ಮುಂಗಾರು ವಿಳಂಬ.. ನೀರಿಗೆ ಬರ – ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಮುಂಗಾರು ವಿಳಂಬ.. ನೀರಿಗೆ ಬರ – ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

ಜೂನ್ ಒಂದರಿಂದ ಮಳೆ ಬರುತ್ತೆ ಅಂತಾ ಕರಾವಳಿ ಜಿಲ್ಲೆಯ ಜನರು ಕಾದಿದ್ದೇ ಬಂತು. ಆಗ ಬರುತ್ತೆ.. ಈಗ ಬರುತ್ತೆ ಮುಂಗಾರು ಅಂತಾ ನಿರೀಕ್ಷೆ ಮಾಡುತ್ತಿದ್ದಾಗಲೇ ಶಾಲೆ, ಕಾಲೇಜುಗಳು ಕೂಡಾ ಆರಂಭವಾಗಿವೆ. ಮಳೆಯ ಸುದ್ದಿಯೇ ಇಲ್ಲ. ಮೊದಲೇ ಜೀವನದಿಗಳಾದ ನೇತ್ರಾವತಿ, ನಂದಿನಿ, ಕುಮಾರಧಾರಾ ಬತ್ತಿ ಹೋಗಿವೆ. ಜಲಮೂಲಗಳು ಬತ್ತಿ ಹೋಗಿ ನೀರಿಗೆ ಬರ ಬಂದಿದೆ. ಮುಂಗಾರು ಆಗಮನ ವಿಳಂಬವಾಗಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಬವಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮನೆಗಳಲ್ಲಿ, ಕಚೇರಿಗಳಲ್ಲಿ ನೀರಿನ ಬರ ಶುರುವಾಗಿದೆ. ಇದರ ಮಧ್ಯೆ  ಶಾಲಾ-ಕಾಲೇಜುಗಳು ಆರಂಭವಾಗಿ ಅಲ್ಲೂ ನೀರಿನ ಕೊರತೆ ಉಂಟಾಗಿ ತೊಂದರೆಯಾಗಿದೆ.

ಇದನ್ನೂ ಓದಿ: ಗ್ಯಾರಂಟಿಗಳ ಬಳಿಕ ಜನರಿಗೆ ಬೆಲೆ ಏರಿಕೆ ಶಾಕ್‌ – ವಿದ್ಯುತ್ ಬಿಲ್ ಫಿಕ್ಸೆಡ್ ಚಾರ್ಜ್ ದಿಢೀರ್‌ ಹೆಚ್ಚಳ!

ಮುಂಗಾರು ವಿಳಂಬದಿಂದ ಉಂಟಾಗಿರುವ ನೀರಿನ ಕೊರತೆಯಿಂದ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನೀರಿನ ಸಮಸ್ಯೆ ಹೆಚ್ಚಾಗಿದ್ದರಿಂದ ಜಿಲ್ಲೆಯ ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿವೆ. ಇನ್ನು ಕೆಲವೆಡೆ ಶಿಕ್ಷಣ ಸಂಸ್ಥೆಗಳು ಅರ್ಧ ದಿನ ತರಗತಿ ನಡೆಸುತ್ತಿವೆ. ಕಾಲೇಜು ವಿದ್ಯರ್ಥಿಗಳಿಗೆ ಆನ್ ಲೈನ್ ಮೂಲಕ ಪಾಠಗಳನ್ನು ಮಾಡಲಾಗುತ್ತಿದೆ. ಮಂಗಳೂರು ಉತ್ತರ ಹಾಗೂ ದಕ್ಷಿಣ ವಲಯದ ಶಾಲೆಗಳಿಗೂ ನೀರಿನ ಕೊರೆತೆ ಕಾಣಿಸಿಕೊಂಡಿದೆ. ಇಲಾಖೆಯ ಪ್ರಕಾರ ಮೂಲ್ಕಿ ಮೂರು ಶಾಲೆಗಳಿಗೆ ಮತ್ತು ವಿಟ್ಲದ ಒಂದು ಶಾಲೆಯಲ್ಲಿ ವಾರಕ್ಕೊಂದು ಬಾರಿ ಮಾತ್ರ ನೀರು ಪೂರೈಕೆಯಾಗುತ್ತಿದೆ. ಇದರಿಂದ ಮಕ್ಕಳಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಇನ್ನೊಂದಡೆ ಪಿಯುಸಿ ಹಾಗೂ ಪದವಿ ತರಗತಿಗಳು ಕೂಡ ಆರಂಭವಾಗಿದ್ದು, ಪ್ರಮುಖ ಹಾಸ್ಟೆಲ್‌ಗಳಲ್ಲಿ ನೀರಿನ ಸಮಸ್ಯೆಗಳು ಕಾಣಿಸಿಕೊಂಡಿದೆ. ನಗರದ ಪ್ರಮುಖ ವಿದ್ಯಾಸಂಸ್ಥೆಯಲ್ಲಿ ದಿನವೊಂದಕ್ಕೆ 10 ಟ್ಯಾಂಕರ್ ನೀರನ್ನು ಪೂರೈಕೆ ಮಾಡಿಕೊಂಡು ಪರಿಸ್ಥಿತಿ ಸುಧಾರಣೆ ಮಾಡುವ ಕಾರ್ಯವಾಗುತ್ತಿದೆ.

suddiyaana