ENG ಚೆಂಡಾಡಿದ ಸಿರಾಜ್ & ದೀಪ್.. 6 ಜನ DUCK.. ಹೇಗಿತ್ತು ಅಟ್ಯಾಕ್? – ಗೆಲುವಿಗೆ ಹತ್ತಿರವಾಯ್ತಾ ಟೀಂ ಇಂಡಿಯಾ?

ENG ಚೆಂಡಾಡಿದ ಸಿರಾಜ್ & ದೀಪ್.. 6 ಜನ DUCK.. ಹೇಗಿತ್ತು ಅಟ್ಯಾಕ್? – ಗೆಲುವಿಗೆ ಹತ್ತಿರವಾಯ್ತಾ ಟೀಂ ಇಂಡಿಯಾ?

ಬರ್ಮಿಂಗ್ ಹ್ಯಾಮ್​ನಲ್ಲಿ ನಡೆಯುತ್ತಿರೋ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡ್ರಲ್ಲೂ ಮಿಂಚು ಹರಿಸಿದ್ದಾರೆ. ಅದ್ರಲ್ಲೂ ಡಿಎಸ್ ಪಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಬಿರುಗಾಳಿಗೆ ಆಂಗ್ಲರ ಪಡೆ ಧೂಳೀಪಟವಾಗಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್‌ ಹೊಸ ಸಿನಿಮಾ ಅನೌನ್ಸ್‌! – 6 ತಿಂಗಳಲ್ಲೇ ತೆರೆಗೆ ಅಪ್ಪಳಿಸಲಿದೆ ಕೆ 47!

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಮೊದಲ ಇನಿಂಗ್ಸ್​ನಲ್ಲಿ 587 ರನ್ ಕಲೆ ಹಾಕಿತ್ತು.  ಇಂಗ್ಲೆಂಡ್ ಮೊದಲ ಇನಿಂಗ್ಸ್​ನಲ್ಲಿ 407 ರನ್​ಗಳಿಸಿ ಆಲೌಟ್ ಆಗಿದೆ. ಇಂಗ್ಲೆಂಡ್ ಪರ 84 ರನ್​ಗಳಿಗೆ 5 ವಿಕೆಟ್​​ಗಳು ಉರುಳಿದ್ವು. ಆದ್ರೆ 6ನೇ ವಿಕೆಟ್​ಗೆ ಜೊತೆಯಾದ ಹ್ಯಾರಿ ಬ್ರೂಕ್ ಮತ್ತು ಜೇಮಿ ಸ್ಮಿತ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ್ರು. ಇಬ್ಬರ ಪಾರ್ಟ್ನರ್​ಶಿಪ್​ನಲ್ಲಿ 300+ ಸ್ಕೋರ್ ಮಾಡಿದ್ರು. ಬಟ್ ಕೊನೆಗೂ ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಇಂಗ್ಲೆಂಡ್ ಪಡೆಯನ್ನ ಬೇಟೆಯಾಡುವಲ್ಲಿ ಯಶಸ್ವಿಯಾದ್ರು.

ಇಂಗ್ಲೆಂಡ್ ಪರ 0 ಸುತ್ತಿದ ಆರು ಪ್ಲೇಯರ್ಸ್!

ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ ಐದು ಬ್ಯಾಟ್ಸ್‌ಮನ್‌ಗಳು ಮಾತ್ರ ರನ್​ಗಳಿಸಲು ಸಾಧ್ಯವಾಯ್ತು. ಅದ್ರಲ್ಲೂ ಆರು ಆಟಗಾರರು ಸೊನ್ನೆ ಸುತ್ತಿದ್ದಾರೆ. ಇಬ್ಬರು ಬ್ಯಾಟ್ಸ್‌ಮನ್‌ಗಳು 300ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹ್ಯಾರಿ ಬ್ರೂಕ್ ಅವರ 158 ಮತ್ತು ವಿಕೆಟ್ ಕೀಪರ್ ಜೇಮೀ ಸ್ಮಿತ್ ಅಜೇಯ 185 ರನ್‌ಗಳು ಸೇರಿವೆ. ಇದರ ಹೊರತಾಗಿ 6 ಬ್ಯಾಟ್ಸ್‌ಮನ್‌ಗಳು ಶೂನ್ಯಕ್ಕೆ ಪೆವಿಲಿಯನ್​ ಸೇರಿದರು. ಇದರಿಂದಾಗಿ ಆತಿಥೇಯ ತಂಡವು ಕೆಟ್ಟ ದಾಖಲೆ ಬರೆದಿದೆ. ಟೆಸ್ಟ್ ಇತಿಹಾಸದಲ್ಲಿ 400ಕ್ಕೂ ಅಧಿಕ ರನ್‌ ಗಳಿಸಿಯೂ 6 ಬ್ಯಾಟ್ಸ್‌ಮನ್‌ಗಳನ್ನು ಡಕೌಟ್​ ಆಗಿದ್ದು ಇದೆ ಮೊದಲು. ಹಾಗೇ 29 ವರ್ಷಗಳ ಟೀಮ್ ಇಂಡಿಯಾ ಬೌಲರ್​ಗಳು ಟೆಸ್ಟ್ ಕ್ರಿಕೆಟ್​ನಲ್ಲಿ ಇತಿಹಾಸ ಸೃಷ್ಟಿಸಿದ್ದಾರಎ. ಟೆಸ್ಟ್ ಕ್ರಿಕೆಟ್​ ಇತಿಹಾಸದಲ್ಲೇ ಭಾರತೀಯ ಬೌಲರ್​ಗಳು ಇನಿಂಗ್ಸ್​ವೊಂದರಲ್ಲಿ ಆರು ಮಂದಿಯನ್ನು ಸೊನ್ನೆಗೆ ಔಟ್ ಮಾಡಿರುವುದು ಕೇವಲ ಎರಡು ಬಾರಿ ಮಾತ್ರ. 1996 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್​ಗಳು 6 ಮಂದಿಯನ್ನು ಶೂನ್ಯಕ್ಕೆ ಔಟ್ ಮಾಡಿದ್ದರು.     29 ವರ್ಷಗಳ ಬಳಿಕ ಭಾರತೀಯ ಬೌಲರ್​ಗಳು ಮತ್ತೊಮ್ಮೆ ಇನಿಂಗ್ಸ್​ವೊಂದರಲ್ಲಿ ಆರು ಮಂದಿಯನ್ನು ಸೊನ್ನೆಗೆ ಔಟ್ ಮಾಡಿದ್ದಾರೆ.

ಸಿರಾಜ್ & ದೀಪ್ ದಾಳಿಗೆ ಆಂಗ್ಲರ ಪಡೆ ಸರ್ವಪತನ!

ಇಂಗ್ಲೆಂಡ್​ ತಂಡದ ಬ್ಯಾಟರ್​ಗಳ ಮೇಲೆ ದಾಳಿ ಮಾಡಿದ ಮೊಹಮ್ಮದ್ ಸಿರಾಜ್ ಹಾಗೂ ಆಕಾಶ್ ದೀಪ್ ವಿಕೆಟ್​ಗಳ ಬೇಟೆಯಾಡಿದ್ರು. ಟೀಮ್ ಇಂಡಿಯಾದಲ್ಲಿ ಜಸ್​​ಪ್ರಿತ್ ಬೂಮ್ರಾ ಅನುಪಸ್ಥಿತಿಯಲ್ಲಿ ಈ ಇಬ್ಬರು ಸದ್ದು ಮಾಡಿದ್ರು. ಇನ್ನಿಂಗ್ಸ್​ನ 2ನೇ ದಿನದಿಂದಲೇ ವಿಕೆಟ್​ ರುಚಿ ನೋಡಿದ್ದ ಸಿರಾಜ್​ ಮೂರನೇ ದಿನವೂ 5 ವಿಕೆಟ್​ಗಳನ್ನ ಉರುಳಿಸಿದರು. ಓಪನರ್ ಝಾಕ್ ಕ್ರಾಲಿ, ಜೋ ರೂಟ್, ಕ್ಯಾಪ್ಟನ್ ಬೆನ್ ಸ್ಟೋಕ್ಸ್​, ಬ್ರೈಡನ್ ಕಾರ್ಸೆ, ಜೋಶ್​ ಟಂಗ್​​ ಹಾಗೂ ಶೋಯೆಬ್ ಬಶೀರ್​ರನ್ನ ಪೆವಿಲಿಯನ್​ಗೆ ಅಟ್ಟಿದರು. ವಿಶೇಷ ಎಂದರೆ ಬೆನ್ ಸ್ಟೋಕ್ಸ್, ಬ್ರೈಡನ್ ಕಾರ್ಸೆ, ಜೋಶ್​ ಟಂಗ್​​ ಹಾಗೂ ಶೋಯೆಬ್ ಬಶೀರ್​ ಈ ಮೂವರನ್ನು ಸಿರಾಜ್ ಡಕೌಟ್​ ಮಾಡಿ ಎಲ್ಲರ ಗಮನ ಸೆಳೆದರು. ಹಾಗೇ ಸಿರಾಜ್​ಗೆ ಸಖತ್ ಸಾಥ್ ಕೊಟ್ಟ ಆಕಾಶ್ ದೀಪ್ ಕೂಡ ವಿಕೆಟ್​ಗಳನ್ನ ಉರುಳಿಸಿದ್ರು. ಆಲಿ ಪೋಪ್ ಹಾಗೂ ಡಕೆಟ್ ಇಬ್ಬರನ್ನು ಶೂನ್ಯಕ್ಕೆ ಔಟ್​ ಮಾಡಿದ್ದರು. 158 ರನ್​ಗಳಿಂದ ಬ್ಯಾಟಿಂಗ್ ಮಾಡುತ್ತಿದ್ದ ಹ್ಯಾರಿ ಬ್ರೂಕ್​ಗೆ ಬಿಗ್​ ಬ್ರೇಕ್ ಹಾಕಿದ್ದೇ ಆಕಾಶ್ ದೀಪ್. ಹಾಗೇ ಕ್ರಿಸ್ ವೋಕ್ಸ್​​ರನ್ನ ಔಟ್ ಮಾಡಿ ಸಂಭ್ರಮಿಸಿದರು.

ಇಂಗ್ಲೆಂಡ್ ನಲ್ಲಿ ಸಿರಾಜ್ ಮೊದಲ ಫೈಫರ್!

ಎರಡನೇ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 19.3 ಓವರ್ ಎಸೆದ ಸಿರಾಜ್ ಕೇವಲ 70 ರನ್ ನೀಡಿ 6 ವಿಕೆಟ್ ಉರುಳಿಸಿದ್ದಾರೆ.. ಇದು ಇಂಗ್ಲೆಂಡ್ ನಲ್ಲಿ ಸಿರಾಜ್ ಅವರ ಮೊದಲ ಫೈಫರ್ ಎಂಬುದು ವಿಶೇಷ. ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾದಲ್ಲಿ ಇನಿಂಗ್ಸ್ ವೊಂದರಲ್ಲಿ 5 ವಿಕೆಟ್ ಗಳನ್ನು (ಫೈಫರ್) ಕಬಳಿಸಿದ ಭಾರತದ 2ನೇ ವೇಗಿ ಎಂಬ ದಾಖಲೆಯನ್ನು ಸಿರಾಜ್ ತಮ್ಮದಾಗಿಸಿಕೊಂಡರು. ಇದಕ್ಕೂ ಮುನ್ನ ಇಂತಹದೊಂದು ಸಾಧನೆ ಮಾಡಿದ್ದು ಜಸ್​ಪ್ರೀತ್ ಬುಮ್ರಾ ಮಾತ್ರ. ಬುಮ್ರಾ ಕೂಡ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾದಲ್ಲಿ ಇನಿಂಗ್ಸ್ ವೊಂದರಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಸದ್ಯ ಸಿರಾಜ್, ಆಕಾಶ್​ ದೀಪ್ ಬೌಲಿಂಗ್​ ನೆರವಿನಿಂದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 180 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ. ಹಾಗೇ ಎರಡನೇ ಇನ್ನಿಂಗ್ಸ್ ಆರಂಭವಾಗಿದೆ. 2ನೇ ಇನ್ನಿಂಗ್ಸ್​ ಬ್ಯಾಟಿಂಗ್ ಆರಂಭಿಸಿರುವ ಟೀಮ್ ಇಂಡಿಯಾ ಓಪನರ್ ಯಶಸ್ವಿ ಜೈಸ್ವಾಲ್​ 28 ರನ್​ಗೆ ವಿಕೆಟ್ ಒಪ್ಪಿಸಿದ್ದಾರೆ. 64 ರನ್​ಗಳಿಗೆ ಮೊದಲ ವಿಕೆಟ್​ ಕಳೆದುಕೊಂಡ ಭಾರತದ ಪರ ಕ್ರೀಸ್​ನಲ್ಲಿ ಕನ್ನಡಿಗರಾದ ಕೆ.ಎಲ್ ರಾಹುಲ್ (28) ಹಾಗೂ ಕರುಣ್ ನಾಯರ್ (07) ಇದ್ದು ಇಂದು ಬ್ಯಾಟಿಂಗ್ ಕಂಟಿನ್ಯೂ ಮಾಡ್ತಾರೆ.  ಇನ್ನು ಟೀಮ್ ಇಂಡಿಯಾ ಒಟ್ಟು 244 ರನ್​ಗಳ ಲೀಡ್​ ಪಡೆದು ಬ್ಯಾಟಿಂಗ್ ಮಾಡುತ್ತಿದೆ. ಒಟ್ನಲ್ಲಿ ಕಳೆದ ಪಂದ್ಯದಲ್ಲಿ ಅಷ್ಟೇನು ಸೌಂಡ್ ಮಾಡದೇ ಇದ್ರೂ ಈ ಸಲ ಡಿಎಸ್​ಪಿ ಮೊಹಮ್ಮದ್ ಸಿರಾಜ್ ಧಮಾಕೇಧಾರ್ ಪರ್ಫಾಮೆನ್ಸ್ ನೀಡಿದ್ದಾರೆ. ಹಾಗೇ ಆಕಾಶ್ ದೀಪ್ ಕೂಡ ಸಿಕ್ಕ ಚಾನ್ಸ್ ನಲ್ಲಿ ತಮ್ಮ ಸಾಮರ್ಥ್ಯ ಪ್ರೂವ್ ಮಾಡಿದ್ದಾರೆ.

Shwetha M