ಎಣ್ಣೆ ಮತ್ತಲ್ಲಿ ಸಿಂಹಿಣಿಗೆ ಚಮಕ್ ಕೊಟ್ಟ ಭೂಪ – ಅಯ್ಯೋ ಮುಂದೆ ಆಗಿದ್ದೇ ಬೇರೆ!

ಎಣ್ಣೆ ಮತ್ತಲ್ಲಿ ಸಿಂಹಿಣಿಗೆ ಚಮಕ್ ಕೊಟ್ಟ ಭೂಪ – ಅಯ್ಯೋ ಮುಂದೆ ಆಗಿದ್ದೇ ಬೇರೆ!

ಎಣ್ಣೆ ನಶೆ ನೆತ್ತಿಗೇರಿತು ಅಂದ್ರೆ ಜನ ಎಂಥಾ ಕೆಲಸಕ್ಕೂ ಕೈ ಹಾಕಿ ಬಿಡ್ತಾರೆ. ಒಬ್ಬೊಬ್ಬರೂ ಒಂದೊಂದು ಥರ ವರ್ತನೆ ಮಾಡ್ತಾರೆ. ಅದ್ರಲ್ಲೂ ಇಲ್ಲೊಬ್ಬ ಆಡಿರೋ ಹುಚ್ಚಾಟ ನೋಡಿದ್ರೆ ನೀವೇ ಶಾಕ್ ಆಗ್ತೀರಾ. ಕುಡಿದ ಮತ್ತಿನಲ್ಲಿದ್ದ ಆಸಾಮಿ ಸಿಂಹಿಣಿಗೇ ಚಮಕ್ ಕೊಟ್ಟಿದ್ದಾನೆ. ಅಚ್ಚರಿ ಅನ್ಸಿದ್ರೂ ಈ ದೃಶ್ಯವೇ ಭಯಾನಕವಾಗಿವೆ.

ಇದನ್ನೂ ಓದಿ: ಇನ್ಮುಂದೆ ಸಾಕು ನಾಯಿಗಳಿಗೂ ಟ್ಯಾಕ್ಸ್! – ನಗರಸಭೆಯಿಂದ ಬಂತು ಹೊಸ ರೂಲ್ಸ್…

ಸಿಟ್ಟು ಬಂತು ಅಂದ್ರೆ ಕೆಲವೊಮ್ಮೆ ಸಾಕು ಪ್ರಾಣಿಗಳೇ ಅಟ್ಯಾಕ್ ಮಾಡಿ ಬಿಡ್ತಾವೆ. ಅಂಥದ್ರಲ್ಲಿ ಎಣ್ಣೆ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹಸಿದ ಸಿಂಹಿಣಿ ಜೊತೆಯೇ ಚೆಲ್ಲಾಟ ಆಡಿದ್ದಾನೆ. ಗುಜರಾತ್​ನಲ್ಲಿ ನಡೆದಿರೋ ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ಪೆಗ್ ಮೇಲೆ ಪೆಗ್ ಏರಿಸಿ ಚೇರ್ ಮೇಲೆ ಕುಳಿತಿದ್ದ. ಕೈಯಲ್ಲಿ ಬದುಕಿರೋ ಕೋಳಿಯನ್ನ ಹಿಡ್ಕೊಂಡು ಶೋ ಕೊಡ್ತಿದ್ದ. ಈ ವೇಳೆ ಅದೆಲ್ಲಿತ್ತೋ ಏನೋ ದಿಢೀರ್ ಅಂತಾ ಸಿಂಹಿಣಿ ಆತನ ಬಳಿ ಬಂದಿದೆ. ಬೇರೆ ಯಾರಾದ್ರೂ ಸಿಂಹವನ್ನ ನೋಡಿದ್ರೆ ಎದ್ನೋ ಬಿದ್ನೋ ಅಂತಾ ಓಡಿ ಹೋಗ್ತಿದ್ರು. ಆದ್ರೆ ಪರಮಾತ್ಮ ಬಾಡಿ ಒಳಗೆ ಇಳಿದಿದ್ರಿಂದ ಈತನಿಗೆ ಡಬಲ್ ಗುಂಡಿಗೆ ಬಂದಂತೆ ಅನ್ಸಿತ್ತು. ಹೀಗಾಗಿ ಸಿಂಹಿಣಿ ಕಣ್ಮುಂದೆಯೇ ಇದ್ರೂ ಕೇರ್ ಮಾಡಿಲ್ಲ. ಕೈಯಲ್ಲಿ ಕೋಳಿ ಹಿಡ್ಕೊಂಡು ಸಿಂಹವನ್ನೇ ಆಟ ಆಡ್ಸಿದ್ದಾನೆ.

ಸಿಂಹ ತನ್ನ ಕಣ್ಮುಂದೆಯೇ ಇದ್ರೂ ಸ್ವಲ್ಪವೂ ಹೆದರದ ಈ ಭಂಡ ಕೋಳಿಯನ್ನ ಹಿಡ್ಕೊಂಡು ಚಮಕ್ ಕೊಟ್ಟಿದ್ದಾನೆ. ಸಿಂಹ ಕೋಳಿಯನ್ನ ತಿನ್ನಲು ಹತ್ತಿರ ಬಂದ್ರೂ ಕೋಳಿಯನ್ನ ಹಿಂದೆ ಮುಂದೆ ಆಡಿಸುತ್ತಾ ಹುಚ್ಚಾಟ ಆಡಿದ್ದಾನೆ. ನಾಲ್ಕೈದು ಸಲ ಬೆದರಿದಂತೆ ಮಾಡಿದ ಸಿಂಹ ಕೊನೆಗೂ ಆತನ ಕೈಯಲ್ಲಿದ್ದ ಕೋಳಿಗೆ ಬಾಯಿ ಹಾಕಿದೆ. ಇಷ್ಟಕ್ಕೂ ಸುಮ್ಮನಾಗದ ಈ ಭೂಪ ಸಿಂಹದ ತಲೆಗೇ ಹೊಡೆದಿದ್ದಾನೆ. ಅಷ್ಟರಲ್ಲಿ ಸಿಂಹಿಣಿ ಕೋಳಿಯನ್ನ ಕಚ್ಚಿಕೊಂಡು ಅಲ್ಲಿಂದ ಕಾಲ್ಕಿತ್ತಿದೆ. ಟ್ವಿಟ್ಟರ್​ನಲ್ಲಿ ವ್ಯಕ್ತಿಯೊಬ್ಬರು ಈ ವಿಡಿಯೋವನ್ನ ಶೇರ್ ಮಾಡಿದ್ದಾರೆ. 5 ಪೆಗ್ ಒಳಗೆ ಸೇರಿದ್ರೆ ಹಿಂಗೆಲ್ಲಾ ಆಗುತ್ತೆ ಅಂತಾ ಕ್ಯಾಪ್ಶನ್ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ವ್ಯಕ್ತಿಯ ಹುಚ್ಚಾಟಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ.

suddiyaana