ಲೈಸೆನ್ಸ್ ಇಲ್ಲದೆ ಪ್ರತಾಪ್ ಗಿಲಿಗಿಲಿ! – ದುಬೈಗೆ ಹಾರಿದ್ದೇಕೆ ಡ್ರೋನ್?
ಬಿಗ್ ಬಾಸ್ ಕನ್ನಡ’ ಸೀಸನ್ 10ರ ರಿಯಾಲಿಟಿ ಶೋನಿಂದ ಆಚೆ ಬಂದಮೇಲೆ ‘ಡ್ರೋನ್’ ಪ್ರತಾಪ್ ಜನಪ್ರಿಯತೆ ಹೆಚ್ಚಾಗುತ್ತಲೇ ಇದೆ. ಸೋಶಿಯಲ್ ಮೀಡಿಯಾದಲ್ಲೂ ಡ್ರೋನ್ ಪ್ರತಾಪ್ ಹವಾ ಜಾಸ್ತಿಯಾಗಿದೆ.. ದೊಡ್ಮನೆಗೆ ಹೋಗಿ ಬಂದ ನಂತ್ರ ಪ್ರತಾಪ್ ಅದೇ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ಗಿಚ್ಚಿಗಿಲಿಗಿಲಿಯಲ್ಲಿ ಕಾಣಿಸಿಕೊಂಡರು. ಆದ್ರೆ ಈಗ ಡ್ರೋನ್ ಗಿಚ್ಚಿಗಿಲಿಗಿಲಿಯಲ್ಲೂ ಕಾಣಿಸ್ತಿಲ್ಲ.. ಇದೀಗ ಹೊಸ ಸಂಕಷ್ಟ ಬೇರೆ ಶುರುವಾಗಿದೆ. ಪ್ರತಾಪ್ ವಿರುದ್ದ ಪ್ರಬಲ ಸಾಕ್ಷಿ ಬೇರೆ ಸಿಕ್ಕಿದ್ಯಂತೆ.. ಅದೇನು ಹೊಸ ಕೇಸ್? ಏನು ಸಾಕ್ಷಿ? ಗಿಚ್ಚಿಗಿಲಿಗಿಲಿಯಲ್ಲಿ ಯಾಕೆ ಕಾಣಿಸ್ತಾ ಇಲ್ಲ? ಈ ಬಗ್ಗೆ ಮಾಹಿತಿ ಇಲ್ಲಿದೆ..
ಇದನ್ನೂ ಓದಿ: ಸ್ವಾಭಿಮಾನ ಉಳಿಸೊ ಕೆಲಸ ಮಾಡಿ! – ಸುಮಲತಾ ಅಂಬರೀಶ್ ಗೆ ಖಡಕ್ ಎಚ್ಚರಿಕೆ ಕೊಟ್ಟ ಶಾಸಕ ನರೇಂದ್ರ ಸ್ವಾಮಿ
ಬಿಗ್ ಬಾಸ್ ಕನ್ನಡ ಸೀಜನ್ 10 ಮುಗಿದು ಹಲವು ವಾರಗಳೇ ಕಳೆದಿವೆ.. ಆದ್ರೆ ಈ ಬಾರಿ ಸ್ಥರ್ಧಿಗಳ ಹವಾ ಮಾತ್ರ ಕಡಿಮೆಯಾಗುತ್ತಿಲ್ಲ. ಜನರು ಕೂಡ ಬಿಗ್ ಬಾಸ್ ಸ್ಪರ್ಧಿಗಳ ಗುಂಗಿನಿಂದ ಹೊರ ಬಂದಿಲ್ಲ. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸ್ಪರ್ಧಿಗಳಿಗೆ ಅಭಿಮಾನ ತೋರಿಸುತ್ತಿದ್ದಾರೆ. ಹೀಗಾಗಿ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿಗಳು ಸಖತ್ ಹೈಪ್ ಕ್ರಿಯೆಟ್ ಮಾಡಿದ್ದು, ನಿರಂತವಾಗಿ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಮುಗಿದ ಮೇಲೆ ಕೆಲ ಸ್ಪರ್ಧಿಗಳು ಕಲರ್ಸ್ ಕನ್ನಡದ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿಗೆ ಎಂಟ್ರಿ ಕೊಟ್ಟಿದ್ರು.. ಇದ್ರಲ್ಲಿ ಡ್ರೋನ್ ಪ್ರತಾಪ್ ಕೂಡ ಇದ್ರು.. ಪ್ರೋಮೋ ಮತ್ತು ಕೆಲವು ಎಪಿಸೋಡ್ ನಲ್ಲೂ ಡ್ರೋನ್ ಸಖತ್ತಾಗಿಯೇ ಮಿಂಚಿತ್ತು. ತಡವರಿಸಿಕೊಂಡೇ ಸ್ಕಿಟ್ ಮಾಡಿದರೂ, ಅದು ಫನ್ನಿ ಫನ್ನಿಯಾಗಿಯೇ ಇತ್ತು. ಆದ್ರೆ ಈಗ ಪ್ರತಾಪ್ ರಿಯಾಲಿಟಿ ಶೋ ಗಿಚ್ಚಿಗಿಲಿಗಿಲಿಯಲ್ಲಿ ಕಾಣ್ತಾ ಇಲ್ಲ.
ಡ್ರೋನ್ ಜೊತೆಗೇ ವೇದಿಕೆ ಏರಿದ್ದ ಇಶಾನಿ ಕೆಲವು ಕಂತುಗಳಲ್ಲಿ ಕಾಣಿಸಿಕೊಳ್ಳದೇ ಇದ್ರೂ, ಮತ್ತೆ ಅವರ ಆಗಮನ ಆಗಿದೆ. ಆದರೆ, ಡ್ರೋನ್ ಪ್ರತಾಪ್ ಮಾತ್ರ ಮಿಸ್ ಆಗಿದ್ದಾರೆ. ಡ್ರೋನ್ ಎಲ್ಲಿ ಹಾರಿ ಹೋಯ್ತು ಅಂತಾ ಅಭಿಮಾನಿಗಳು ಕೇಳ್ತಾ ಇದ್ದಾರೆ.. ಇದೀಗ ಡ್ರೋನ್ ಕಾಣದೇ ಇರೋದಕ್ಕೆ ಅವರ ಆಪ್ತರು ಬೇರೆಯದ್ದೇ ರೀತಿಯಲ್ಲಿ ಕಾರಣ ನೀಡಿದ್ದಾರೆ. ಡ್ರೋನ್ ಪ್ರತಾಪ್ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೂ, ಅವರು ನೂರಕ್ಕೆ ನೂರರಷ್ಟು ತೊಡಗಿಕೊಳ್ಳುತ್ತಾರೆ. ಆದರೆ, ಅವರ ಒತ್ತಡದ ಕೆಲಸದಿಂದಾಗಿ ತಾಲೀಮಿನಲ್ಲಿ ಭಾಗಿಯಾಗಲು ಆಗುತ್ತಿಲ್ಲ. ಜೊತೆಗೆ ಸದ್ಯ ಅವರು ದುಬೈನಲ್ಲಿ ಇದ್ದಾರೆ. ಹಾಗಾಗಿ ಗಿಚ್ಚಿಗಿಲಿಗಿಲಿಗೆ ಅವರು ಗೈರಾಗಿದ್ದಾರೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಡ್ರೋನ್ ಪ್ರತಾಪ್ ಗೆ ಸಂಕಷ್ಟಗಳು ಬೆನ್ನು ಬಿಡುವಂತೆ ಕಾಣ್ತಾ ಇಲ್ಲ.. ಡ್ರೋನ್ ಪ್ರತಾಪ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಡ್ರೋನ್ ಹಾರಿಸಿ, ಹಾರಿಸಿ ಸಖತ್ ಫೇಮಸ್ ಆಗಿದ್ದ ಡ್ರೋನ್ ಪ್ರತಾಪ್ ಅವರ ಬಳಿ ಡ್ರೋನ್ ಹಾರಾಟಕ್ಕೆ ಲೈಸೆನ್ಸ್ ಇಲ್ಲವಂತೆ. ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷಿ ಸಿಕ್ಕಿದ್ಯಂತೆ.. ಹೌದು, ಕಳೆದ ಫೆಬ್ರವರಿಯಲ್ಲಿ ಪ್ರತಾಪ್ ವಿರುದ್ಧ ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರತಾಪ್ ಅವರು ಲೈಸೆನ್ಸ್ ಪಡೆಯದೇ ಡ್ರೋನ್ ಹಾರಾಟ ಮಾಡ್ತಿದ್ದಾರೆ. ಹಾರಾಟ ಮಾಡುವುದು ಅಷ್ಟೇ ಅಲ್ಲದೆ ಮಾರಾಟ ಕೂಡ ಮಾಡ್ತಿದ್ದಾರೆಂದು ದೂರು ದಾಖಲಾಗಿತ್ತು.
ಡ್ರೋನ್ ಪ್ರತಾಪ್ ವಿರುದ್ಧ ನೀಡಿದ ದೂರಿನ ಅನ್ವಯ ಡಾ.ಪ್ರಯಾಗ್ & ಟೀಂ RTIನಲ್ಲಿ ಲೈಸೆನ್ಸ್ ಬಗ್ಗೆ ಅರ್ಜಿ ಸಲ್ಲಿಸಿತ್ತು. ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಷನ್ ಗೆ ಆರ್.ಟಿ.ಐನಲ್ಲಿ ಈ ಬಗ್ಗೆ ಮಾಹಿತಿ ನೀಡಲು ಕೋರಲಾಗಿತ್ತು. ಇದೀಗ RTI ಮಾಹಿತಿ ಬಂದಿದೆ.. ಈ ಮಾಹಿತಿ ಪ್ರಕಾರ ಪ್ರತಾಪ್ ಬಳಿ ಯಾವ ಲೈಸನ್ಸ್ ಕೂಡ ಇಲ್ಲ ಅನ್ನೋ ಸತ್ಯ ಬಹಿರಂಗವಾಗಿದೆ. RTI ನೀಡಿರುವ ಮಾಹಿತಿ ಪ್ರಕಾರ ಡ್ರೋನ್ ಪ್ರತಾಪ್ ಅವರು ಡ್ರೋನ್ ಹಾರಿಸಲಿಕ್ಕೆ, ಡ್ರೋನ್ ತಯಾರಿಸಲಿಕ್ಕೆ, ಮಾರಾಟ ಮಾಡಲು ಸಾಧ್ಯವಿಲ್ಲ. ಅವರು ಅಧಿಕೃತವಾಗಿ ಲೈಸೆನ್ಸ್ ಪಡೆಯದ ಹೊರತು ಈ ರೀತಿಯ ಚಟುವಟಿಕೆಯಲ್ಲಿ ಭಾಗಿಯಾಗುವುದು ತಪ್ಪಾಗುತ್ತದೆ ಅಂತಾ ಗೊತ್ತಾಗಿದೆ.
ಬಿಗ್‌ಬಾಸ್‌ನಲ್ಲಿ ಡ್ರೋನ್ ಬಗ್ಗೆ ಸಾಕಷ್ಟು ಕನಸು ಕಟ್ಟಿಕೊಂಡು ಪ್ರತಾಪ್ ಮಾತನಾಡುತ್ತಿದ್ದರು. ಇದೀಗ ಡ್ರೋನ್ ಪ್ರತಾಪ್ ಅವರ ಬಳಿ ಲೈಸೆನ್ಸ್ ಇಲ್ಲ ಅನ್ನೋ ಮಾಹಿತಿ ಬಯಲಾಗಿರೋದು ಕುತೂಹಲಕ್ಕೆ ಕಾರಣವಾಗಿದೆ.. ಇಷ್ಟಕ್ಕೂ ಏನೇ ಮಾಡಿದ್ರೂ ಹಂಡ್ರೆಡ್ ಪರ್ಸೆಂಟ್ ತೊಡಗಿಸಿಕೊಳ್ತೀನಿ ಎಂದು ಹೇಳಿಕೊಳ್ಳುವ ಪ್ರತಾಪ್ , ಕನಿಷ್ಟ ಪಕ್ಷ ಡ್ರೋನ್ ಹಾರಿಸಲು ಲೈಸೆನ್ಸ್ ಬೇಕು ಅಂತ ಗೊತ್ತಿಲ್ಲದಷ್ಟು ದಡ್ಡ ಅಂತ ಒಪ್ಕೊಳ್ಳೋದುಕಷ್ಟ.