ಗಿಚ್ಚಿ ಗಿಲಿಗಿಲಿಯಲ್ಲಿ ಡ್ರೋನ್ ಪ್ರತಾಪ್ ಎಂಟ್ರಿ – ಮೇಕಪ್ ನಲ್ಲಿ ಮಿರ ಮಿರ ಮಿಂಚಿತ ಡ್ರೋನ್ ನೋಡಿ ತುಕಾಲಿ ಸಂತು ಶಾಕ್

ಗಿಚ್ಚಿ ಗಿಲಿಗಿಲಿಯಲ್ಲಿ ಡ್ರೋನ್ ಪ್ರತಾಪ್ ಎಂಟ್ರಿ – ಮೇಕಪ್ ನಲ್ಲಿ ಮಿರ ಮಿರ ಮಿಂಚಿತ ಡ್ರೋನ್ ನೋಡಿ ತುಕಾಲಿ ಸಂತು ಶಾಕ್

ಬಿಗ್‌ಬಾಸ್ ರಿಯಾಲಿಟಿ ಶೋನ ರನ್ನರ್ ಅಪ್ ಆಗಿರು ಡ್ರೋನ್ ಪ್ರತಾಪ್ ಈಗ ಕಿರುತೆರೆಯ ಸ್ಟಾರ್ ಆಗುತ್ತಿದ್ದಾರೆ. ಬಿಗ್‌ಬಾಸ್ ಶೋನಲ್ಲಿ ದಾಖಲೆಯ ವೋಟ್ ಪಡೆದ ಡ್ರೋನ್ ಪ್ರತಾಪ್ ಮತ್ತೊಮ್ಮೆ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ. ‘ಗಿಚ್ಚಿ ಗಿಲಿಗಿಲಿ’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವ ಡ್ರೋನ್ ಪ್ರತಾಪ್ ನೋಡಿ ವೀಕ್ಷಕರು ಅಚ್ಚರಿಪಟ್ಟಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರತಾಪ್ ಅವರು ಈಗ ಮೇಕಪ್ ಹಚ್ಚಿಕೊಂಡು ಮಿರಮಿರ ಮಿಂಚುತ್ತಿದ್ದಾರೆ.

ಇದನ್ನೂ ಓದಿ: ಅಂದು ಕ್ರೀಡಾಸ್ಫೂರ್ತಿ ಬಗ್ಗೆ ಮಾತನಾಡಿದ್ದ ಬೆನ್‌ಸ್ಟೋಕ್‌ ಈಗ ಮಾಡಿದ್ದೇನು?- ಜಸ್ಪ್ರಿತ್ ಬುಮ್ರಾರನ್ನ ಸ್ಟಂಪ್ ಮಾಡೋಕೆ ಯತ್ನಿಸಿದ್ದು ಯಾಕೆ?

ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಮೂಲಕ ಡ್ರೋನ್ ಪ್ರತಾಪ್ ಫೇಮಸ್ ಆಗಿದ್ದಾರೆ. ಮೊದಲೆಲ್ಲ ಡ್ರೋನ್ ಕುರಿತಾದ ವಿವಾದದಿಂದ ಸುದ್ದಿ ಆಗುತ್ತಿದ್ದ ಅವರು ಬಿಗ್ ಬಾಸ್ ಶೋಗೆ ಬಂದ ಬಳಿಕ ಬೇರೆ ಇಮೇಜ್ ಪಡೆದುಕೊಂಡರು. ಅವರೊಳಗೆ ಒಬ್ಬ ಕಲಾವಿದ ಇದ್ದಾನೆ ಅನ್ನೋದು ಕೂಡಾ ಗೊತ್ತಾಗಿದೆ. ಈಗ ಡ್ರೋನ್ ಪ್ರತಾಪ್ ನಿಜವಾಗಿಯೂ ಕಲಾವಿದರಾಗಿದ್ದಾರೆ. ಝಗಮಗಿಸುವ ವೇದಿಕೆಯ ಮೇಲೆ ಅವರು ಹೆಜ್ಜೆ ಹಾಕಿದ್ದಾರೆ. ಗಿಚ್ಚಿ ಗಿಲಿಗಿಲಿ ಸೀಸನ್ 3 ಕಾರ್ಯಕ್ರಮದಲ್ಲಿ ಡ್ರೋನ್ ಡ್ಯಾನ್ಸ್ ಮಾಡಿದ್ದಾರೆ. ಅವರ ಹೊಸ ಅವತಾರ ನೋಡಿ ತುಕಾಲಿ ಸಂತೋಷ್ ಕೂಡಾ ಸ್ವತಃ ಶಾಕ್ ಆಗಿದ್ದಾರೆ. ಫುಲ್ ಮೇಕಪ್ ಹಚ್ಚಿಕೊಂಡು, ಸ್ಪೆಷಲ್ಲಾಗೇ ಎಂಟ್ರಿಕೊಟ್ಟ ಪ್ರತಾಪ್ ನೋಡಿ ತುಕಾಲಿ ಸಂತು ಅಚ್ಚರಿ ಪಟ್ಟಿದ್ದಾರೆ.

ಅದೇನೇ ಆಗಲಿ ಬಿಗ್‌ಬಾಸ್‌ ಮನೆಯಲ್ಲಿ ಸಿಂಪಲ್ ಆಗಿ ಇರುತ್ತಿದ್ದ ಪ್ರತಾಪ್ ಅವರು ಈಗ ಮೇಕಪ್ ಹಚ್ಚಿಕೊಂಡು ಮಿಂಚುತ್ತಿದ್ದಾರೆ. ಅವರ ಗೆಟಪ್ ಕೂಡಾ ಬದಲಾಗಿದೆ. ಒಂದು ಕಾಲದಲ್ಲಿ ಡ್ರೋನ್ ಪ್ರತಾಪ್ ಅವರನ್ನು ಎಲ್ಲರೂ ಟ್ರೋಲ್ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಅವರಿಗೂ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರನ್ನು ಬೆಂಬಲಿಸುವವರ ಸಂಖ್ಯೆ ಹೆಚ್ಚಾಗಿದೆ. ‘ಗಿಚ್ಚಿ ಗಿಲಿಗಿಲಿ 3’ ಕಾರ್ಯಕ್ರಮದ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಈ ಶೋನ ನಿರ್ಣಾಯಕರಾಗಿ ಶ್ರುತಿ, ಸಾಧು ಕೋಕಿಲ, ಕೋಮಲ್ ಇರಲಿದ್ದಾರೆ. ನಿರಂಜನ್ ಅವರಿಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ.

Sulekha