ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್‌ ಹಾರಾಟ – ದೆಹಲಿ ಪೊಲೀಸರಿಂದ ತೀವ್ರಗೊಂಡ ತನಿಖೆ

ಪ್ರಧಾನಿ ಮೋದಿ ನಿವಾಸದ ಮೇಲೆ ಡ್ರೋನ್‌ ಹಾರಾಟ – ದೆಹಲಿ ಪೊಲೀಸರಿಂದ ತೀವ್ರಗೊಂಡ ತನಿಖೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಮೇಲೆ ಅನುಮಾನಾಸ್ಪದ ಡ್ರೋನ್‌ ಒಂದು ಹಾರಾಟ ನಡೆಸಿದೆ. ಈ ಸಂಬಂಧ ದೆಹಲಿ ಪೊಲೀಸರು ತನಿಖೆ ನಡೆಸಿದ್ದಾರೆ.

ಇದನ್ನೂ ಓದಿ: ಇನ್ನೂ ಬಗೆಹರಿಯದ ವಿಪಕ್ಷ ನಾಯಕನ ಆಯ್ಕೆ ಕಗ್ಗಂಟು – ರಾಜ್ಯಕ್ಕೆ ಇಬ್ಬರು ವೀಕ್ಷಕರ ಆಗಮನ

ಸೋಮವಾರ ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಗೆ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಮಂತ್ರಿಗಳ ನಿವಾಸದ ಮೇಲೆ ಡ್ರೋಣ್ ಹಾರಾಟ ನಡೆಸಿರುವುದನ್ನು ಮೋದಿ ಭದ್ರತೆಗಾಗಿ ನಿಯೋಜನೆಗೊಂಡಿರುವ ವಿಶೇಷ ರಕ್ಷಣಾ ದಳದ ಅಧಿಕಾರಿಗಳು ಗಮನಿಸಿದ್ದಾರೆ. ಕೂಡಲೇ ದೆಹಲಿ ಪೊಲೀಸರು ಶೋಧಕ್ಕೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಆದರೆ, ಇದೂವರೆಗೆ ಯಾವುದೇ ಡ್ರೋಣ್ ಪತ್ತೆಯಾಗಿಲ್ಲ ಎಂದು ತಿಳಿದಬಂದಿದೆ.

ಪಿಎಂ ಮೋದಿ ಅವರ ನಿವಾಸವು ರೆಡ್ ಝೋನ್ ಅಥವಾ ನೋ ಡ್ರೋನ್ ಫ್ಲೈ ಝೋನ್ ಅಡಿಯಲ್ಲಿ ಬರುತ್ತದೆ. ಆದರೂ ಕೂಡ ಕಿಡಿಗೇಡಿಗಳು ಡ್ರೋನ್‌ ಹಾರಾಟ ನಡೆಸಿದ್ದಾರೆ. ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

suddiyaana