ನಮ್ರತಾ ಮೇಲೆ ಸೇಡು ತೀರಿಸಿಕೊಂಡ್ರಾ ಪ್ರತಾಪ್ ?- ಟೀಮ್‌ನಿಂದ ಕಾರ್ತಿಕ್ ಹೊರಗಿಟ್ಟು ಡ್ರೋನ್ ಮೂರ್ಖತನ..!

ನಮ್ರತಾ ಮೇಲೆ ಸೇಡು ತೀರಿಸಿಕೊಂಡ್ರಾ ಪ್ರತಾಪ್ ?- ಟೀಮ್‌ನಿಂದ ಕಾರ್ತಿಕ್ ಹೊರಗಿಟ್ಟು ಡ್ರೋನ್ ಮೂರ್ಖತನ..!

ಬಿಗ್‌ಬಾಸ್ ಮನೆಯಲ್ಲಿ ಹಾರಾಟ, ಕಿರುಚಾಟ ಕೇಳಿದವರೆಲ್ಲರಿಗೂ ಸೌಮ್ಯ ಸ್ವಭಾವದ ಡ್ರೋನ್ ಪ್ರತಾಪ್ ಇಷ್ಟವಾಗಿದ್ದರು. ಡ್ರೋನ್ ಪ್ರತಾಪ್ ಬುದ್ಧಿವಂತಿಕೆಯೂ ವೀಕ್ಷಕರಿಗೆ ಇಷ್ಟವಾಗಿತ್ತು. ನ್ಯಾಯ-ಧರ್ಮದ ಪರವಾಗಿ ಪ್ರತಾಪ್ ಆಟವಾಡುತ್ತಾರೆ ಅಂತಾನೇ ಭಾವಿಸಿದವರಿಗೆ ಈ ವಾರ ಸಿಕ್ಕಾಪಟ್ಟೆ ನಿರಾಸೆಯಾಗಿದೆ. ಬಾರಿ ಪ್ರತಾಪ್ ತಗೊಂಡ ನಿರ್ಧಾರದ ಬಗ್ಗೆ ನೆಗೆಟಿವ್ ಅಭಿಪ್ರಾಯಗಳೇ ಜಾಸ್ತಿ ಕೇಳಿ ಬರುತ್ತಿವೆ.

ಇದನ್ನೂ ಓದಿ: ಡ್ರೋನ್‌ ಪ್ರತಾಪ್‌ ಅಸಲಿ ಆಟ ಶುರು! ಬಿಕ್ಕಿಬಿಕ್ಕಿ ಅತ್ತ ನಮ್ರತಾ! – ಡೊಡ್ಮನೆಯಲ್ಲಿ ಆಗಿದ್ದೇನು?

ಬಿಗ್‌ಬಾಸ್ ಮನೆಯೆಂದ ಮೇಲೆ ಎಲ್ಲರಿಗೂ ಒಂದು ಬಾರಿಯಾದರೂ ಕ್ಯಾಪ್ಟನ್ ಆಗಬೇಕೆಂಬ ಆಸೆಯಿರುತ್ತದೆ. ಹೀಗಾಗಿ ಕ್ಯಾಪ್ಟನ್ಸಿ ಟಾಸ್ಕ್ ತುಂಬ ಮಹತ್ವದಾದುದು. ಈ ಬಾರಿ ಕ್ಯಾಪ್ಟನ್ ಆದವರಿಗೆ ಹೆಚ್ಚಿನ ಅಧಿಕಾರ ಕೂಡ ಸಿಗುತ್ತದೆ. ಹೀಗಾಗಿ ಸ್ಪರ್ಧಿಗಳು ಕ್ಯಾಪ್ಟನ್ ಆಗುವ ಆಸೆಯಲ್ಲಿದ್ದರು. ಹೀಗಾಗಿಯೇ ಈ ಬಾರಿ ನಮ್ರತಾ ಕೂಡಾ ಡ್ರೋನ್ ಪ್ರತಾಪ್ ನಂಬಿ ಬಂದವರನ್ನು ಕೈ ಬಿಡಲ್ಲಮಎಂಬ ಗ್ಯಾರಂಟಿಯಿಂದಲೇ ಪ್ರತಾಪ್ ಟೀಮ್‌ಗೆ ಹೋಗಿದ್ದರು. ಇನ್ನು ಪ್ರತಾಪ್ ಕೂಡಾ ನಮ್ರತಾ ಬಳಿ ಕಿಚ್ಚನ ಚಪ್ಪಾಳೆ ಸಿಗುವ ಹಾಗೆ ಮಾಡ್ತೀನಿ, ಕ್ಯಾಪ್ಟನ್ ಮಾಡ್ತೀನಿ, ನಮ್ಮ ತಂಡಕ್ಕೆ ಬನ್ನಿ ಅಂತಾ ಸಾಕಷ್ಟು ಭರವಸೆ ಕೂಡಾ ಕೊಟ್ಟಿದ್ದರು. ಹೀಗಾಗಿ ನಮ್ರತಾ ಕೂಡಾ, ನನ್ನೊಳಗಡೆ ಬೇರೆ ನಮ್ರತಾ ಇದ್ದಾರೆ, ಅವರು ಹೊರಗಡೆ ಬರುವಂತೆ ಮಾಡ್ತೀನಿ ಅಂತ ಪ್ರತಾಪ್ ಹೇಳುತ್ತಿದ್ದ. ಹೀಗಾಗಿ ಅವನ ತಂಡಕ್ಕೆ ಬರುತ್ತೀನಿ ಅಂತ ಹೇಳಿಯೇ ಖುಷಿಯಲ್ಲೇ ಅವರ ತಂಡಕ್ಕೆ ಬಂದಿದ್ದರು. ಆದರೆ, ಪ್ರತಾಪ್ ಮಾಡಿದ್ದೇ ಬೇರೆ. ನಮ್ರತಾ ಗೌಡ ಕ್ಯಾಪ್ಟನ್ ಆಸೆಗೆ ಪ್ರತಾಪ್ ತಣ್ಣೀರು ಎರಚಿದ್ದಾರೆ.

ಆಟದಲ್ಲಿ ಚೆನ್ನಾಗಿ ಆಡಿಲ್ಲ ಅಂತ ಕಾರಣ ಕೊಟ್ಟು ನಮ್ರತಾ ಗೌಡ ಅವರನ್ನು ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಡೆ ಇಟ್ಟಿದ್ದಾರೆ ಡ್ರೋನ್ ಪ್ರತಾಪ್. ನಮ್ರತಾ ಗೌಡಗೆ ಮಾತು ಕೊಟ್ಟು ಮೋಸ ಮಾಡಿದ್ದು ತುಕಾಲಿ ಸ್ಟಾರ್ ಸಂತು, ವರ್ತೂರು ಸಂತೋಷ್, ಸಂಗೀತಾ, ವಿನಯ್ ಅವರಿಗೂ ಬೇಸರ ತಂದಿದೆ. ಇದು ವೀಕ್ಷಕರಿಗೂ ಕೂಡ ಬೇಸರ ತಂದಿದೆ. ಇದು ನಮ್ರತಾ ಮೇಲಿರುವ ಸೇಡಿನಿಂದಲೇ ಹೀಗೆ ಮಾಡಿದ್ದು, ನಂಬಿ ಬಂದವರಿಗೆ ಈ ರೀತಿ ದ್ರೋಹ ಮಾಡಬಾರದಿತ್ತು ಎಂದು ವೀಕ್ಷಕರು ಹೇಳುತ್ತಿದ್ದಾರೆ. ಇದರ ಜೊತೆಗೆ ಪ್ರತಾಪ್ ಮೇಲೆ ವೀಕ್ಷಕರಿಗೆ ಇನ್ನೊಂದು ವಿಚಾರಕ್ಕೂ ಬೇಸರ ಆಗಿದೆ. ಪ್ರತಾಪ್ ಅವರು ಕಾರ್ತಿಕ್‌ ಅವರನ್ನು ವಾರ ಪೂರ್ತಿ ಆಟ ಆಡದಂತೆ ಹೊರಗಡೆ ಇಡುತ್ತಾರೆ. ತನ್ನ ತಂಡದಲ್ಲಿ ಗಲಾಟೆ ಆಗೋದು ಬೇಡ ಎಂಬ ಕಾರಣ ಮುಂದಿಟ್ಟು ಪ್ರತಾಪ್ ಅವರು ಕಾರ್ತಿಕ್ ಅವರನ್ನು ಹೊರಗಡೆ ಇಡುತ್ತಾರೆ. ಇದು ಕೂಡಾ ವೀಕ್ಷಕರಿಗೆ ಬೇಸರ ತಂದಿದೆ. ಇದು ಪ್ರತಾಪ್ ಮಾಡಿರುವ ಮೂರ್ಖತನ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಇಲ್ಲಿ ತಂಡ ಗೆಲ್ಲೋದು ಮುಖ್ಯ. ಕೂಗೋದು ಕಾರ್ತಿಕ್ ಸ್ವಭಾವ. ಒಬ್ಬೊಬ್ಬರ ಆಟ ಒಂದೊಂದು ರೀತಿ ಇರುತ್ತದೆ. ಎಲ್ಲರೂ ಪ್ರತಾಪ್ ರೀತಿ ಆಟ ಆಡಿದ್ರೆ ಇಂದು ಪ್ರತಾಪ್ ಅವರಿಗೆ ಹೆಚ್ಚಿನ ಮತ ಸಿಗುತ್ತಲೇ ಇರಲಿಲ್ಲ. ಕಾರ್ತಿಕ್ ಕೂಗಾಟದಿಂದ ಅಂತಹ ಹಾನಿ ಏನೂ ಆಗಿಲ್ಲ. ಕಾರ್ತಿಕ್ ಅವರನ್ನು ಹೊರಗಿಟ್ಟಿದ್ದಕ್ಕೆ ಪ್ರತಾಪ್ ತಂಡ ಸೋತಿರಬಹುದು. ಅದರೆ ಪ್ರತಾಪ್ ಅವರು ಲೀಡರ್ ಆಗಿ ಟೀಂ ನಡೆಸದೆ ಇಲ್ಲಿ ವೈಯಕ್ತಿಕ ಆಟ ಆಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಕಾರ್ತಿಕ್ ಅವರು ಪ್ರಬಲ ಸ್ಪರ್ಧಿ. ಈ ವಾರ ಕಾರ್ತಿಕ್ ಅಬ್ಬರ ಇಲ್ಲ ಅಂದರೆ ಅವರು ಮುಂದಿನ ವಾರ ಡಲ್ ಎನಿಸಿ ಮನೆಯಿಂದ ಹೊರಗಡೆ ಹೋಗಲೂಬಹುದು ಎನ್ನೋದು ಪ್ರತಾಪ್ ಲೆಕ್ಕಾಚಾರ ಇರಬಹುದು. ನಮ್ರತಾ ಗೌಡ ಕ್ಯಾಪ್ಟನ್ ಆಗಿಲ್ಲ ಅಂದರೆ ಅವರು ಈ ಮನೆಯಲ್ಲಿ ಉಳಿಯುವ ಸಾಧ್ಯತೆ ಕಡಿಮೆ. ಮೊದಲಿನಿಂದಲೂ ಪ್ರತಾಪ್-ನಮ್ರತಾ ನಡುವೆ ಮನಸ್ತಾಪ ಇದೆ. ಅವಕಾಶ ಸಿಕ್ಕಾಗೆಲ್ಲ ಇವರಿಬ್ಬರು ಪರಸ್ಪರ ಒಬ್ಬರ ಮೇಲೆ ಇನ್ನೊಬ್ಬರು ನಾಮಿನೇಟ್ ಮಾಡುತ್ತ, ಆರೋಪ ಮಾಡುತ್ತಿರುತ್ತಾರೆ. ಈಗ ನಮ್ರತಾ ಮೇಲೆ ಪ್ರತಾಪ್ ಸೇಡು ತೀರಿಸಿಕೊಂಡ್ರಾ? ಎಂಬ ಲೆಕ್ಕಾಚಾರ ವೀಕ್ಷಕರಲ್ಲೂ ಇದೆ.

Sulekha