ಗಗನಾ ಯಶಸ್ಸಿಗೆ ಪ್ರತಾಪ್ ಹರಕೆ.. – ಉರುಳು ಸೇವೆ, ನೆಲದಲ್ಲೇ ಡ್ರೋನ್ ಊಟ
ರಿಯಲ್ ಲೈಫ್‌ನಲ್ಲೂ ಒಂದಾಗ್ತಾರಾ?

ʻಜೀ ಕನ್ನಡʼ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಭರ್ಜರಿ ಬ್ಯಾಚುಲರ್ಸ್ʼ ಸೀಸನ್ 2′ ಪ್ರೇಕ್ಷಕರನ್ನು ರಂಜಿಸುತ್ತಿದೆ. ಪ್ರತಿವಾರ ಬಾಚುಲರ್ಸ್‌ಗಳು ವಿಭಿನ್ನ ಪ್ರಯತ್ನದ ಮೂಲಕ ತಮ್ಮ ಮೆಂಟರ್ಸ್‌ನ ಇಂಪ್ರೆಸ್ ಮಾಡ್ತಾ ಬಂದಿದ್ದಾರೆ. ಈ ಶೋನಲ್ಲಿ ಆರಂಭದಿಂದಲೂ ಸದ್ದು ಮಾಡ್ತಿರೋ ಜೋಡಿ ಅಂದ್ರೆ ಅದು ಗಗನಾ ಹಾಗೂ ಡ್ರೋನ್ ಪ್ರತಾಪ್.. ಈ ವಾರ ಕೂಡ ಡ್ರೋನ್ ಪ್ರತಾಪ್ ಗಗನಾಗೆ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದಾರೆ. ಗಗನಾ ಯಶಸ್ಸು ಕಾಣಲಿ ಅಂತಾ ಡ್ರೋನ್ ಹರಕೆ ಹೊತ್ತಿದ್ದಾರೆ. ಇದ್ರ ಬೆನ್ನಲ್ಲೇ ಹೊಸ ಚರ್ಚೆಯೊಂದು ಹುಟ್ಟಿಕೊಂಡಿದೆ. ಗಗನಾ ಡ್ರೋನ್ ಮದ್ವೆ ಆಗ್ತಾರಾ ಅಂತಾ? ಈ ಬಗ್ಗೆ ಡಿಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: RCB 3ನೇ ಸ್ಲಾಟ್ ಮಯಾಂಕ್ ಗೆ – ಪಡಿಕ್ಕಲ್ ಸ್ಥಾನ ನಿಭಾಯಿಸ್ತಾರಾ ಕನ್ನಡಿಗ?
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ಪ್ರತಿ ಸಂಚಿಕೆಯಲ್ಲೂ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಿಸುತ್ತಿದೆ. ಈ ವಾರ ಬ್ಯಾಚುಲರ್ಸ್‌ಗೆ ಡೆಡಿಕೇಷನ್ ಟಾಸ್ಟ್ ನೀಡಲಾಗಿದೆ. ಈ ರೌಂಡ್‌ನಲ್ಲಿ ಬ್ಯಾಚುಲರ್ಸ್ ತಮ್ಮ ಮೆಂಟರ್ಸ್ ಸಾಧನೆ, ಏಳಿಗೆಗಾಗಿ ಪರಸ್ಪರ ಹರಕೆ, ತ್ಯಾಗಗಳಿಂದ ಸಾರ್ಥಕತೆ ಮೆರೆದಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಗಗನಾಗಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ಡ್ರೋನ್ ಪ್ರತಾಪ್ ಗಗನಾಗಾಗಿ ದೇವರ ಬಳಿ ಹರಕೆ ಹೊತ್ತು ಅದನ್ನ ತೀರಿಸಿದ್ದಾರೆ. ಡೋನ್ ಪ್ರತಾಪ್ ಅವರ ಹರಕೆ ಸದ್ಯ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಹೌದು, ಈ ಹಿಂದೆ ಹೆಲಿಕಾಪ್ಟರ್‌ನಲ್ಲಿ ಗಗನಾರನ್ನ ಕರ್ಕೊಂಡು ಹೋಗಿದ್ದ ಡ್ರೋನ್ ಸಾವಿರ ಅಡಿ ಎತ್ತರದಲ್ಲಿ ನಿಂತು ಅರಶಿನ ಕುಂಕುಮ ಕೊಟ್ಟಿದ್ರು. ಅದಾದ ಬಳಿಕ ಚಿತ್ರದುರ್ಗ ಮತ್ತು ಕೋಟೆಯನ್ನು ಸುತ್ತಿಸ್ಕೊಂಡು ಬಂದಿದ್ರು. ಬಳಿಕ ವೇದಿಕೆಯಲ್ಲೂ ಸಾಕಷ್ಟು ಸರ್‌ಪ್ರೈಸ್ ನೀಡಿದ್ರು.. ಈ ವಾರ ಕೂಡ ಗಗನಾಗೆ ಡ್ರೋನ್ ಬಿಗ್ ಸರ್‌ಪ್ರೈಸ್ ಕೊಟ್ಟಿದ್ದಾರೆ. ಡ್ರೋನ್ ಪ್ರತಾಪ್,ಜೀ ಕನ್ನಡದ ಮಹರ್ಷಿ ವಾಣಿ ಕಾರ್ಯಕ್ರಮ ನಡೆಸಿಕೊಡುವ ಆನಂದ್ ಗುರೂಜಿ ಅವರ ಲಕ್ಷ್ಮೀ ಭೂ ವರಾಹ ಸ್ವಾಮಿ ದೇವಸ್ಥಾನದಲ್ಲಿ ಗಗನಾಗಾಗಿ ವಿಶೇಷ ಹರಕೆ ಹೊತ್ತಿದ್ದಾರೆ. ಬಳಿಕ ಬಾವಿಯಿಂದ ನೀರು ಸೇದಿದ ಡ್ರೋನ ತಣ್ಣೀರು ಸ್ನಾನ ಮಾಡಿದ್ದಾಳೆ. ಬಿಳಿ ಪಂಚೆ ಧರಿಸಿ, ಲಕ್ಷ್ಮೀ ಭೂ ವರಾಹ ಸ್ವಾಮಿ ದೇಗುಲದಲ್ಲಿ ಸಾಷ್ಟಾಂಗ ನಮಸ್ಕಾರ ಹಾಕಿದ್ದಾರೆ. ಬಳಿಕ ಉರುಳು ಸೇವೆ ಮಾಡಿದ್ದು, ದೇವಿ ಬಳಿ ಗಗನಾ ಅವರ ಹೆಸರಿನಲ್ಲಿ ವಿಶೇಷ ಪೂಜೆ, ಅರ್ಚನೆ ಮಾಡಿಸಿದ್ದಾರೆ.
ಚಿತ್ರರಂಗದಲ್ಲಿ ಒಬ್ಬ ಒಳ್ಳೆಯ ನಟಿಯಾಗಿ ಗಗನಾ ಅವರು ಗುರುತಿಸಿಕೊಳ್ಳಬೇಕು ಎಂಬ ಹರಕೆ ಹೊತ್ತು, ನೆಲದಲ್ಲಿ ಪ್ರಸಾದ ಸೇವಿಸಿದ್ದಾರೆ. ಡೋನ್ ಪ್ರತಾಪ್ ಈ ಹರಕೆಯನ್ನು ನೋಡಿ ಗಗನಾ ಶಾಕ್ ಆಗಿದ್ದಲ್ಲದೇ ಭಾವುಕರಾಗಿದ್ದಾರೆ. ಇದ್ರ ಪ್ರೋಮೋವನ್ನ ಜೀಕನ್ನಡ ವಾಹಿನಿ ರಿಲೀಸ್ ಮಾಡಿದೆ. ಇದೀಗ ಈ ಪ್ರೋಮೋ ನೋಡಿದ ವೀಕ್ಷಕರು ನಾನಾ ಕಾಮೆಂಟ್ ಮಾಡಿದ್ದಾರೆ. ಡ್ರೋನ್ ಪ್ರತಾಪ್ ಗಗನಾರನ್ನಾ ನಿಜವಾಗಿಯೂ ಇಷ್ಟ ಪಡ್ತಾರಾ ಅಂತಾ ಕೆಲವರು ಕೇಳಿದ್ದಾರೆ. ಇನ್ನೂ ಕೆಲವರು ಗಗನಾ ಡ್ರೋನ್ ಪ್ರತಾಪ್ ಒಳ್ಳೆ ಜೋಡಿ.. ಇವರಿಬ್ರು ರಿಯಲ್ ಲೈಫ್ ನಲ್ಲೂ ಒಂದಾಗ್ಲಿ.. ಇವರ ಜೀವನ ಚೆನ್ನಾಗಿರುತ್ತೆ.. ಅಂತಾ ಕಾಮೆಂಟ್ ಮಾಡಿದ್ದಾರೆ.