ಡ್ರೋನ್‌ ಪ್ರತಾಪ್‌ ಅಸಲಿ ಆಟ ಶುರು! ಬಿಕ್ಕಿಬಿಕ್ಕಿ ಅತ್ತ ನಮ್ರತಾ! – ದೊಡ್ಮನೆಯಲ್ಲಿ ಆಗಿದ್ದೇನು?

ಡ್ರೋನ್‌ ಪ್ರತಾಪ್‌ ಅಸಲಿ ಆಟ ಶುರು! ಬಿಕ್ಕಿಬಿಕ್ಕಿ ಅತ್ತ ನಮ್ರತಾ! – ದೊಡ್ಮನೆಯಲ್ಲಿ ಆಗಿದ್ದೇನು?

ಬಿಗ್‌ಬಾಸ್‌ ಮನೆಯೊಳಗಿನ ಆಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಬಿಗ್​ಬಾಸ್​ ಮನೆ ಎಂದರೆ ಅದರಲ್ಲಿ ಕಾದಾಟ, ಹೊಡೆದಾಟ, ಬಡಿದಾಟದ ತಾಣವೇ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಲ್ಲಿ ಏನು ಬೇಕಾದರೂ ನಡೆಯುತ್ತದೆ. ಯಾವಾಗ ಏನು ಆಗುತ್ತೆ ಅಂತಾ ಹೇಳಲು ಸಾಧ್ಯ ಇಲ್ಲ. ತುಂಬಾ ಕ್ಲೋಸ್‌ ಆಗಿದ್ದವರು ಯಾವಾಗ ತಿರುಗಿ ಬೀಳುತ್ತಾರೆ, ಶತ್ರುಗಳಂತೆ ಇದ್ದವರು ಯಾವಾಗ ಒಂದಾಗ್ತಾರೆ ಅಂತಾ ಹೇಳುವುದು ಕಷ್ಟ. ಇದೇ ಕಾರಣಕ್ಕೆ ಟಿಆರ್​ಪಿ ಕೂಡ ಹೆಚ್ಚಾಗುತ್ತದೆ. ಈ ಬೆನ್ನಲ್ಲೇ ಬಿಗ್‌ ಬಾಸ್‌ ಮನೆಗೆ ಇಬ್ಬರ ವೈಲ್ಡ್​ ಕಾರ್ಡ್​ ಎಂಟ್ರಿ ಆಗಿದ್ದು, ಅಸಲಿ ಆಟ ಶುರುವಾಗಿದೆ. ಈಗ ಮನೆಯಲ್ಲಿದ್ದ ಸ್ಪರ್ಧಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ನಾನಾ ಸರ್ಕಸ್‌ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಡ್ರೋನ್‌ ಪ್ರತಾಪ್‌ ನಮ್ರತಾ ಗೌಡಗೆ ಬಿಗ್‌ ಶಾಕ್‌ ಒಂದನ್ನು ನೀಡಿದ್ದಾರೆ.

ಇದನ್ನೂ ಓದಿ:ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಆಟ ಶುರು – ಬುದ್ಧಿವಂತನ ಮೇಲೆ ವಿನಯ್ ಟೀಮ್ ಕಣ್ಣು 

ಹೌದು, ಬಿಗ್‌ಬಾಸ್ ಸೀಸನ್ 10ರ ರಿಯಾಲಿಟಿ ಶೋ ಆರಂಭವಾಗಿ ಏಳು ವಾರ ಪೂರ್ಣಗೊಂಡಿದೆ. ಈಗ ಅಸಲಿ ಆಟ ಈಗ ಶುರುವಾಗಿದೆ. ವೈಲ್ಡ್ ಕಾರ್ಡ್​ ಕಂಟೆಸ್ಟೆಂಟ್‌ಗಳ ಖಡಕ್ ಎಂಟ್ರಿಯಾದ ಮೇಲೆ ಆಟ ಬದಲಾಗಿದೆ. ಈ ವಾರದ ನಾಮಿನೇಷನ್ ಪ್ರಕ್ರಿಯೆ ಮುಗಿದು ಇವತ್ತಿಂದ ವಾರದ ಸರಣಿ ಟಾಸ್ಕ್​ಗಳು ಶುರುವಾಗಲಿದೆ. ಇನ್ಮುಂದೆ ಗೇಮ್ ಕೂಡ ಟಫ್ ಆಗಲಿದೆ. ಮುಂದಿನ ದಿನಗಳಲ್ಲಿ ಆಟ ಮತ್ತಷ್ಟು ಟಫ್ ಆಗಲಿದೆ ಎಂಬ ಸೂಚನೆ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಸಿಕ್ಕಿದೆ. ಹೀಗಾಗಿ, ನಮ್ರತಾ ಗೌಡ ಅವರು ಎಂಟನೇ ವಾರದಲ್ಲಿ ಅವರು ಒಂದು ಶಪಥ ಮಾಡಿದ್ದಾರೆ. ಎಲ್ಲರ ಜೊತೆಯೂ ಬೆರೆತು ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳುವುದಾಗಿ ಹೇಳಿದ್ದರು. ಆದರೆ, ಅವರಿಗೆ ಈಗ ಮೊಸ ಆಗಿದೆ. ಅದೂ ಪ್ರತಾಪ್ ಕಡೆಯಿಂದಲೇ ಎನ್ನುತ್ತಿದೆ ಕಲರ್ಸ್ ಕನ್ನಡ ರಿಲೀಸ್ ಮಾಡಿರುವ ಪ್ರೋಮೋ.

ಕಳೆದ  ಭಾನುವಾರ ಡ್ರೋನ್‌ ಪ್ರತಾಪ್‌ ಅವರು ನಮ್ರತಾ ಅವರು ಸರಿಯಾಗಿ ಗೇಮ್ ಆಡುತ್ತಿಲ್ಲ, ಮತ್ತಷ್ಟು ಓಪನ್​ಅಪ್ ಆಗಬೇಕಿದೆ  ಎಂದು ಹೇಳಿದ್ದರು. ಇದೇ ಕಾರಣಕ್ಕೆ ನಮ್ರತಾ ಅವರು ಪ್ರತಾಪ್ ಅವರ ಟೀಂ ಸೇರಿದ್ದಾರೆ. ‘ಬೇರೆ ನಮ್ರತಾ ಇದಾರೆ, ಅದನ್ನು ಹೊರ ತರುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾನೆ’ ಎಂದು ಕಾರಣ ನೀಡಿ ನಮ್ರತಾ ಡ್ರೋನ್ ಪ್ರತಾಪ್ ಟೀಂ ಸೇರಿದ್ದರು! ಆದರೆ, ಈಗ ಆಗಿದ್ದೇ ಬೇರೆ.

‘ನೀವು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಯಾರನ್ನು ಹೊರಗೆ ಇಡಲು ಬಯಸುತ್ತೀರಿ’ ಎಂದು ಡ್ರೋನ್ ಪ್ರತಾಪ್​ಗೆ ಬಿಗ್ ಬಾಸ್ ಕೇಳಿದರು. ಇದಕ್ಕೆ ಅವರು ನಮ್ರತಾ ಹೆಸರನ್ನು ತೆಗೆದುಕೊಂಡಿದ್ದಾರೆ. ತಮ್ಮನ್ನು ನಂಬಿ ಬಂದ ನಮ್ರತಾರನ್ನೇ ಅವರಿಗೆ ಹಿನ್ನಡೆ ಮಾಡಿದ್ದಾರೆ. ಇದು ನಮ್ರತಾ ಬೇಸರಕ್ಕೆ ಕಾರಣ ಆಗಿದೆ. ‘ನನಗೆ ಆಡಬೇಕು. ಇಷ್ಟ ಇಲ್ಲ ಅದಕ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡು ಹೊಡೆದು ಹಾಕಿದೆ ಅಂತ ಅವನು ಹೇಳಬಹುದಿತ್ತು’ ಎಂದು ಕಣ್ಣೀರು ಹಾಕಿದ್ದಾರೆ ನಮ್ರತಾ.

ಕೆಲವರು ಪ್ರತಾಪ್ ಅವರನ್ನು ದೂಷಿಸಿದ್ದಾರೆ. ಅವರು ಈ ರೀತಿ ಮಾಡಬಾರದಿತ್ತು ಎಂದಿದ್ದಾರೆ. ಇನ್ನೂ ಕೆಲವರು ಪ್ರತಾಪ್ ನಿರ್ಧಾರವನ್ನು ಬೆಂಬಲಿಸಿದ್ದಾರೆ. ‘ಇಷ್ಟು ವಾರ ಅವರು ಆಡಲಿಲ್ಲ. ಈಗ ಅವರಿಗೆ ಎಚ್ಚರ ಆಗಿದೆ. ಅವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹರಲ್ಲ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ನಿಜಕ್ಕೂ ಆಗಿದ್ದೇನು? ಡ್ರೋನ್ ಪ್ರತಾಪ್ ಈ ರೀತಿ ಹೆಸರನ್ನು ತೆಗೆದುಕೊಳ್ಳೋಕೆ ಬೇರೆ ಏನಾದರೂ ಕಾರಣ ಇದೆಯೇ ಎಂಬುದಕ್ಕೆ ರಾತ್ರಿ  ಪ್ರಸಾರವಾಗುವ ಎಪಿಸೋಡ್ ನೋಡಬೇಕು.

Shwetha M