಪಂದ್ಯ  ‘ಡ್ರಾ’ ನತ್ತ ಮುಖ ಮಾಡುವ ಸಾಧ್ಯತೆಯಿದೆ. ಡ್ರಾ ಆದ್ರೆ ಯಾರಿಗೆ ಚಾಂಪಿಯನ್ ಪ್ರಶಸ್ತಿ ಸಿಗಲಿದೆ ಅನ್ನೋ  ಪ್ರಶ್ನೆ ಮೂಡಿದೆ. ಬಿಸಿಸಿಐನ ಸುದೀರ್ಘ ಇತಿಹಾಸ ಹೊಂದಿರುವ ನಾಕೌಟ್ ನಿಯಮಾವಳಿಗಳ ಪ್ರಕಾರ, ಫೈನಲ್ ಪಂದ್ಯವು ಡ್ರಾಗೊಂಡರೆ ‘ಮೊದಲ ಇನ್ನಿಂಗ್ಸ್ ಮುನ್ನಡೆ’ ಸಾಧಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗುತ್ತದೆ. ಈ ಪ್ರಕಾರ ಬಹುತೇಕ್ ಈಸ್ಟ್‌ಜೋನ್ ಚಾಂಪಿಯನ್ ಪಟ್ಟ ಅಲಕಂರಿಸಲಿದೆ.

ಕೆಎಲ್ ರಾಹುಲ್‌ ಡೆಲ್ಲಿ ತಂಡವನ್ನ ಬಿಡಲ್ಲ ಅಂತ ಪಾರ್ಥ್ ಜಿಂದಾಲ್ ಅವರ ಪೋಸ್ಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ರು. ಈ ಪೋಸ್ಟ್‌ಗೆ ತಕ್ಷಣವೇ ಪ್ರತಿಕ್ರಿಯಿಸಿರುವ ಕೆ.ಎಲ್. ರಾಹುಲ್ ಅವರು “ಧನ್ಯವಾದಗಳು, ಮುಂಬರುವ ನೂತನ ಆವೃತ್ತಿಯಲ್ಲಿ ಆಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದು ರೀ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ತಮಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಬಿಟ್ಟು ಬೇರೆಡೆ ಹೋಗುವ ಇರಾದೆ ಇಲ್ಲ ಎಂಬುದನ್ನು ಕೆಎಲ್‌ ಸ್ಪಷ್ಟಪಡಿಸಿದ್ದಾರೆ.

ಮಹಿಳಾ ಏಷ್ಯಾಕಪ್‌ನಲ್ಲಿ ಸೆಮಿಫೈನಲ್ ಹಂತದ ಪಂದ್ಯಗಳ ವೇಳಾಪಟ್ಟಿ ಅಂತಿಮಗೊಂಡಿದೆ. ಭಾರತ ಈಗಾಗಲೇ ಉತ್ತಮ ಪ್ರದರ್ಶನ ನೀಡಿದ್ದು, ಪ್ರಶಸ್ತಿ ಗೆಲ್ಲುವ ಪ್ರಮುಖ ತಂಡವಾಗಿ ಕಾಣಿಸಿಕೊಂಡಿದೆ. ಮತ್ತೊಂದೆಡೆ ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ ಕೂಡ ಸೆಮಿಫೈನಲ್ ಸ್ಥಾನ ಪಡೆದಿದೆ. ಟೂರ್ನಿಯ ಮುಂದಿನ ಪಂದ್ಯಗಳು ಮಹಿಳಾ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದು, ಫೈನಲ್ ಪ್ರವೇಶಕ್ಕಾಗಿ ತಂಡಗಳ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ಪಾಕಿಸ್ತಾನದ ಕ್ರಿಕೆಟಿಗರು ಟೀಮ್ ಇಂಡಿಯಾ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಕಂಪನಿ ತಯಾರಿಸಿದ ಶೂಗಳಲ್ಲಿ ಆಡುತ್ತಿರುವುದು ದೊಡ್ಡ ಸುದ್ದಿಯಾಗಿದೆ. ವಿರಾಟ್ ಕೊಹ್ಲಿ ಅವರ ಒನ್8 ಬ್ರಾಂಡ್‌ನ ಶೂಗಳನ್ನು ಪಾಕ್ ಆಟಗಾರ್ತಿ ನಶ್ರಾ ಸಂಧು ಅವರು ಮೈದಾನಕ್ಕೆ ಕಾಣಿಸಿಕೊಂಡಿದ್ದಾರೆ. ನಶ್ರಾ ಜೊತೆಗೆ ಪಾಕಿಸ್ತಾನ ತಂಡದ ಇತರ ಮಹಿಳಾ ಕ್ರಿಕೆಟಿಗರೂ ಅದೇ ಬ್ರಾಂಡ್‌ನ ಶೂಗಳನ್ನು ಧರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗಿದೆ.

ಪಾಕಿಸ್ತಾನ್ ಕ್ರಿಕೆಟ್‌ನ ಮತ್ತೊಂದು ದೊಡ್ಡ ವಿವಾದ ಮುನ್ನೆಲೆಗೆ ಬಂದಿದೆ. ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಂಡಕ್ಕೆ  ಮೇಜರ್ ಸರ್ಜರಿ ಮಾಡಿತ್ತು. ಇದರ ಬಗ್ಗೆ ನನಗೆ ಗೊತ್ತೇ ಇಲ್ಲ ಅಂತ ನಾಯಕ ಬಾಬರ್ ಆಝಂ ಹೇಳಿದ್ದಾರೆ.  ನನ್ನೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಇದು ನನಗೂ ಅಚ್ಚರಿ ಮೂಡಿಸಿದೆ. ಮಾಧ್ಯಮಗಳ ಮೂಲಕವೇ ನನಗೆ ಈ ವಿಷಯ ತಿಳಿಯಿತು ಎಂದಿದ್ದಾರೆ.

 

Kishor KV

Leave a Reply

Your email address will not be published. Required fields are marked *