ಹಾಲಿಗಿಂತಲೂ ಈ ಪದಾರ್ಥ ಸೊಪ್ಪಿನಲ್ಲಿದೆ ಕ್ಯಾಲ್ಸಿಯಂ! – ಈ ಎಲ್ಲಾ ರೋಗಗಳಿಗೂ ರಾಮಬಾಣ!

ಹಾಲಿಗಿಂತಲೂ ಈ ಪದಾರ್ಥ ಸೊಪ್ಪಿನಲ್ಲಿದೆ ಕ್ಯಾಲ್ಸಿಯಂ! – ಈ ಎಲ್ಲಾ ರೋಗಗಳಿಗೂ ರಾಮಬಾಣ!

ಸಾಮಾನ್ಯವಾಗಿ ಹಾಲು ಸೇರಿದಂತೆ ಇತರ ಡೈರಿ ಉತ್ಪನ್ನಗಳು ನಮ್ಮ ದೇಹಕ್ಕೆ ಬೇಕಾದ ಪ್ರೋಟಿನ್, ಕ್ಯಾಲ್ಸಿಯಂ ಒದಗಿಸುತ್ತದೆ. ಆದ್ರೆ ಕೆಲವರಿಗೆ ಡೈರಿ ಉತ್ಪನ್ನಗಳು ಆರೋಗ್ಯದ ಗಂಭೀರ ಪರಿಣಾಮ ಬೀಳುತ್ತದೆ. ಅಂತವರು ಹಾಲು, ಮೊಸರಿನ ಬದಲಿಗೆ ಬೇರೆ ಪದಾರ್ಥಗಳನ್ನು ಸೇವಿಸಲು ಯೋಚಿಸುತ್ತಿದ್ದರೆ, ನುಗ್ಗೆ ಸೊಪ್ಪನ್ನ ಸೇವಿಸಿ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಸರಳ ಶಿವ ಪೂಜೆ ಮಾಡುವುದೇ ಹೇಗೆ? – ಸರಳ ಮಂತ್ರಗಳು ಯಾವುವು?

ನುಗ್ಗೆ ಸೊಪ್ಪನ್ನ ಸೂಪರ್ಫುಡ್ ಎಂದು ಪರಿಗಣಿಸಲಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿ ವಿವಿಧ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಹಾಗಾದ್ರೆ ಹಾಲು ಕುಡಿಯುವುದರಿಂದ ಸಿಗುವಷ್ಟೇ ಆರೋಗ್ಯ ಪ್ರಯೋಜನಗಳು ಇದರಲ್ಲಿದ್ಯಾ ಅನ್ನೋ ಪ್ರಶ್ನೆ ಎಲ್ಲರಲ್ಲಿದೆ.

ನುಗ್ಗೆ ಸೊಪ್ಪಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಆರೋಗ್ಯ ತರಬೇತುದಾರ ದಿಗ್ವಿಜಯ್ ಸಿಂಗ್ ಅವರು ಕೆಲ ಮಾಹಿತಿ ನೀಡಿದ್ದಾರೆ. ಇವರು ಹೇಳುವ ಪ್ರಕಾರ ನುಗ್ಗೆ ಸೊಪ್ಪನ್ನು ಮಲ್ಟಿವಿಟಮಿನ್ ಎಂದು ಕರೆಯಲಾಗುತ್ತದೆ. ಹಾಗಾಗಿ ಹಾಲಿನ ಬದಲಿಗೆ ಇದನ್ನು ಧಾರಾಳವಾಗಿ ತೆಗೆದುಕೊಳ್ಳಬಹುದು ಎಂದಿದ್ದಾರೆ.

ನಾನಾ ರೋಗಗಳಿಗೆ ನುಗ್ಗೆ ಸೊಪ್ಪು ರಾಮಬಾಣ ಎಂದು ಹೇಳಲಾಗುತ್ತದೆ. ಏಕೆಂದರೆ ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಸಮೃದ್ಧವಾಗಿದೆ. ನುಗ್ಗೆ ಸೊಪ್ಪು ಹಾಲಿಗಿಂತಲೂ ಎರಡರಿಂದ ಮೂರು ಪಟ್ಟು ಹೆಚ್ಚು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಆದ್ದರಿಂದ ಪ್ರತಿದಿನ ಹಾಲು ಕುಡಿಯಲು ಸಾಧ್ಯವಾಗದವರಿಗೆ ಇದು ಉತ್ತಮ ಪರ್ಯಾಯ ಮಾರ್ಗ ಎಂದೇ ಹೇಳಬಹುದು.

ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಎ, ಸಿ ಮತ್ತು ಇ ಅಧಿಕವಾಗಿದೆ. ಇದು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳು ಸಹ ಸಮೃದ್ಧವಾಗಿದೆ. ನುಗ್ಗೆ ಸೊಪ್ಪು ಹಾಲಿಗಿಂತ ಹೆಚ್ಚು ಸಸ್ಯ ಆಧಾರಿತ ಕಬ್ಬಿಣ, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ.

ಆದರೆ ನಾವು ಹಾಲಿನ ಬದಲಿಗೆ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ನಮಗೆ ಕಡಿಮೆ ಕೊಬ್ಬು ಮತ್ತು ಪ್ರೋಟೀನ್ ಸಿಗುತ್ತದೆ. ಇಷ್ಟಲ್ಲದೇ ನುಗ್ಗೆ ಸೊಪ್ಪನ್ನು ನೀವು ಇತರ ಆಹಾರಗಳೋಂದಿಗೆ ಸಹ ಸೇವಿಸಬಹುದು. ನುಗ್ಗೆ ಸೊಪ್ಪು ನಾರಿನಂಶವನ್ನು ಹೊಂದಿದ್ದರೂ, ಅದನ್ನು ಹೆಚ್ಚು ತಿನ್ನುವುದರಿಂದ ಜೀರ್ಣಕಾರಿ ಅಸ್ವಸ್ಥತೆಗಳು ಉಂಟಾಗಬಹುದು. ಅಲ್ಲದೇ, ಅನೇಕ ಮಂದಿ ನುಗ್ಗೆ ಸೊಪ್ಪಿನ ರುಚಿಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಅಂತಹವರು ಹಾಲಿಗೆ ಬದಲಿಗೆ ನುಗ್ಗೆ ಸೊಪ್ಪು ಸೇವಿಸಲು ಇಚ್ಛಿಸುವುದಿಲ್ಲ.

ಲ್ಯಾಕ್ಟೋಸ್ ಅಸಹಿಷ್ಣುತೆ ಅಥವಾ ಸಸ್ಯಾಹಾರಿ ಆಹಾರವನ್ನು ಅನುಸರಿಸುವವರಿಗೆ ನುಗ್ಗೆ ಸೊಪ್ಪು ಪ್ರಯೋಜನಕಾರಿಯಾಗಿದೆ. ತಮಗೆ ಬೇಕಾದ ಪೋಷಕಾಂಶಗಳನ್ನು ಹುಡುಕಲು ಸಸ್ಯ ಆಧಾರಿತ ಆಹಾರಗಳನ್ನು ಅವಲಂಬಿಸಿರುವ ಅನೇಕರಿಗೆ ಇದು ನಿಜವಾದ ಚಿಕಿತ್ಸೆಯಾಗಿದೆ. ಆದರೆ ನುಗ್ಗೆ ಸೊಪ್ಪಿನಲ್ಲಿ ಹಾಲಿನಂತೆ ವಿಟಮಿನ್ ಬಿ 12 ಅಥವಾ ವಿಟಮಿನ್ ಡಿ ಇರುವುದಿಲ್ಲ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಹಾಲಿನಲ್ಲಿರುವ ಎಲ್ಲಾ ಪೋಷಕಾಂಶಗಳು ಸಿಗಬೇಕೆಂದರೆ ನುಗ್ಗೆ ಸೊಪ್ಪಿನೊಂದಿಗೆ ಇತರೆ ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಸೇವಿಸಬೇಕು.

ದೀರ್ಘಾವಧಿಯ ಲಾಭಕ್ಕಾಗಿ ನುಗ್ಗೆ ಸೊಪ್ಪಿನ ಕೃಷಿಗೆ ಕಡಿಮೆ ನೀರು ಬೇಕಾಗುತ್ತದೆ. ಅಲ್ಲದೇ ಇದನ್ನು ಎಲ್ಲಾ ಸೀಸನ್ನಲ್ಲಿಯೂ ಬೆಳೆಯಬಹುದು. ಹೆಚ್ಚಿನ ರಸಗೊಬ್ಬರ ಅಥವಾ ಕೀಟನಾಶಕಗಳ ಬಳಸುವ ಅಗತ್ಯ ಕೂಡ ಇಲ್ಲ.

ನುಗ್ಗೆ ಸೊಪ್ಪು ಸಾಕಷ್ಟು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದ್ದರೂ, ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುತ್ತದೆ. ಆದರೆ ನಿಮಗೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀವು ಪಡೆಯುತ್ತೀರಿ.

Shwetha M

Leave a Reply

Your email address will not be published. Required fields are marked *