ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಬೇಟೆ – 25 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಸೀಜ್!

ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಬೇಟೆ – 25 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಸೀಜ್!

ಅಧಿಕಾರಿಗಳು ಎಷ್ಟೇ ಅಲರ್ಟ್ ಆಗಿದ್ರೂ ಕೂಡ ಮಾದಕ ದಂಧೆಗೆ ಕಡಿವಾಣ ಹಾಕೋಕೆ ಸಾಧ್ಯವೇ ಆಗ್ತಿಲ್ಲ. ಅಧಿಕಾರಿಗಳ ಕಣ್ತಪ್ಪಿಸಿ ಅನುಮಾನವೇ ಬರದಂತೆ ಒಂದೊಂದು ರೀತಿಯಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಾರೆ. ಇದೀಗ ಭಾರತದ ಇತಿಹಾಸದಲ್ಲಿ ಅತಿದೊಡ್ಡ ಕಾರ್ಯಚರಣೆ ನಡೆಸಿ ಎನ್ ಸಿಬಿ ಡ್ರಗ್ಸ್ ಸೀಜ್ ಮಾಡಿದೆ.

ಇದನ್ನೂ ಓದಿ : ಮದ್ಯ ಪ್ರಿಯರಿಗೆ ಗುಡ್‌ ನ್ಯೂಸ್‌ – ಇನ್ನು ಮುಂದೆ ಆಫೀಸ್‌ನಲ್ಲೂ ಮದ್ಯಪಾನ ಮಾಡಬಹುದು!

ಮಾದಕವಸ್ತು ನಿಗ್ರಹ ದಳ (NCB) ಹಾಗೂ ಭಾರತೀಯ ನೌಕಾಪಡೆ (Indian Navy) ಶನಿವಾರ ಕೇರಳದ (Kerala) ಕೊಚ್ಚಿಯಲ್ಲಿ (Kochi) ವಿಶೇಷ ಕಾರ್ಯಾಚರಣೆ ನಡೆಸಿ ಬಂದರಿಗೆ ಆಗಮಿಸಿದ ನೌಕೆಯಿಂದ 134 ಚೀಲಗಳಲ್ಲಿ ತುಂಬಿದ್ದ ಮಾದಕ ವಸ್ತು (Drugs) ಪತ್ತೆ ಮಾಡಿತ್ತು. ಈ ಮಾದಕ ವಸ್ತುವಿನ ಮೌಲ್ಯ ಬರೋಬ್ಬರಿ 25,000 ಕೋಟಿ ರೂ. ಎಂದು ಎನ್‌ಸಿಬಿ ತಿಳಿಸಿದೆ. ಎನ್‌ಸಿಬಿ ಹಾಗೂ ನೌಕಾಪಡೆ ವಶಪಡಿಸಿಕೊಂಡ ಹೈ ಪ್ಯೂರಿಟಿ ಮೆಥಾಂಪೆಟಮೈನ್‌ನ ಎಣಿಕೆ ಪೂರ್ಣಗೊಂಡಿದೆ. ಒಟ್ಟು 2,525 ಕೆಜಿ ತೂಕದ ಡ್ರಗ್ಸ್ ಅನ್ನು ವಶಪಡಿಸಿಕೊಂಡಿದ್ದು, ಇದರ ಬೆಲೆಯನ್ನು ಆರಂಭದಲ್ಲಿ 12,000 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಆದರೆ ಡ್ರಗ್ಸ್ ನ ಗುಣಮಟ್ಟ ಪರಿಶೀಲನೆ ಬಳಿಕ ಇದರ ಬೆಲೆ 25,000 ಕೋಟಿ ರೂ. ನಷ್ಟಿದೆ ಎಂದು ಅಂದಾಜಿಸಲಾಗಿದೆ. ಮಾತ್ರವಲ್ಲದೇ ಇದು ದೇಶದಲ್ಲಿಯೇ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ಮಾದಕ ವಸ್ತು ಪ್ರಕರಣವಾಗಿದೆ.

ಮೂಲಗಳ ಪ್ರಕಾರ ಉತ್ಕೃಷ್ಟ ಗುಣಮಟ್ಟದ ಡ್ರಗ್ಸ್ ಅನ್ನು ಭಾರತ, ಶ್ರೀಲಂಕಾ ಹಾಗೂ ಮಾಲ್ಡೀವ್ಸ್‌ಗೆ ಸಾಗಿಸಲೆಂದು ಹಡಗಿನಲ್ಲಿ ತರಲಾಗಿತ್ತು. ತನಿಖೆ ವೇಳೆ ಅಫ್ಘಾನಿಸ್ತಾನದಲ್ಲಿ ಉತ್ಪಾದಿಸಲಾಗಿದ್ದ ಡ್ರಗ್ಸ್ ಅನ್ನು ಪಾಕಿಸ್ತಾನ-ಇರಾನ್ ಸನಿಹದ ಮಕ್ರಾಮ್ ಕರಾವಳಿಯಿಂದ ಮದರ್ ಶಿಪ್ ಎಂಬ ಹಡಗಿನಲ್ಲಿ ತರಲಾಗುತ್ತಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಶಂಕಿತ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿದಿದೆ.

suddiyaana