ಡ್ರೋನ್ ವಿಚಾರವನ್ನೇ ಮುಂದಿಟ್ಟು ಗೇಲಿ ಮಾಡಿ ಸ್ಪರ್ಧಿಗಳ ತಮಾಷೆ – ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಪ್ರತಾಪ್  

ಡ್ರೋನ್ ವಿಚಾರವನ್ನೇ ಮುಂದಿಟ್ಟು ಗೇಲಿ ಮಾಡಿ ಸ್ಪರ್ಧಿಗಳ ತಮಾಷೆ – ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಪ್ರತಾಪ್  

ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್​ ಈಗ ಫುಲ್ ಟ್ರೆಂಡಿಂಗ್​ನಲ್ಲಿದೆ. ಶೋ ಶುರುವಾಗಿ ಒಂದು ವಾರ ಆಗಿದ್ದು ಮೊದಲ ಎಲಿಮಿನೇಷನ್​ಗೆ ಕೌಂಟ್​ಡೌನ್ ಶುರುವಾಗಿದೆ. ಬಿಗ್​ಬಾಸ್ 10ನೇ ಸೀಸನ್​ನ ಒಂದೇ ವಾರದಲ್ಲಿ ಯಾರು ಹೊರಗೆ ಹೋಗ್ತಾರೆ.. ಯಾರು ಮನೆಯಲ್ಲಿ ಉಳಿಯುತ್ತಾರೆ ಅನ್ನೋ ಲೆಕ್ಕಚಾರ ಶುರುವಾಗಿದೆ.. ಆದರೆ 17 ಸ್ಪರ್ಧಿಗಳ ಪೈಕಿ ಮೊದಲ ವಾರ ಅತೀ ಹೆಚ್ಚು ಚರ್ಚೆಯಾದ ಹೆಸ್ರು ಅಂದ್ರೆ ಅದು ಡ್ರೋನ್ ಪ್ರತಾಪ್. ಮನೆಯಲ್ಲಿ ಇತರೆ ಸ್ಪರ್ಧಿಗಳು ಡ್ರೋನ್ ಬಗ್ಗೆಯೇ ಮಾತಾಡ್ತಾ ಪ್ರತಾಪ್​ರನ್ನ ಗೇಲಿ ಮಾಡ್ತಾ ಮಜಾ ತಗೊಳ್ತಿದ್ದಾರೆ.

ಇದನ್ನೂ ಓದಿ : ರಣ್ಬೀರ್ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್.. – ಪಾಪ ವಿಜಯ್ ದೇವರಕೊಂಡ ಗತಿಯೇನು?

ಪ್ರತಾಪ್. ಬಹುಶಃ ಈ ಹೆಸರು ಹೇಳಿದ್ರೆ ಜನ ಯಾರೋ ಅನ್ಕೊಂಡು ಸುಮ್ಮನಾಗಿಬಿಡ್ತಾರೆ. ಅದೇ ಡ್ರೋನ್ ಪ್ರತಾಪ್ ಅಂದ್ರೆ ಎಲ್ಲರ ಕಿವಿಯೂ ಒಮ್ಮೆ ನೆಟ್ಟಗಾಗುತ್ತೆ. ಹೋ ಅವ್ರ ಅಂತಾ ಮಾತು ಶುರುಮಾಡ್ತಾರೆ. 10ನೇ ಸೀಸನ್​ನಲ್ಲಿ ಬಿಗ್​ಬಾಸ್ ಮನೆಗೆ ಕಾಲಿಟ್ಟಿರೋ ಇದೇ ಡ್ರೋನ್ ಪ್ರತಾಪ್ ಮತ್ತೊಮ್ಮೆ ಕನ್ನಡಿಗರ ಗಮನ ಸೆಳೆದಿದ್ದಾರೆ. ಬಿಗ್​ಬಾಸ್ ಮನೆಯ ಸ್ಪರ್ಧಿಗಳಿಗಂತೂ ಡ್ರೋನ್ ಪ್ರತಾಪ್ ಬಗ್ಗೆ ಮಾತಾಡದೆ ಇರೋಕೇ ಆಗ್ತಿಲ್ಲ. ಆದ್ರೆ ಹೊರಜಗತ್ತಿನಲ್ಲಿ ಕಂಡ ಪ್ರತಾಪ್​ಗೂ ಬಿಗ್​ಬಾಸ್ ಮನೆಯಲ್ಲಿ ಇರೋ ಪ್ರತಾಪ್​ಗೂ ಅಜಗಜಾಂತರ ವ್ಯತ್ಯಾಸ ಇದೆ. ಅದನ್ನ ಹೇಳೋ ಮುನ್ನ ಬಿಗ್​ಗಾಸ್​ಗೆ ಬರೋ ಮುನ್ನ ಪ್ರತಾಪ್ ಹೇಗಿದ್ರು ಅನ್ನೋದನ್ನ ಹೇಳ್ತೇನೆ. ನಾನೊಬ್ಬ ಯುವವಿಜ್ಞಾನಿ ಅಂತಾ ಸ್ವಯಂ ಘೋಷಿಸಿಕೊಂಡಿದ್ದ ಪ್ರತಾಪ್ ತಾನು ಡ್ರೋನ್ ಕಂಡು ಹಿಡಿದಿದ್ದೇನೆ. ಮೆಡಿಕಲ್ ಎಮರ್ಜೆನ್ಸಿ ಸೇರಿದಂತೆ ಎಲ್ಲದಕ್ಕೂ ಬಳಸಿಕೊಳ್ಬೋದು. ಮನೆಯಲ್ಲಿ ತುಂಬಾನೇ ಬಡತನ ಇತ್ತು ಸಾಕಷ್ಟು ಕಟ್ಟಪಟ್ಟಿದ್ದೇನೆ ಎಂದೆಲ್ಲಾ ಹೇಳಿಕೊಂಡಿದ್ರು. ಬಡತನದಲ್ಲೂ ಈ ಹುಡುಗ ಎಂಥಾ ಸಾಧನೆ ಮಾಡಿದ್ದಾನಪ್ಪ ಅಂತಾ ಇಡೀ ದೇಶವೇ ಇವನತ್ತ ತಿರುಗಿ ನೋಡಿತ್ತು. ಚಿಕ್ಕ ವಯಸ್ಸಲ್ಲೇ ಶಾಲಾ ಕಾಲೇಜುಗಳಿಗೆ ವಿಐಪಿ, ಚೀಫ್ ಗೆಸ್ಟ್ ಆಗಿ ಹೋಗಿ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿಯ ಭಾಷಣ ಮಾಡ್ತಿದ್ರು. ಇದರ ನಡುವೆ ಕೆಲ ಪ್ರಶಸ್ತಿಗಳೂ ಹುಡುಕಿ ಬಂದವು. ಕರ್ನಾಟಕದ ಜನ್ರಂತೂ ನಮಗೂ ಈ ಪ್ರತಾಪ್​ನಂಥ ಮಗ ಇರ್ಬೇಕಿತ್ತು ಅನ್ಕೊಂಡಿದ್ರು.

ಪ್ರತಾಪ್ ಹೆಸ್ರು ಡ್ರೋನ್ ಪ್ರತಾಪ್ ಎಂದೇ ಜಗತ್ತಿಗೆ ಪರಿಚಿತ ಆಗೋಯ್ತು. ಆದ್ರೆ ಅದೊಂದು ದಿನ ಪ್ರತಾಪ್ ಡ್ರೋನ್​ನೇ ಕಂಡು ಹಿಡ್ದಿಲ್ಲ. ಇವರ ಮಾತು, ಸಾಧನೆ ಎಲ್ಲವು ಸುಳ್ಳು ಅನ್ನೋ ಸತ್ಯ ಬಯಲಾಯ್ತು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಫುಲ್ ಟ್ರೋಲ್ ಶುರುವಾಯ್ತು. ಜನ ಕೂಡ ಹೀಯಾಳಿಸಿ ಮಾತಾಡೋಕೆ ಶುರು ಮಾಡಿದ್ರು. ಬಳಿಕ ಅಷ್ಟೇನು ಕಾಣಿಸಿಕೊಳ್ಳದ ಪ್ರತಾಪ್ ದಿಢೀರ್ ಅಂತಾ ಬಿಗ್​ಬಾಸ್ 10ಗೆ ಕಾಲಿಟ್ಟಿದ್ದಾರೆ. ಆದ್ರೆ ಹೊರ ಜಗತ್ತಿನಲ್ಲಿ ಕಂಡ ಪ್ರತಾಪ್​ಗೂ ಬಿಗ್​ಬಾಸ್​ನಲ್ಲಿರೋ ಪ್ರತಾಪ್​ಗೂ ಸಾಕಷ್ಟು ವ್ಯತ್ಯಾಸ ಇದೆ.. ಬಿಗಾಬಾಸ್​ ಮನೆಯಲ್ಲಿ ಇತರೆ ಸ್ಪರ್ಧಿಗಳು ಹೀಯಾಳಿಸುತ್ತಿದ್ದರೂ ಹೊರಗೆ ಜನ ಪ್ರತಾಪ್ ಪರ ಮಾತಾಡುತ್ತಿದ್ದಾರೆ. ಪ್ರತಾಪ್​ನ ಮುಗ್ಧತೆ, ಸಿಂಪ್ಲಿಸಿಟಿ, ಆತ ಮಾತಾಡೋ ರೀತಿಗೆ ಎಲ್ಲರೂ ಮನಸೋತಿದ್ದಾರೆ.

ಆದ್ರೆ ಬಿಗ್​ಬಾಸ್ ಮನೆಯಲ್ಲಿ ಮಾತ್ರ ಇತರೆ ಸ್ಪರ್ಧಿಗಳಿಗೆ ಡ್ರೋನ್ ಪ್ರತಾಪ್ ಟಾರ್ಗೆಟ್ ಆಗಿದ್ದಾರೆ. ಪದೇಪದೆ ಡ್ರೋನ್ ವಿಚಾರವನ್ನೇ ತೆಗೆದು ಟೀಸ್ ಮಾಡ್ತಾ ಮಜಾ ತಗೊಳ್ತಿದ್ದಾರೆ. ಪ್ರತಿಯೊಂದು ಜಗಳ, ವಾದಕ್ಕೂ ಡೋನ್ ಎಳೆದು ತಂದು ಪ್ರತಾಪ್ ಅವರನ್ನು ಬಾಯಿ ಮುಚ್ಚಿಸುತ್ತಿದ್ದಾರೆ. ವರ್ತೂರ್ ಸಂತೋಷ್ ಕೂಡ ಅದೇ ವಿಚಾರವಾಗಿ ಜಗಳ ಮಾಡಿದ್ರು. ಸ್ನೇಹಿತ್ ಕೂಡ ಡ್ರೋನ್ ಪ್ರತಾಪ್ ಅವ್ರನ್ನ ಡೋಂಗಿ ಎನ್ನುವ ಮೂಲಕ ಸಿಟ್ಟು ತೀರಿಸಿಕೊಂಡಿದ್ರು. ಇನ್ನು ಅಡುಗೆ ಮಾಡುವಾಗ ಸ್ವಚ್ಚತೆ ಕಾಪಾಡುತ್ತಿಲ್ಲ ಎಂದು ವಿನಯ್ ಗೌಡ ಹೇಳಿದ್ದಾರೆಂದು  ಪ್ರತಾಪ್ ಹೇಳಿದ್ದೇ ದೊಡ್ಡ ಜಗಳಕ್ಕೆ ಕಾರಣವಾಗಿತ್ತಯ. ನಾನು ಹಾಗೆ ಹೇಳಿಯೇ ಇಲ್ಲ ಎಂದಿದ್ದ ವಿನಯ್ ಬಳಿಕ ಡ್ರೋನ್​ನ ರಕ್ಕೆ ಪುಕ್ಕ ಎಲ್ಲ ಮುರಿತಿನಿ ಎನ್ನುವ ಮೂಲಕ ಸೈಲೆಂಟ್ ಮಾಡಿದ್ರು.

ಇನ್ನು ತುಕಾಲಿ ಸಂತುಗಂತೂ ಡ್ರೋನ್ ಪ್ರತಾಪ್​ನೇ ಗುರಿ ಎನ್ನುವ ಹಾಗಿದೆ. ವಾರವಿಡಿ ಪ್ರತಾಪ್ ಅವರ ಕಾಲೆಳೆಯುವ ಮೂಲಕ ತಮಾಷೆ ಮಾಡುತ್ತಾ ಖುಷಿ ಪಡ್ತಿದ್ದಾರೆ. ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್ ಅದೇ ರೀತಿಯ ವರ್ತನೆ ತೋರುತ್ತಿದ್ದಾರೆ. ನಾನು ಎಲ್ಲರಿಗೂ ಗೌರವ ಕೊಟ್ಟು ಮಾತನಾಡುತ್ತೀನಿ. ನೀವು ಹೇಗೆ ಮಾತನಾಡುತ್ತೀರಾ ಅನ್ನೋದು ನಿಮಗೆ ಬಿಟ್ಟಿದ್ದು ಎಂದು ತುಕಾಲಿ ಸಂತುಗೆ ಡ್ರೋನ್ ಪ್ರತಾಪ್ ಹೇಳಿದ್ದರು. ಅದಕ್ಕೂ ತುಕಾಲಿ ಸಂತು ವ್ಯಂಗ್ಯ ಮಾಡಿದ್ದರು. ಪ್ರತಾಪ್ ಬಿಗ್ ಬಾಸ್ ಮುಗಿದ್ಮೇಲೆ ಮೆಜೆಸ್ಟಿಕ್, ಯಶವಂತಪುರ, ಹೆಬ್ಬಾಳ ಫ್ಲೈ ಓವರ್‌ನಲ್ಲಿ ಇರ್ತಾನೆ. 100 ರೂಪಾಯಿಗೆ 3 ಡ್ರೋನ್ ಅಂತ ಮಾರುತ್ತಿರುತ್ತಾನೆ ಅಂತಾ ಆಡಿಕೊಂಡು ನಕ್ಕಿದ್ದರು. ಸೀರಿಯಸ್​ನೆಸ್ ಇಲ್ಲದ ಸಂತು ಬಗ್ಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕೂಡ ವ್ಯಕ್ತವಾಗ್ತಿದೆ. ಹಾಸ್ಯ ಎಂದರೆ ಇನ್ನೊಬ್ಬರನ್ನು ಗೇಲಿ ಮಾಡೋದನ್ನ ಎನ್ನುತ್ತಿದ್ದಾರೆ. ಪದೇಪದೆ ಡ್ರೋನ್ ವಿಚಾರ ತರುತ್ತಿರುವುದಕ್ಕೆ ಪ್ರತಾಪ್ ಬೇಸರಗೊಂಡಿದ್ದಾರೆ. ಹೊರಗಿನ ವಿಷಯವನ್ನು ದೊಡ್ಮನೆ ಒಳಗೆ ತರಬೇಡಿ ಕೇಳಿಕೊಂಡಿದ್ದಾರೆ. ಆದ್ರೂ ಕೂಡ ಮನೆಯ ಇತರೆ ಸ್ಪರ್ಧಿಗಳಿಗೆ ಅದೊಂತರ ಚಾಳಿ ಆಗೋಗಿದೆ. ಇದ್ರಿಂದ ತೀವ್ರವಾಗಿ ಬೇಸರಗೊಂಡ ಪ್ರತಾಪ್ ವಾಶ್​ರೂಮ್ ಒಳಗೆ ಹೋಗಿ ಒಬ್ಬರೇ ಕುಳಿತಿದ್ರು. ಈ ವೇಳೆ ಸ್ನೇಹಿತ್ ಮತ್ತು ರಕ್ಷಕ್ ಪ್ರತಾಪ್ ಬಳಿ ಹೋಗಿ ಏನಾಯಿತು ಎಂದು ಕೇಳಿದ್ದಾರೆ. ದುಃಖ ತಡೆಯಲಾರದೆ ವಾಶ್​ರೂಂ ಒಳಗೆ ತೆರಳಿ ಪ್ರತಾಪ್ ಕಣ್ಣೀರು ಹಾಕಿದ್ದಾರೆ. ಬಳಿಕ ಅಲ್ಲಿಗೆ ಬಂದ ಸಂಗೀತಾ ಶೃಂಗೇರಿ ಹಾಗೂ ನಮ್ರತಾ ಗೌಡ  ಪ್ರತಾಪ್ ಅವರನ್ನು ಸಮಾಧಾನ ಮಾಡಲು ಯತ್ನಿಸಿದ್ದಾರೆ. ಪ್ರತಾಪ್ ಅಳುವುದನ್ನು ನೋಡಿ ಸಂಗೀತಾ ಕಣ್ಣಲ್ಲಿ, ನಮ್ರತಾ ಕಣ್ಣಲ್ಲಿ ನೀರು ಬಂದಿದೆ. ಡ್ರೋನ್ ಪ್ರತಾಪ್ ರ ಸೈಲೆಂಟ್ ವರ್ತನೆ ನೋಡಿ ಕನ್ನಡಿಗರು ಕೂಡ ಆತನ ಪರ ಮಾತನಾಡುತ್ತಿದ್ದಾರೆ. ಬಿಗ್ ಬಾಸ್ ಶುರುವಾದ ಒಂದೇ ವಾರದಲ್ಲಿ ಕೆಲವರು ಬಿಗ್​ಬಾಸ್​ ಸೀಸನ್​ 10ರಲ್ಲಿ ಪ್ರತಾಪ್​ ಅವರೇ ಗೆಲ್ಲಬೇಕು ಅನ್ನುತ್ತಿದ್ದಾರೆ.

Shantha Kumari