ಕಿಚ್ಚನ ನೀತಿಪಾಠದಿಂದ ಬದಲಾಯ್ತು ಬಿಗ್ ಬಾಸ್ ಸ್ಪರ್ಧಿಗಳ ಮನಸ್ಥಿತಿ – ಡ್ರೋನ್ ಪ್ರತಾಪ್ ಪರ ಶುರುವಾಯ್ತು ಟ್ರೆಂಡ್
ಟ್ರೋಲ್ ಮೂಲಕವೇ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದ ಡ್ರೋನ್ ಪ್ರತಾಪ್ ಇಮೇಜ್ ಈಗ ಫುಲ್ ಚೇಂಜ್ ಆಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 10 ಶುರುವಾಗಿ ಒಂದು ವಾರ ಕಳೆದಿದೆ. ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಹಲವು ವಿಚಾರಗಳ ಬಗ್ಗೆ ಸುದೀಪ್ ಮಾತನಾಡಿದ್ರು. ಇದಾದ ಬಳಿಕ ಬಿಗ್ ಬಾಸ್ ಮನೆ ಒಳಗೆ ಮತ್ತು ಹೊರಗೆ ಡ್ರೋನ್ ಪ್ರತಾಪ್ ಬಗ್ಗೆ ಮಾತನಾಡ್ತಿದ್ದಾರೆ.
ಇದನ್ನೂ ಓದಿ : ಡ್ರೋನ್ ವಿಚಾರವನ್ನೇ ಮುಂದಿಟ್ಟು ಗೇಲಿ ಮಾಡಿ ಸ್ಪರ್ಧಿಗಳ ತಮಾಷೆ – ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ಪ್ರತಾಪ್
ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್ ನಲ್ಲಿ ಡ್ರೋನ್ ಪ್ರತಾಪ್ ರನ್ನ ಟಾರ್ಗೆಟ್ ಮಾಡಿದ್ದ ಸ್ಪರ್ಧಿಗಳ ನಡೆಗೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದ್ರು. ಪದೇಪದೆ ಡ್ರೋನ್ ವಿಚಾರ ತೆಗೆದು ಗೇಲಿ ಮಾಡ್ತಿದ್ದ ತುಕಾಲಿ ಸಂತುಗೆ ಮಾತಲ್ಲೇ ಚಳಿ ಬಿಡಿಸಿದ್ರು ಮುಖ್ಯವಾಗಿ ಭಾಗ್ಯಶ್ರೀ, ತುಕಾಲಿ ಸಂತು, ಸ್ನೇಹಿತ್ ಮಾತಿನಿಂದ ಡ್ರೋನ್ ಪ್ರತಾಪ್ ಕಣ್ಣೀರು ಹಾಕುವಂತಾಯಿತು. ಮಾನವೀಯತೆ ಮೆರೆತು ಊಟ ಕೊಟ್ಟ ಪ್ರತಾಪ್ ಬೆಂಬಲಕ್ಕೆ ಭಾಗ್ಯಶ್ರೀ ನಿಲ್ಲಲೇ ಇಲ್ಲ, ಎಲ್ಲರನ್ನ ನಗಿಸಲು ತುಕಾಲಿ ಸಂತೋಷ್ ಪ್ರತಾಪ್ ಅವರನ್ನು ಹೀಯಾಳಿಸಿದ್ದರು. ಸ್ನೇಹಿತ್ ಅಂತೂ ಎಗರಾಡಿದ್ದರು. ಇದನ್ನೆಲ್ಲ ಗಮನಿಸಿದ್ದ ಬಿಗ್‌ಬಾಸ್ ಕಿಚ್ಚ ಸುದೀಪ್ ವಾರದ ಕತೆ ಕಿಚ್ಚನ ಜೊತೆ ಶೋನಲ್ಲಿ ಮನೆ ಮಂದಿಗೆ ನೀತಿ ಪಾಠ ಹೇಳಿಕೊಟ್ಟರು. ಅಲ್ಲದೆ, ಡ್ರೋನ್ ಪ್ರತಾಪ್ ನಗುವಿಗೆ ಕಾರಣರಾದರು. ಪ್ರತಾಪ್ ಸ್ಟೈಲ್ ಸಹ ಬದಲಾಯಿಸಿದರು. ಇದನ್ನ ಗಮನಿಸಿದ ಪ್ರೇಕ್ಷಕರು ಕಿಚ್ಚನಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಜೈ ಪ್ರತಾಪ್ ಅಂತ ಕಾಮೆಂಟ್ ಮೂಲಕ ಬೆಂಬಲ ಸೂಚಿಸುತ್ತಿದ್ದಾರೆ.
ಇನ್ನು ಕೆಲ ನೆಟ್ಟಿಗರು ತಪ್ಪು ಮಾಡೋದು ಸಹ ಆದ್ರೆ ಅವರು ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಬಂದಿದ್ದು, ಅವರ ವ್ಯಯಕ್ತಿಕ ವಿಚಾರ ನಿಂದನೆ ಸರಿಯಲ್ಲ ಅಂತ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇನ್ನೂ ಕೆಲವರು ಪ್ರತಾಪ್ ನಾವಿದ್ದಿವಿ ನೀವು ಧೈರ್ಯದಿಂದ ಆಟವಾಡಿ ಅಂತ ಬೆಂಬಲ ಸೂಚಿಸಿದ್ದಾರೆ. ಇದರಿಂದಾಗಿ ಮುಂದಿನ ಸಲ ಪ್ರತಾಪ್ ಓಟಿಂಗ್ ವಿಚಾರ ಬಂದಾಗ ಗೆಲ್ಲೋದು ಪಕ್ಕಾ ಅನಿಸುತ್ತಿದೆ. ಸದ್ಯ ಕಿಚ್ಚ ಬಂದು ಹೋದ್ಮೇಲೆ ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಸ್ಪರ್ಧಿಗಳ ಮನಸ್ಥಿತಿ ಬದಲಾಗಿದೆ. ಜೊತೆಗೆ ವೀಕ್ಷಕರು ಕೂಡ ಡ್ರೋನ್ ಪ್ರತಾಪ್ ಪರ ಮಾತನಾಡ್ತಿದ್ದಾರೆ. ಅಲ್ಲದೆ ವೋಟ್ ಫಾರ್ ಪ್ರತಾಪ್ ಅನ್ನೋ ಟ್ರೆಂಡ್ ಕೂಡ ಶುರುವಾಗಿದೆ.