ಭರ್ಜರಿ ಬ್ಯಾಚುಲರ್ 2 ವಿನ್ನರ್ ಸುನೀಲ್​ ಅಮ್ರಿಟಾ – ಗೆದ್ದವರಿಗೆ ಸಿಕ್ಕ ಹಣವೆಷ್ಟು?

ಭರ್ಜರಿ ಬ್ಯಾಚುಲರ್ 2 ವಿನ್ನರ್ ಸುನೀಲ್​ ಅಮ್ರಿಟಾ – ಗೆದ್ದವರಿಗೆ ಸಿಕ್ಕ ಹಣವೆಷ್ಟು?

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಮುಕ್ತಾಯಗೊಂಡಿದೆ. 10 ಜೋಡಿಗಳಲ್ಲಿ ಯಾರು ವಿನ್ನರ್‌ ಯಾರು ರನ್ನರ್‌ ಅನ್ನೋದು ಅನೌನ್ಸ್‌ ಆಗಿದೆ. ಸುನೀಲ್‌ ಅಮ್ರಿಟಾ ಜೋಡಿ ಸೀಸನ್‌ 2 ವಿನ್ನರ್‌ ಆಗಿದ್ದಾರೆ.

ಇದನ್ನೂ ಓದಿ: ಆಗಸ್ಟ್ 2ಕ್ಕೆ ಭಯಂಕರ ಸೂರ್ಯಗ್ರಹಣ – 6 ನಿಮಿಷ ಇಡೀ ಜಗತ್ತಿಗೆ ಕತ್ತಲು!

ಭಾನುವಾರ ಸಂಜೆ 6 ಗಂಟೆಯಿಂದ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಗ್ರ್ಯಾಂಡ್‌ ಫಿನಾಲೆ ಪ್ರಸಾರವಾಗಿತ್ತು. ಸುನೀಲ್ ಅಮ್ರಿಟಾ ಜೋಡಿ ಸೀಸನ್‌ 2 ವಿನ್ನರ್​ ಆಗಿದ್ದು, ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ​​. ರಕ್ಷಕ್​ ಬುಲೆಟ್, ರಮೋಲಾ ಜೋಡಿ ಫಸ್ಟ್​ ರನ್ನಪ್​​ ಆಗಿದ್ದು, 2ನೇ ರನ್ನರ್ ಅಪ್ ಸ್ಥಾನಕ್ಕೆ​ ಡ್ರೋನ್​ ಪ್ರತಾಪ್, ಗಗನಾ ತೃಪ್ತಿಪಟ್ಟುಕೊಂಡಿದ್ದಾರೆ.

ಇನ್ನು ಭರ್ಜರಿ ಬಾಚುಲರ್ಸ್‌ ಸೀಸನ್‌ 2 ವಿನ್ನರ್‌ ಆಗಿರೋ ಸುನೀಲ್​ಗೆ ಟ್ರೋಫಿ ಜೊತೆಗೆ 15 ಲಕ್ಷ ರೂಪಾಯಿ ಕ್ಯಾಶ್ ಪ್ರೈಜ್ ಸಿಕ್ಕಿದೆ. ರನ್ನರ್‌ ಅಪ್‌ ಸ್ಥಾನ ಪಡೆದ ರಕ್ಷಕ್​​ಗೆ 10 ಲಕ್ಷ ರೂಪಾಯಿ ಸಿಕ್ಕಿದೆ. ಪ್ರತಾಪ್​ಗೆ 3 ಲಕ್ಷ ರೂಪಾಯಿ ಬಹುಮಾನವಾಗಿ ಸಿಕ್ಕಿದ್ದು, ಅದರಲ್ಲಿ ಅರ್ಧ ಹಣವನ್ನು ಗಗನಾಗೆ ನೀಡೋದಾಗಿ ಪ್ರತಾಪ್ ವೇದಿಕೆ ಮೇಲೆ ಹೇಳಿದರು. ವಿಶೇಷ ಎಂದರೆ ಈ ಸೀಸನ್​ ಸ್ಪೆಷಲ್​ ಸ್ಪರ್ಧಿ ಸೂರ್ಯಗೆ 1 ಲಕ್ಷ ರೂಪಾಯಿ ನೀಡಲಾಗಿದೆ.

Shwetha M