ಬಿಗ್‌ಬಾಸ್ ಮನೆ ಬುದ್ದಿವಂತ ಡ್ರೋನ್‌ಗೆ ಕಳಪೆ ಪಟ್ಟ –ಮೂರ್ಖತನಕ್ಕೆ ಬೆಲೆತೆರಲೇಬೇಕಿತ್ತು ಪ್ರತಾಪ್

ಬಿಗ್‌ಬಾಸ್ ಮನೆ ಬುದ್ದಿವಂತ ಡ್ರೋನ್‌ಗೆ ಕಳಪೆ ಪಟ್ಟ –ಮೂರ್ಖತನಕ್ಕೆ ಬೆಲೆತೆರಲೇಬೇಕಿತ್ತು ಪ್ರತಾಪ್

ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಬುದ್ದಿವಂತನಾಗಿ ತಮ್ಮ ಆಟ ಆಡುತ್ತಿದ್ದರು. ಹೀಗಾಗಿ ವೀಕ್ಷಕರಿಗೂ ಡ್ರೋನ್ ಪ್ರತಾಪ್ ಆಟ ಇಷ್ಟವಾಗುತ್ತಿತ್ತು. ಆದರೆ, ಈ ವಾರ ಡ್ರೋನ್ ಪ್ರತಾಪ್ ಮಾಡಿರುವ ದಡ್ಡತನ ಮತ್ತು ಮೂರ್ಖತನಕ್ಕೆ ಬೆಲೆ ಕಟ್ಟಲೇಬೇಕಾಗಿದೆ. ಡ್ರೋನ್ ಪ್ರತಾಪ್ ಈ ವಾರದ ಕಳಪೆ ಪಟ್ಟ ಹೊತ್ತು ಬಿಗ್‌ಬಾಸ್ ಮನೆಯ ಜೈಲು ಸೇರಿದ್ದಾರೆ.

ಇದನ್ನೂ ಓದಿ: ನಮ್ರತಾ ಮೇಲೆ ಸೇಡು ತೀರಿಸಿಕೊಂಡ್ರಾ ಪ್ರತಾಪ್ ?- ಟೀಮ್‌ನಿಂದ ಕಾರ್ತಿಕ್ ಹೊರಗಿಟ್ಟು ಡ್ರೋನ್ ಮೂರ್ಖತನ..!

ಬಿಗ್‌ಬಾಸ್ ಶುರುವಾದ ಮೇಲೆ ವೀಕ್ಷಕರು ಡ್ರೋನ್ ಪ್ರತಾಪ್ ನ ಆಟವನ್ನು ಮೆಚ್ಚಿಕೊಂಡಿದ್ದರು. ಡ್ರೋನ್ ಪ್ರತಾಪ್ ನಿರ್ಧಾರ ಕೂಡಾ ಅಷ್ಟೇ ಬುದ್ದಿವಂತಿಕೆಯಿಂದ ಕೂಡಿರುತ್ತಿತ್ತು. ಜೊತೆಗೆ ವಾರದ ಕಥೆ ಕಿಚ್ಚನ ಜೊತೆಯಲ್ಲೂ ಸುದೀಪ್ ಕೂಡಾ ಡ್ರೋನ್ ಪ್ರತಾಪ್ ಬುದ್ದಿವಂತಿಕೆಯನ್ನು ಪ್ರಶಂಸೆ ಮಾಡುತ್ತಿದ್ದರು. ಅತಿ ಜೋರು ಅಲ್ಲದ, ತಪ್ಪಾದಾಗ ಪ್ರಶ್ನೆ ಮಾಡಿ ನ್ಯಾಯ ಕೇಳುತ್ತಿದ್ದ, ಯಾರ ತಂಟೆಗೂ ಹೋಗದೆ ತನ್ನದೇ ಆಟ ಆಡುತ್ತಿದ್ದ ಪ್ರತಾಪ್ ಈ ವಾರ ಅತಿ ಬುದ್ದಿವಂತಿಕೆ ತೋರಿಸಲು ಹೋಗಿ ಮೂರ್ಖತನ ತೋರಿದ್ದರು. ಈ ವಾರ ಒಂದು ತಂಡದ ನಾಯಕನಾಗಿ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವಲ್ಲಿ ಎಡವಿದ್ದರು. ಓವರ್ ಕಾನ್ಫಿಡೆನ್ಸ್‌ನಲ್ಲಿ ಪ್ರತಾಪ್ ತಂಡದ ನಾಯಕನಾಗಿ ಹಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಿಂದ ಅವರಿಗೆ ಹಾಗೂ ಅವರ ತಂಡಕ್ಕೆ ಹಿನ್ನಡೆ ಆಗಿದೆ.

ಕಾರ್ತಿಕ್ ಅವರನ್ನು ಗೇಮ್‌ನಿಂದ ಹೊರಗೆ ಇಟ್ಟಿದ್ದು, ನಿನ್ನನ್ನೇ ನಂಬಿ ಬಂದಿದ್ದೇನೆ ಎಂದು ನಮ್ರತಾ ಹೇಳಿದ್ದರೂ ಕೂಡಾ ನಮ್ರಾತಾರನ್ನೇ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗಿಟ್ಟಿದ್ದು, ತಂಡದ ಸೋಲಿಗೆ ಕಾರಣವಾಗಿದ್ದು ಸೇರಿದಂತೆ ಈ ವಾರ ಬರೀ ಮಿಸ್ಟೇಕ್‌ಗಳೇ ಪ್ರತಾಪ್ ಕಡೆಯಿಂದ ಜಾಸ್ತಿಯೇ ಇತ್ತು ಎನ್ನಲಾಗ್ತಿದೆ. ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್‌ಗೆ ಕಳಪೆ ಪಟ್ಟ ಸಿಕ್ಕಿದೆ. ಈ ಎಲ್ಲ ಕಾರಣ ನೀಡಿ ಸ್ಪರ್ಧಿಗಳು ಒಮ್ಮತದಿಂದ ಡ್ರೋನ್‌ಗೆ ಕಳಪೆ ಪಟ್ಟ ನೀಡಿದ್ದಾರೆ. ಇನ್ನು ಪ್ರೋಮೋದಲ್ಲಿ ತನಿಷಾ ಕಾಣಿಸಿಕೊಂಡಿದ್ದು, ವೀಕ್ಷಕರು ಸಂತಸಗೊಂಡಿದ್ದಾರೆ.

Sulekha