ಕಾಡು ಸೇರ್ಕೊಂಡ ಆನೆ, ಸಿಂಹಿಣಿ – ನುಡಿದಂತೆ ನಡೆದ ಪ್ರತಾಪ್
ಡ್ರೋನ್ ಅಭಿಮಾನಿಗಳು ಏನ್ ಹೇಳ್ತಾರೆ?

ಎಲ್ಲರ ಬಾಯಲ್ಲೂ ಮೋಸಗಾರ ಎಂದು ಕರೆಸಿಕೊಳ್ಳುತ್ತಿದ್ದ ಡ್ರೋನ್ ಪ್ರತಾಪ್ ಬಿಗ್ಬಾಸ್ ಗೆ ಹೋಗಿ ಬಂದ್ಮೇಲೆ ಕೋಟ್ಯಂತರ ಜನರ ಮನಸನ್ನ ಗೆದ್ದಿದ್ದಾರೆ. ಸದಾ ಒಳ್ಳೆಯ ಕೆಲಸದಿಂದಲೇ ಸುದ್ದಿಯಲ್ಲಿದ್ದಾರೆ. ಡ್ರೋನ್ ಪ್ರತಾಪ್ ಈವರೆಗೂ ಏನೆಲ್ಲ ಮಾತು ಕೊಟ್ಟಿದ್ದರೋ, ಅದೆಲ್ಲವನ್ನೂ ಪಾಲಿಸ್ತಾ ಬಂದಿದ್ದಾರೆ. ಹಾಗಾಗಿ ಪ್ರತಾಪ್ ಮೇಲೆ ಮೆಚ್ಚುಗೆಯ ಮಹಾಪುರವೇ ಹರಿದು ಬರ್ತಿದೆ. ಬಿಗ್ಬಾಸ್ ಹೋಗಿ ಬಂದ್ಮೇಲೆ ಪ್ರತಾಪ್ ಅನೇಕರ ಬಾಳಿಗೆ ಬೆಳಕಾಗಿದ್ದಾರೆ. ಇದೀಗ ಡ್ರೋನ್ ವೃದ್ಧೆಯ ಬಾಳಿಗೆ ಬೆಳಕಾಗಿದ್ದಾರೆ. ಪ್ರತಾಪ್ನ ಜನಸೇವೆಯನ್ನ ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಕೊಂಡಾಡ್ತಿದ್ರೆ, ಇನ್ನು ಕೆಲವರು ಬಿಗ್ಬಾಸ್ ಸೀಸನ್ ಹತ್ತರ ಉಳಿದ ಸ್ಪರ್ಧಿಗಳಿಗೆ ಟಾಂಗ್ ಕೊಡ್ತಾ ಇದ್ದಾರೆ. ಸಿಂಹಿಣಿ. ಆನೆ ಕಾಡು ಸೇರ್ಕೊಳ್ತು.. ಅಜ್ಜಿ ಪಾಲಿಗೆ ಡೋನ್ ಬೆಳಕಾದ್ರು ಅಂತಾ ಹೇಳ್ತಾ ಇದ್ದಾರೆ. ಡ್ರೋನ್ ಪ್ರತಾಪ್ ಯಾರಿಗೆ ಸಹಾಯ ಮಾಡಿದ್ರು? ಉಳಿದ ಸ್ಫರ್ಧಿಗಳ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಕಾರಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಒಲಿಂಪಿಕ್ಸ್ ಕಂಚಿನ ಕ್ವೀನ್ ಮನು – ಸೋತಿದ್ದ ಬಾಕರ್ ಗೆ ಭಗವದ್ಗೀತೆ ಪ್ರೇರಣೆ
ಬಿಗ್ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ಡ್ರೋನ್ ಪ್ರತಾಪ್ ಬಗ್ಗೆ ಸಾರ್ವತ್ರಿಕ ವಲಯದಲ್ಲಿಇದ್ದ ಅಭಿಪ್ರಾಯಗಳು ಬದಲಾಗಿವೆ. ಕಾಗೆ ಪ್ರತಾಪ್, ವಂಚಕ. ಮೋಸಗಾರ ಅಂತಾ ಕರಿತಾ ಇದ್ದವರ ಕಣ್ಣಿಗೆ ಇವತ್ತು ಡ್ರೋನ್ ಸಾಧಕನಂತೆ, ಇನ್ನೂ ಕೆಲವರ ಕಣ್ಣಿಗೆ ಬುದ್ದಿವಂತನಂತೆ, ಮತಷ್ಟು ಜನರ ಕಣ್ಣಿಗೆ ಮುಗ್ದನಂತೆ ಕಾಣ್ತಿದ್ದಾರೆ. ಒಂದರ್ಥದಲ್ಲಿ ಗಂಗೆಯಲ್ಲಿ ಮುಳುಗಿ ಎದ್ದರೆ ಮಾಡಿದ ಎಲ್ಲ ಪಾಪ ಪರಿಹಾರ ಆಗುತ್ತೆ ಎಂಬ ಮಾತಿನಂತೆ, ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದ ನಂತರ ಡ್ರೋನ್ ಪ್ರತಾಪ್ ಬದುಕು ಬದಲಾಗಿದೆ. ಸದಾ ಜನಸೇವೆಯಲ್ಲಿ ತೊಡಗಿಸಿಕೊಳ್ಳೊ ಮೂಲಕ ಕಷ್ಟದಲ್ಲಿದ್ದವರ ಬಾಳಿಗೆ ಬೆಳಕಾಗುತ್ತಿದ್ದಾರೆ ಡ್ರೊನ್.
ಹೌದು, ಬಿಗ್ಬಾಸ್ ಸೀಸನ್ 10 ರಲ್ಲಿ ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿದ್ರು. ಈ ವೇಳೆ ಬಂದ ದುಡ್ಡು, ಬಹುಮಾನವನ್ನ ಅರ್ಹರಿಗೆ ಕೊಡ್ತೇನೆ ಅಂತಾ ಹೇಳಿದ್ರು.. ರನ್ನರ್ ಅಪ್ ಆಗಿದ್ದ ಪ್ರತಾಪ್ಗೆ 10 ಲಕ್ಷ ರೂ. ಬಹುಮಾನದ ಜತೆಗೆ ಒಂದು ಎಲೆಕ್ಟ್ರಿಕ್ ಸ್ಕೂಟರ್ ಉಡುಗೊರೆಯಾಗಿ ನೀಡಲಾಗಿತ್ತು. ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪ್ರತಾಪ್ ಅಗತ್ಯವಿರುವ ಯುವಕನೊಬ್ಬನಿಗೆ ದಾನ ಮಾಡಿದ್ದರು. ಬಳಿಕ ಬಡ ವಿದ್ಯಾರ್ಥಿನಿಗೆ ಆರ್ಥಿಕ ಸಹಾಯ ಮಾಡಿದ್ರು.. ಅದಾದ್ಮೇಲೆ ಮಗ-ಸೊಸೆ ಇಲ್ಲದೆ ಇಬ್ಬರು ಮೊಮ್ಮಕ್ಕಳನ್ನು ಸಾಕುತ್ತಿದ್ದ ಅಜ್ಜಿಗೆ ಕೂಡ ಡ್ರೋನ್ ಪ್ರತಾಪ್ ಅವರು ಒಂದಷ್ಟು ತರಕಾರಿ- ಅಕ್ಕಿ-ಧಾನ್ಯಗಳನ್ನು ನೀಡಿದ್ದರು.. ಅಷ್ಟೇ ಅಲ್ಲದೇ ಆರ್ಥಿಕ ನೆರವು ಕೂಡ ನೀಡಿದ್ದರು. ಇದೀಗ ವೃದ್ದೆಯೊಬ್ಬರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ.
ಕಳೆದ ಜೂನ್ 11ರಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಡ್ರೋನ್ ಪ್ರತಾಪ್, ಆರ್ಥಿಕವಾಗಿ ಹಿಂದುಳಿದ, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕಣ್ಣಿನ ಆಪರೇಶನ್ ಮಾಡಿಸುವೆ ಎಂದು ಹೇಳಿದ್ದರು. ಈಗ ಡ್ರೋನ್ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳಿದ್ದರೂ ಕೂಡ ಗುಡಿಸಿಲಿನಲ್ಲಿ ಇದ್ದುಕೊಂಡು ವಾಸ ಮಾಡುತ್ತಿದ್ದ ಬಡ ಅಜ್ಜಿಯ ಕಣ್ಣಿನ ಆಪರೇಶನ್ ಮಾಡಿಸಿದ್ದಾರೆ. ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ನೂ.. ಕಣ್ಣಿನ ಶಸ್ತ್ರ ಚಿಕಿತ್ಸೆಯ ನಂತರ ಆ ಅಜ್ಜಿ ಪ್ರತಾಪ್ ಗೆ ಆಶಿರ್ವದಿಸಿದ್ದಾರೆ. ನನಗೆ ಈಗ ಸರಿಯಾಗಿ ಕಣ್ಣು ಕಾಣುತ್ತಿದೆ. ಇಷ್ಟು ದಿನ ನನಗೆ ಒಬ್ಬ ಮೊಮ್ಮಗ ಇದ್ದ, ಈಗ ಇನ್ನೊಬ್ಬ ಮೊಮ್ಮಗನಾಗಿ ನೀನು ಇದ್ದೀಯಾ. ನನಗೆ ನಿಜವಾಗಿಯೂ ಖುಷಿಯಾಗಿದೆ, ನಿನಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಒಳ್ಳೆಯದನ್ನು ಮಾಡಲಿ” ಎಂದು ಹರಸಿ ಹಾರೈಸಿದ್ದಾರೆ. ಡ್ರೋನ್ ಪ್ರತಾಪ್ ಅವರ ಈ ಮಹತ್ಕಾರ್ಯವನ್ನೂ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮೆಚ್ಚಿಕೊಂಡಿದ್ದಾರೆ. ಕಾರ್ತಿಕ್ ಮಹೇಶ್ ಟ್ರೋಫಿ ಗೆದ್ದಿರ ಬಹುದು ಆದರೆ ಡೋನ್ ಪ್ರತಾಪ್ ಕೋಟಿ ಜನರ ಮನಸನ್ನು ಗೆಲ್ಲುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ. ಬಿಗ್ ಬಾಸ್ ವೇದಿಕೆಯಲ್ಲಿ ನಿಮ್ಮಂತ ವ್ಯಕ್ತಿತ್ವಕ್ಕೆ ಗೆಲವು ಸಿಗಬೇಕಿತ್ತು ಎಂದು ಒಬ್ಬರು ಹೇಳಿದರೆ, ನಿಜವಾದ ಮಾನವೀಯ ಸೆಲೆಬ್ರಿಟಿ ಆಗಿ ಬೆಳೆಯುತ್ತಿರುವುದು ಪ್ರತಾಪ್ ಮಾತ್ರ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಆನೆ, ಸಿಂಹಿಣಿ ಎಲ್ಲಾ ಕಾಡು ಸೇರ್ಕೊಂಡ್ರು, ಪ್ರತಾಪ್ ಮಾತ್ರ ಅಜ್ಜಿಯ ಪಾಲಿಗೆ ದೇವರಾದರು ಎಂದು ಕೂಡ ಮತ್ತೊಬ್ಬರು ಹೇಳಿದ್ಧಾರೆ.
ಒಮ್ಮೆ ನಮ್ಮ ಹೆಸ್ರಿಗೆ ಕಳಂಕ ಬಂತು ಅಂದ್ರೆ, ಮತ್ತೆ ಯಾರು ನಮ್ಮನ್ನ ನಂಬಲ್ಲ. ಆ ಕಳಂಕದಿಂದ ಹೊರ ಬರೋದು ತುಂಬಾನೆ ಕಷ್ಟ. ಆದ್ರೆ ವಂಚಕ, ಮೋಸಗಾರ ಅಂತಾ ಕಳಂಕ ಹೊತ್ತುಕೊಂಡಿದ್ದ ಡ್ರೋನ್ ಪ್ರತಾಪ್ ಅನ್ನ ಯಾರು ನಂಬ್ತಿರ್ಲಿಲ್ಲ. ಆದ್ರೆ ಬಿಗ್ ಬಾಸ್ ಪ್ರತಾಪ್ಗೆ ಒಂದೊಳ್ಳೆ ವೇದಿಕೆಯಾಯ್ತು. ತನ್ನ ಮೇಲಿದ್ದ ಬ್ಯಾಡ್ ಇಮೇಜ್ ಹೋಗಲು ದೊಡ್ಮನೆಯೂ ಸಹಕಾರಿಯಾಯ್ತು. ಈಗ ಡ್ರೋನ್ ಪ್ರತಾಪ್ಗೆ ಕೋಟ್ಯಾಂತರ ಮಂದಿ ಅಭಿಮಾನಿಗಳಿದ್ದಾರೆ. ಜನರಿಟ್ಟ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಕೆಲಸ ಮಾಡುವುದರ ಜೊತೆಗೆ ಸ್ವಂತ ಕಂಪೆನಿ ಕಟ್ಟಬೇಕು ಎಂದುಕೊಂಡಿದ್ದ ಪ್ರತಾಪ್ ಮುಂದಿನ ದಿನಗಳಲ್ಲಿ ಏನು ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.