ಪತ್ನಿಗೆ ಬಿಕಿನಿ ತೊಡುವ ಆಸೆ – ಹೆಂಡ್ತಿ ಡಿಮ್ಯಾಂಡ್‌ ಈಡೇರಿಸಲು 418 ಕೋಟಿ ರೂ. ದ್ವೀಪ ಖರೀದಿಸಿದ ಭೂಪ

ಪತ್ನಿಗೆ ಬಿಕಿನಿ ತೊಡುವ ಆಸೆ – ಹೆಂಡ್ತಿ ಡಿಮ್ಯಾಂಡ್‌ ಈಡೇರಿಸಲು 418 ಕೋಟಿ ರೂ. ದ್ವೀಪ ಖರೀದಿಸಿದ ಭೂಪ

ಮದುವೆಯಾದ ಹೊಸತರಲ್ಲಿ ಹೆಂಡ್ತಿಗಾಗಿ ಉಡುಗೊರೆ ನೀಡೋದು, ಹೊಸ ಜಾಗಕ್ಕೆ ಕರೆದುಕೊಂಡು ಹೋಗಿ ಸಮಯ ಕಳೆಯೋದು ಕಾಮನ್‌.. ಆದ್ರೆ ಇಲ್ಲೊಬ್ಬಳಿಗೆ ಮದುವೆಯಾದ ಮೇಲೆ ಬಿಕಿನಿ ಹಾಕೋ ಆಸೆ ಆಗಿದೆ.. ಹೆಂಡ್ತಿ ಆಸೆಯನ್ನ ಇಡೇರಿಸಲು ಇಲ್ಲೊಬ್ಬ ಪತಿರಾಯ ಬರೋಬ್ಬರಿ 418 ಕೋಟಿ ರೂಪಾಯಿ ದ್ವೀಪ ಖರೀದಿಸಿದ್ದಾನೆ..

ಇದನ್ನೂ ಓದಿ: 6 ಗಂಟೆ 4 ನಿಮಿಷ.. ಗ್ರಹಣ ಗ್ರಹಚಾರ – ಮಹಾಲಯ ಅಮಾವಾಸ್ಯೆಯಂದು ಕೆಡುಕಾಗುತ್ತಾ?

ಅಚ್ಚರಿಯಾದ್ರೂ ಸತ್ಯ. ಈ ವಿಚಿತ್ರ ಘಟನೆ ದುಬೈನಲ್ಲಿ ನಡೆದಿದೆ.  ದುಬೈ ಮೂಲದ ಖ್ಯಾತ ಉದ್ಯಮಿ ಜಮಾಲ್ ಅಲ್ ನಡಾಕ್ ತನ್ನ ಪತ್ನಿಯ ಆಸೆಯನ್ನು ಈಡೇರಿಸಲು 418 ಕೋಟಿ ರೂ. ಖರ್ಚು ಮಾಡಿ ದ್ವೀಪ ಖರೀದಿಸಿದ್ದಾನೆ. ಮೂಲತ: ಬ್ರಿಟನ್​​ ಯುವತಿಯನ್ನು ಮದುವೆಯಾಗಿದ್ದ ಈತ ತನ್ನ ಪತ್ನಿ ಆರಾಮಾಗಿ ಬಿಕಿನಿ ತೊಟ್ಟು ಓಡಾಡಲು ದ್ವೀಪ ಪ್ರದೇಶವನ್ನು ಖರೀದಿಸಿದ್ದಾನೆ. ತನ್ನ ಪತ್ನಿಗಾಗಿ ಖರೀದಿಸಿದ ದ್ವೀಪದ ಕುರಿತು ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಪತ್ನಿಗಾಗಿ ಪ್ರತ್ಯೇಕ ದ್ವೀಪ ಖರೀದಿಸಿದ್ದೇಕೆ ಅನ್ನೋದನ್ನ ಕೂಡ ಜಮಾಲ್ ಅಲ್ ನಡಾಕ್ ವಿವರಿಸಿದ್ದಾನೆ.  ದುಬೈನಲ್ಲಿ ಮಹಿಳೆಯರ ಬಟ್ಟೆ ಬಗ್ಗೆ ನಿರ್ದಿಷ್ಟ ಕಾನೂನುಗಳಿವೆ. ಇಲ್ಲಿ ಮಹಿಳೆಯರು ಅರೆಬರೆ ಬಟ್ಟೆಯನ್ನು ಧರಿಸುವಂತಿಲ್ಲ. ಬಿಕಿನಿ ಧರಿಸಬೇಕೆಂಬುದು ನನ್ನ ಪತ್ನಿಯ ಆಸೆ, ಆದರೆ ಇಲ್ಲಿ ಅರೆಬರೆ ಬಟ್ಟೆ ಧರಿಸಲು ಅವಕಾಶವಿಲ್ಲ. ಆದ್ದರಿಂದ ನನ್ನ ಪತ್ನಿ ಬಿಕಿನಿ ತೊಟ್ಟು ಓಡಾಡಲು 418 ಕೋಟಿ ರೂ. ಖರ್ಚು ಮಾಡಿ ಖಾಸಗಿ ದ್ವೀಪ ಖರೀದಿಸುವುದಾಗಿ ಹೇಳಿಕೊಂಡಿದ್ದಾನೆ.

ಇಲ್ಲಿ ನಾನು ನನ್ನ ಪತ್ನಿಯೊಂದಿಗೆ ಆಕೆಯ ಇಚ್ಛೆಯಂತೆ ಏಕಾಂತದ ಸಮಯವನ್ನು ಕಳೆಯಲು ಬಯಸುತ್ತೇನೆ ಎಂದು ಪತಿರಾಯ ಹೇಳಿಕೊಂಡಿದ್ದಾನೆ. ಈ ದ್ವೀಪವು ಏಷ್ಯಾ ಖಂಡದಲ್ಲಿದೆ ಎಂದಿರುವ ಪತ್ನಿ, ಇದು ತಮ್ಮ ಖಾಸಗಿತನದ ಪ್ರಶ್ನೆ ಆಗಿರುವ ಕಾರಣ, ದ್ವೀಪದ ಜಾಗದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

Shwetha M

Leave a Reply

Your email address will not be published. Required fields are marked *