ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲೇ ಮಲಗಿದ.. – ನೂರಾರು ವಾಹನಗಳು ಓಡಾಡಿದ್ರೂ ಆತ ಬಚಾವ್ ಆಗಿದ್ದು ಹೇಗೆ ಗೊತ್ತಾ?
ಕಂಠಪೂರ್ತಿ ಕುಡಿದವರಿಗೆ ಪ್ರಪಂಚದ ಅರಿವೇ ಇರಲ್ಲ. ತಾನು ನಡೆದಿದ್ದೇ ದಾರಿ.. ನಿಂತಿರುವ ಸ್ಥಳ ನಂದೇ ಅಂತಾ ಸೀನ್ ಕ್ರಿಯೇಟ್ ಮಾಡುತ್ತಾರೆ. ಕುಡಿದ ಮತ್ತಿನಲ್ಲಿ ತಾನು ಎಲ್ಲಿದ್ದೇನೆ ಎಂಬುವುದು ಅರಿವಿರುವುದಿಲ್ಲ. ತೂರಾಡಿಕೊಂಡು ಹೋದಲ್ಲೆಲ್ಲಾ ಬೀಳುತ್ತಾರೆ. ಎಣ್ಣೆ ನಶೆ ಇಳಿಯುವವರೆಗೂ ಅಲ್ಲೇ ರಂಪಾಟ ನಡೆಸುತ್ತಾ ಇರುತ್ತಾರೆ. ಇಲ್ಲೊಬ್ಬನ ಸ್ಥಿತಿಯೂ ಹಾಗೇ ಆಗಿದೆ. ಕಂಠಪೂರ್ತಿ ಕುಡಿದು ಬೈಕ್ ಓಡಿಸಲಾಗದೇ ರಸ್ತೆಯಲ್ಲೇ ಮಲಗಿ ಎಲ್ಲರನ್ನೂ ಬೆಚ್ಚಿಬೀಳಿಸುವಂತೆ ಮಾಡಿದ್ದಾನೆ.
ಏನಿದು ಘಟನೆ?
ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಹಾಸನದಿಂದ ಸಂಬಂಧಿಕರ ಮನೆಗೆ ಹೊರಟಿದ್ದಾನೆ. ಮಾರ್ಗಮಧ್ಯೆ ಆತ ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಎಣ್ಣೆ ಏಟಲ್ಲಿದ್ದ ಮಹಾಶಯ ಬೈಕ್ ಓಡಿಸಲು ಮುಂದಾಗಿದ್ದಾನೆ. ಈ ವೇಳೆ ಆತನಿಗೆ ಬೈಕ್ ಓಡಿಸುವುದು ಬಿಡಿ.. ಆತನಿಗೆ ತಾನು ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆತ ಬಣಕಲ್ ಸಮೀಪದ ಹೆದ್ದಾರಿಯಲ್ಲಿ ಬೈಕ್ ನಿಲ್ಲಿಸಿ ನಡು ರಸ್ತೆ ಮಲಗಿದ್ದಾನೆ.
ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ 17 ಸ್ಪರ್ಧಿಗಳ ಆಟ – ದೊಡ್ಮನೆ ಎಂಟ್ರಿ ದಿನವೇ ಸ್ಪರ್ಧಿಗಳಿಗೆ ಬಿಗ್ ಟ್ವಿಸ್ಟ್
ಅಪಘಾತವಾಗಿದೆ ಎಂದು ಭಾವಿಸಿದ ಸವಾರರು!
ಈ ಮಹಾರಾಯ ರಸ್ತೆಯಲ್ಲಿ ಹೊಡ್ಡ ಸೀನ್ ಕ್ರಿಯೇಟ್ ಮಾಡಿದ್ದಾನೆ. ನಿಲ್ಲು ಸಾಧ್ಯವಾಗದೆ ನಡು ರಸ್ತೆಯಲ್ಲೇ ಅಂಗಾತ ಮಲಗಿದ್ದಾನೆ. ಇದನ್ನು ಕಂಡ ಇತರ ಸವಾರರು ಅಪಘಾತವಾಗಿದೆ ಎಂದು ಭಾವಿಸಿದ್ದಾರೆ. ಈತ ಕೂಡ ಒಂಚೂರು ಅಲ್ಲಾಡದೆ ಬಿದ್ದುಕೊಂಡಿದ್ದಾನೆ. ಹೀಗಾಗಿ ಆತನಿಗೆ ಗಂಭೀರ ಗಾಯವಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ರಸ್ತೆಯಲ್ಲಿ ಹೋಗುತ್ತಿದ್ದ ಸವಾರೊಬ್ಬರು ತಕ್ಷಣ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಸೈರನ್ ನೊಂದಿಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ಬರುತ್ತಿದ್ದಂತೆ ಎಚ್ಚರಗೊಂಡಿದ್ದಾನೆ. ತಾನು ಮದ್ಯಪಾನ ಮಾಡಿದ್ದರಿಂದ ಬೈಕ್ ಓಡಿಸಲಾಗದೆ ರಸ್ತೆಯಲ್ಲಿ ಮಲಗಿದ್ದೇ ಎಂದು ತಿಳಿಸಿ ಸ್ಥಳದಿಂದ ತೆರಳಿದ್ದಾನೆ.
ಪ್ರಾಣ ಉಳಿಸಿದ ಬೈಕ್ ಇಂಡಿಕೇಟರ್!
ವ್ಯಕ್ತಿ ರಸ್ತೆಯಲ್ಲಿ ಮಲಗಿದ್ದ ವೇಳೆ ನೂರಾರು ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸಿವೆ. ಈ ವೇಳೆ ಬೈಕ್ ಇಂಡಿಕೇಟರ್ ಆತನ ಪ್ರಾಣ ಉಳಿಸಿದೆ. ಬೈಕ್ ಇಂಡಿಕೇಟರ್ ಆನ್ ಆಗಿದ್ದರಿಂದ ದೊಡ್ಡ ಅವಾಂತರ ತಪ್ಪಿದೆ. ಇಲ್ಲದಿದ್ದರೆ ವಾಹನಗಳು ಆತನ ಮೇಲೆಯೇ ಹೋಗುವ ಸಾಧ್ಯತೆ ಇತ್ತು ಎಂದು ತಿಳಿದು ಬಂದಿದೆ. ಈ ಸಂಬಂಧ ಬಣಕಲ್ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.