ರಚಿತಾ ರಾಮ್ಗೆ ಡ್ರೋನ್ ಪ್ರಪೋಸ್! – ಡಿಂಪಲ್ ಕ್ವೀನ್ ಗೆ ಕ್ರೇಜಿಸ್ಟಾರ್ ಪ್ರೇಮಪಾಠ
![ರಚಿತಾ ರಾಮ್ಗೆ ಡ್ರೋನ್ ಪ್ರಪೋಸ್! – ಡಿಂಪಲ್ ಕ್ವೀನ್ ಗೆ ಕ್ರೇಜಿಸ್ಟಾರ್ ಪ್ರೇಮಪಾಠ](https://suddiyaana.com/wp-content/uploads/2025/02/3.png)
ಕನ್ನಡ ಕಿರುತೆರೆಯಲ್ಲಿ ಈಗ ಹೊಸ ಸೀರಿಯಲ್, ಹೊಸ ಹೊಸ ರಿಯಾಲಿಟಿ ಶೋಗಳ ಪರ್ವ ಶುರುವಾಗಿದೆ. ಒಂದಾದ ಮೇಲೊಂದು ರಿಯಾಲಿಟಿ ಶೋಗಳು ವೀಕ್ಷರನ್ನ ಮನರಂಜಿಸ್ತಿವೆ.. ಇದೀಗ ಜೀಕನ್ನಡ ವಾಹಿನಿಯಲ್ಲಿ ಭರ್ಜರಿ ಬ್ಯಾಚುಲರ್ಸ್ ಮತ್ತೆ ಶುರುವಾಗ್ತಿದೆ.. ಸೀಸನ್ 2 ತೆರೆ ಮೇಲೆ ಬರಲು ಸಿದ್ಧವಾಗಿದೆ. ಇದೀಗ ಈ ಶೋನಲ್ಲೇ ಡ್ರೋನ್ ಪ್ರತಾಪ್ ಡಿಂಪಲ್ ಟ್ವೀನ್ ಗೆ ಪ್ರೇಮದ ಬಾಣ ಬಿಟ್ಟಿದ್ದಾರೆ.. ಆದ್ರೆ ರಚಿತಾರಾಮ್ ಮಾತ್ರ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ಅಷ್ಟಕ್ಕೂ ಶೋ ನಲ್ಲಿ ಆಗಿದ್ದೇನು? ಪ್ರತಾಪ್ ಪ್ರಪೋಸಲ್ ನ ರಚಿತಾರಾಮ್ ಒಪ್ಪಿಕೊಂಡ್ರಾ? ನಟಿಗೆ ಯಾರ್ಯಾರು ಪ್ರಪೋಸ್ ಮಾಡಿದ್ರು.. ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಜಸ್ಪ್ರೀತ್ ಬುಮ್ರಾ ಆಡದಿದ್ರೆ CUP ಗೆಲ್ಲಲ್ಲ – ಚಾಂಪಿಯನ್ಸ್ ಟ್ರೋಫಿ ಆಸೆ ಕಮರಿತಾ?
ಜನರಿಗೆ ಮನರಂಜನೆ ನೀಡುವಲ್ಲಿ ಜೀ ಕನ್ನಡ ಎಕ್ಸಪರ್ಟ್. ಸದಾ ಒಂದಲ್ಲ ಒಂದು ವಿನೂತನ ಕಾರ್ಯಕ್ರಮಗಳ ಮೂಲಕ ವೀಕ್ಷಕರನ್ನ ಮನರಂಜಿಸುತ್ತಾ ಬಂದಿದೆ. ವಾರದ ದಿನಗಳಲ್ಲಿ ಹಿಟ್ ಧಾರಾವಾಹಿಗಳನ್ನು ನೀಡುತ್ತಿದ್ರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳ ಮೂಲಕ ಜನರನ್ನು ರಂಜಿಸುತ್ತಿದೆ. ಈಗ ಮತ್ತೊಂದು ರಿಯಾಲಿಟಿ ಶೋ ಬರ್ತಿದೆ.. ಅದು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 .. ಇದ್ರ ಪೋಮೋ ರಿಲೀಸ್ ಆಗಿದೆ. ಇದ್ರಲ್ಲಿ ಡ್ರೋನ್ ಪ್ರತಾಪ್ ರಚಿತಾ ರಾಮ್ ಗೆ ಪ್ರೇಮದ ಬಾಣ ಬಿಟ್ಟುದ್ದಾರೆ..
ರಚಿತಾ ರಾಮ್ ಭರ್ಜರಿ ಬ್ಯಾಚುಲರ್ಸ್ ನಲ್ಲಿ ಜಡ್ಜ್ ಆಗಿದ್ದಾರೆ. ಪ್ರೋಮೋ ಡಿಫರೆಂಟ್ ಆಗಿದ್ದು, ಹುಡುಗರ ಶಾಪ ವಿಮೋಚನೆ ಬಗ್ಗೆ ಒಂದು ಡ್ರಾಮಾವೇ ಕ್ರಿಯೇಟ್ ಆಗಿದೆ. 10 ಸಾವಿರ ವರ್ಷಗಳ ಹಿಂದೆ ಸುಂದರಿಯನ್ನು ಪಟಾಯಿಸಲು ಆದಿ ಮಾನವ ಗಾಲಿಯನ್ನು ಕಂಡು ಹಿಡಿದ. ಗಾಲಿ ಮನದಾಳದ ಬದಲು ಪಾತಾಳಕ್ಕೆ ಇಳಿಯಿತು. ಪ್ರೀತಿಯ ಕಿಚ್ಚು ಹಚ್ಚಲು ಬಂದವ ಬೆಂಕಿಯಲ್ಲಿ ಮರೆಯಾಗಿ ಹೋದ. ಹೂವು ತಂದವ ಮಿಂಚಿನಂತೆ ಮರೆಯಾದ. ಇವರ ಪ್ರೀತಿಯ ಹಸಿವು ಸ್ವಯಂವರಕ್ಕೂ ಕಾಲಿಟ್ಟಿತು ಎಂಬ ಸ್ಟೋರಿಯೊಂದಿಗೆ ಪ್ರೋಮೋ ರಿಲೀಸ್ ಆಗಿದೆ. ಪ್ರೋಮೋದಲ್ಲಿ ರಾಜ ನಾಗಿ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿದ್ದಾರೆ. ಈ ವೇಳೆ ಡ್ರೋನ್ ಪ್ರತಾಪ್ ರಚಿತಾರಾಮ್ ಗೆ ಪ್ರೇಮದ ಬಾಣ ಬಿಟ್ಟಿದ್ದಾರೆ.. ಆದ್ರೆ ಆ ಪ್ರೇಮದ ಬಾಣ ಮಿಸ್ ಆಗಿ ರಾಜನಿಗೆ ತಾಗಿದೆ. ಆಗ ರಚಿತಾ ರಾಮ್, ನೀವುಗಳು ನನ್ನ ಹಿಂದೆ ಎಷ್ಟೇ ವರ್ಷ ಬಂದರೂ ನಾನು ನಿಮಗೆ ಬೀಳಲ್ಲ ಎಂದಿದ್ದಾರೆ. ಈ ವೇಳೆ ಪ್ರೇಮಲೋಕದ ಕ್ರೇಜಿಸ್ಟಾರ್ ರವಿಚಂದ್ರನ್ ಸಖತ್ ಎಂಟ್ರಿ ಆಗಿದೆ. ಆಗ ಹುಡುಗ್ರು, 10 ಸಾವಿರ ವರ್ಷಗಳಿಂದ 1 ಹುಡುಗಿನೂ ಬೀಳಿಸಿಕೊಳ್ಳಲಿಕ್ಕೆ ಆಗಿಲ್ಲ.. ಯಾವ ಹುಡುಗೀನೂ ಬೀಳ್ತಿಲ್ಲ ಅಂದು ಹೇಳಿದ್ದಾರೆ.. ಆಗ ಚೈಲ್ಡ್ ನನ್ ಮಕ್ಕಳ.. ನೀವು ಹೀಗಿದ್ರೆ ಯಾವ ಹುಡುಗೀನು ಬೀಳಲ್ಲ.. ನನ್ನ ಸ್ಕೂಲ್ ಗೆ ಸೇರ್ಕೊಳ್ಳಿ ಅಂತಾ ಕ್ರೇಜಿಸ್ಟಾರ್ ಹೇಳಿದ್ದಾರೆ..
ಇನ್ನು ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನಲ್ಲಿ ರಚಿತಾರಾಮ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಜಡ್ಜಸ್ ಆಗಿದ್ದಾರೆ.. ಬಿಗ್ಬಾಸ್ ಕನ್ನಡ ಸೀಸನ್ 10ರಲ್ಲಿ ಭಾಗವಹಿಸಿದ್ದ ರಕ್ಷಕ್ ಬುಲೆಟ್, ಡ್ರೋನ್ ಪ್ರತಾಪ್, ಸರಿಗಮಪ ಸೀಸನ್ 20ರ ವಿಜೇತ ದರ್ಶನ್ ನಾರಾಯಣ್, ಇದೇ ವರ್ಷ ಸರಿಗಮಪ ಕಾರ್ಯಕ್ರಮಕ್ಕೆ ಆಡಿಷನ್ ನೀಡಿದ್ದ ಪ್ರೇಮ್ ಥಾಪ, ಪ್ರವೀಣ್ ಜೈನ್ ಕೂಡ ಇದ್ದಾರೆ. ಜೊತೆಗೆ ಕಲರ್ಸ್ ವಾಹಿನಿಯಲ್ಲಿ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಮಿಂಚಿದ್ದ ಕೆಲವರು ಭರ್ಜರಿ ಬ್ಯಾಚುಲರ್ಸ್ ಗೆ ಎಂಟ್ರಿಕೊಟ್ಟಿದ್ದಾರೆ. ಈ ಬಾರಿ ಈ ರಿಯಾಲಿಟಿ ಶೋ ಯಾವ ರೀತಿಯಲ್ಲಿ ಮನರಂಜನೆ ನೀಡಲಿದೆ ಅನ್ನೋ ಕುತೂಹಲ ಎಲ್ಲರಿಗೂ ಇದೆ.